Connect with us

Chikkaballapur

ತುಮಕೂರು ಮಾಜಿ ಮೇಯರ್ ಹತ್ಯೆ: ಆರೋಪಿಗಳು ಪೊಲೀಸರಿಗೆ ಶರಣು

Published

on

ಚಿಕ್ಕಬಳ್ಳಾಪುರ: ತುಮಕೂರಿನ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣದ ಮೂಲ ರೂವಾರಿಯಾಗಿದ್ದ ರೌಡಿಶೀಟರ್ ಸುಜಯ್ ಭಾರ್ಗವ್ ಅಲಿಯಾಸ್ ಸುಜಿ ಹಾಗೂ ಆತನ ಸಹಚರರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.

ಭಾನುವಾರ ತುಮಕೂರು ನಗರದ ಬಟವಾಡಿ ಸೇತುವೆ ಬಳಿ ಬೆಳ್ಳಂಬೆಳಗ್ಗೆ ಮಾಜಿ ಮೇಯರ್ ಗಡ್ಡರವಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್ ಸುಜಯ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಪೊಲೀಸರು ಸಹ ಸುಜಯ್ ಹಾಗೂ ಆತನ ಸಹಚರರೇ ಹತ್ಯೆ ಮಾಡಿದ್ದರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಆರೋಪಿಗಳಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು. ರಾಜಕಾರಣಿಗಳ ಒತ್ತಡದಿಂದ ಸುಜಯ್ ಮೇಲೆ ಎನ್‍ಕೌಂಟರ್ ಮಾಡುವ ಸುದ್ದಿಯೂ ಸಹ ಹಬ್ಬಿತ್ತು.

ಪೊಲೀಸರ ಎನ್‍ಕೌಂಟರ್ ನಿಂದ ತಪ್ಪಿಸಿಕೊಳ್ಳಲು ಸುಜಯ್ ಹಾಗೂ ಆತನ ಸಹಚರರು ತಲೆ ಮರೆಸಿಕೊಂಡಿದ್ದರು. ಅಲ್ಲದೇ ಆರೋಪಿಗಳ ಬಲೆಗೆ ಪೊಲೀಸರು ಮೂರು ವಿಶೇಷ ತಂಡಗಳನ್ನು ಸಹ ರಚಿಸಿದ್ದರು. ಇದಲ್ಲದೇ ಸೋಮವಾರ ಆರೋಪಿಗಳು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗುತ್ತಾರೆ ಎನ್ನುವ ಕಾರಣದಿಂದ ಪೊಲೀಸರು ನ್ಯಾಯಾಲಯದ ಆವರಣದಲ್ಲಿ ಕಾದು ಕುಳಿತಿದ್ದರು. ಆದರೆ ಇಂದು ಸುಜಯ್ ಸೇರಿದಂತೆ ಇತರೆ ಆರೋಪಿಗಳು ಸ್ವತಃ ಗೌರಿಬಿದನೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.

ಏನಿದು ಪ್ರಕರಣ?
ಭಾನುವಾರ ಬೆಳ್ಳಂಬೆಳಗ್ಗೆ 8 ಗಂಟೆಯ ಸುಮಾರಿಗೆ ರವಿ ಬಟವಾಡಿ ಸೇತುವೆ ಬಳಿ ಟೀ ಕುಡಿಯುತ್ತಾ ನಿಂತಿದ್ದರು. ಈ ವೇಳೇ ಟಾಟಾ ಏಸ್‍ನಲ್ಲಿ ಬಂದಿದ್ದ 7 ಜನ ದುಷ್ಕರ್ಮಿಗಳು ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಸಿದರೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ರವಿಯ ತಲೆಗೆ ಹೊಡೆದಿದ್ದಾರೆ. ಮಾರಕಾಸ್ತ್ರಗಳ ದಾಳಿಯಿಂದಾಗಿ ತಲೆ ಛಿದ್ರ ಛಿದ್ರವಾಗಿ ಸ್ಥಳದಲ್ಲೇ ರವಿ ಸಾವನ್ನಪ್ಪಿದ್ದರು. ರವಿ ಸಾವನ್ನಪ್ಪುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಈ ಹಿಂದೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ರವಿ, ಕಳೆದ 10 ವರ್ಷಗಳಿಂದ ಜೆಡಿಎಸ್ ಪಕ್ಷ ಕಾರ್ಯಕರ್ತನಾಗಿದ್ದರು. ಕಳೆದ 6 ತಿಂಗಳ ಹಿಂದೆಯಷ್ಟೇ ಜೆಡಿಎಸ್‍ನಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2015 ರಲ್ಲಿ ಹಟ್ಟಿ ಮಂಜಣ್ಣ ಕೊಲೆ ನಡೆದಿದ್ದು, ಅದರಲ್ಲಿ ರವಿಯ ಕೈವಾಡವಿತ್ತು. ಹೀಗಾಗಿ ಹಟ್ಟಿ ಮಂಜನ ಸಹಚರರೇ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *