ತುಮಕೂರು: ಹಾವು (Snake) ಎನ್ನುವುದನ್ನು ಕೇಳಿದೆನ್ರೇ ಮಾರುದ್ದ ಓಡುವ ಜನರಿದ್ದಾರೆ. ಇನ್ನೂ ಅದು ನಾಗರಹಾವು ಅಂದ್ರೆ ಜೀವ ಹೋಗಿ ಬರುತ್ತೆ. ರಸ್ತೆಯಲ್ಲಿ ಹೋಗ್ತಾ ಇದ್ದ ನಾಗರಹಾವು ಹಿಡಿದ ಯುವಕನೊಬ್ಬ ಹುಚ್ಚಾಟ ಆಡಿದ್ದಾನೆ. ಹಾವು ಎರಡು ಬಾರಿ ಕಚ್ಚಿದರೂ ಅದನ್ನೇ ಕೈಗೆ ಸುತ್ತಿಕೊಂಡು ರೋಡ್ ಶೋ ಮಾಡಿದ್ದಾನೆ.
ಹೌದು. ತುಮಕೂರಿನ ಶಿರಾಗೇಟ್ ನಿವಾಸಿ ಸಲೀಂ ವೃತ್ತಿಯಲ್ಲಿ ಮೆಕ್ಯಾನಿಕ್. ಐದು ಅಡಿ ಉದ್ದ ನಾಗರಹಾವು ಅದರ ಪಾಡಿಗೆ ಅದು ಸರಸರನೇ ಹರಿದು ಹೋಗ್ತಾ ಇತ್ತು. ಎಣ್ಣೆ ಏಟಿನಲ್ಲಿ ಇಷ್ಟೆಲ್ಲಾ ರಂಪಾಟ ನಡೆಸಿದ್ದಾನೆ. ಹಾವು ಹಿಡಿದು ಬೇಜಾರಾಗಿ ಪಕ್ಕದ ಕಲ್ಲಿನ ಪೊದೆಗೆ ಬಿಟ್ಟಿದ್ದಾನೆ. ಇದನ್ನೂ ಓದಿ: ಹಿಜಬ್ ಧರಿಸದ್ದಕ್ಕೆ ಡಿಬಾರ್ – ಇರಾನ್‌ನಲ್ಲಿ ಪ್ರತಿಭಟನೆಗೆ ಧುಮುಕಿದ ಶಾಲಾ ಮಕ್ಕಳು
ಯುವಕನ ಹುಚ್ಚಾಟ ತಡೆಯಲಾರದೇ ಸ್ಥಳೀಯರು ಉರಗ ಸಂರಕ್ಷಕ ದಿಲೀಪ್ ಕುಮಾರ್ ತಂಡಕ್ಕೆ ಕರೆ ಮಾಡಿದ್ದಾರೆ. ಸುಮಾರು 1 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ನಾಗರಹಾವನ್ನು ಸುರಕ್ಷಿವಾಗಿ ಹಿಡಿದು ದೇವರಾಯನದುರ್ಗದ ಅರಣ್ಯ (Forest) ಕ್ಕೆ ಬಿಟ್ಟಿದ್ದಾರೆ. ಇದಕ್ಕೂ ಮೊದಲು ಹಾವಿನ ಕಡಿತಕ್ಕೆ ಒಳಗಾಗಿದ್ದ ಸಲೀಂನ್ನ ಜನರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದಾಖಲು ಮಾಡಿದ ಅರ್ಧಗಂಟೆಯಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸಲೀಂ ಆಸ್ಪತ್ರೆಗೆ ಬಂದಾಗ ಬಿಪಿ, ಹಾರ್ಟ್ ಬೀಟ್ ಎಲ್ಲವೂ ನಾರ್ಮಲ್ ಆಗಿದೆ. ಐಸಿಯುಗೆ ದಾಖಲಿಸಿ ಚಿಕಿತ್ಸೆ ಆರಂಭಿಸುತಿದ್ದಂತೆ, ಸಲೀಂ ಆಸ್ಪತ್ರೆ ಬೆಡ್‍ನಿಂದ ಜಿಗಿದು ಎಸ್ಕೇಪ್ ಆಗಿದ್ದಾರೆ. ಇದು ಆಸ್ಪತ್ರೆ ಸಿಬ್ಬಂದಿಗೆ ತಲೆ ನೋವು ತಂದಿದೆ. ನಾಪತ್ತೆಯಾಗಿರುವ ವ್ಯಕ್ತಿ ಪತ್ತೆಯಾದರೆ ಆತನ ಆರೋಗ್ಯದ ಸ್ಥಿತಿಗತಿ ತಿಳಿಯಲಿದೆ. ಹಾವು ಅಂದ್ರೆನೇ ಮೂರ್ಛೆ ಹೋಗುವ ಜನರ ಮಧ್ಯೆ ಎರಡು ಬಾರಿ ವಿಷಕಾರಿ ನಾಗರಹಾವು ಕಚ್ಚಿದರೂ ಆರೋಗ್ಯ ಚೆನ್ನಾಗಿದೆ ಅನ್ನೋದೇ ವೈದ್ಯರಿಗೆ ಸೋಜಿಗ.