ತುಮಕೂರು: ಈ ಹಿಂದೆ ಸಿಎಂ ಮಾಧ್ಯಮಗಳ ವಿರುದ್ಧ ಮುನಿಸಿಕೊಂಡಿದ್ದರು. ಈಗ ತನ್ನ ವಿರುದ್ಧ ಸುದ್ದಿ ಮಾಡಿದ್ದಕ್ಕೆ ಡಿಸಿಎಂ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.
ಬಿಜೆಪಿ ಬಾವುಟ ತೆರವುಗೊಳಿಸಲು ನೋಟಿಸ್ ಜಾರಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸುಳ್ಳು ಸುದ್ದಿ ಮಾಡುವುದನ್ನು ನಿಲ್ಲಿಸಿ ಎಂದು ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.
Advertisement
Advertisement
ಕೊರಟಗೆರೆಯ ಚಿನ್ನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಯಾರಿಗೂ ನೋಟಿಸ್ ನೀಡಿಲ್ಲ. ಆ ವಿಚಾರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಆ ಬಾವುಟ ನಾನು ನೋಡೇ ಇಲ್ಲ ಎಂದು ಹೇಳಿದರು.
Advertisement
ಗ್ರಾಮ ಪಂಚಾಯತಿ ಪಿಡಿಓ ನೀಡಿದ ನೋಟಿಸ್ ಇದ್ದರೂ ಅದನ್ನು ನಿರಾಕರಿಸಿದ ಪರಮೇಶ್ವರ್, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಬಾವುಟ ಹಾಕಿಕೊಳ್ಳಬಹುದು. ಅದಕ್ಕೆ ಯಾರು ಏನು ಮಾಡೋಕೆ ಆಗಲ್ಲ. ನಮ್ಮ ಪಕ್ಷದವರು ಬಾವುಟ ಹಾಕಿಕೊಳ್ಳುತ್ತಾರೆ ಅದಕ್ಕೆ ಏನ್ ಮಾಡಕ್ಕೆ ಆಗುತ್ತೆ. ಈ ವಿಚಾರದಲ್ಲಿ ಯಾರೂ ನೋಟಿಸ್ ಕೊಟ್ಟಿಲ್ಲ. ಈ ರೀತಿಯ ಘಟನೆ ನಡೆಯದೇ ಇದ್ದರೂ ಸುಳ್ಳು ಸುದ್ದಿ ಮಾಡಿದ್ದು ಸರಿಯಿಲ್ಲ ಎಂದು ಹೇಳಿದರು.
Advertisement
ಇದೇ ವೇಳೆ ಕೆ.ಎನ್ ರಾಜಣ್ಣರ ಪುತ್ರ ಆರ್.ರಾಜೇಂದ್ರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ ವಿಚಾರ ಬಗ್ಗೆ ಕೇಳಿದಾಗ, ಅದಕ್ಕೂ ನನಗೂ ಸಂಬಂಧ ಇಲ್ಲ. ಆ ವಿಚಾರದಲ್ಲಿ ನಾನು ಏನೂ ಹೇಳಲ್ಲ ಎಂದು ಹೇಳಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]