ತುಮಕೂರು: ಗಣೇಶ ವಿಸರ್ಜನೆಗೆಂದು (Dissolution of Ganesha Idol) ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ ಘಟನೆ ತುಮಕೂರು (Tumakuru) ಜಿಲ್ಲೆ ತುರುವೆಕೆರೆ (Turuvekere) ತಾಲೂಕಿನ ಮಾರಸಂದ್ರ (Marasandra) ಗ್ರಾಮದಲ್ಲಿ ನಡೆದಿದೆ.
ರೇವಣ್ಣ (50), ರೇವಣ್ಣ ಪುತ್ರ ಶರತ್ (20) ಹಾಗೂ ದಯಾನಂದ್ (28) ಮೃತ ದುರ್ದೈವಿಗಳು. ಮೃತ ದಯಾನಂದ್‌ಗೆ ಇತ್ತೀಚೆಗೆ ಮದುವೆ ಆಗಿತ್ತು. ಮಾರಸಂದ್ರ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ಘಟನೆ ನಡೆದಿದೆ. ಇಂದು (ಭಾನುವಾರ) ಗ್ರಾಮದಲ್ಲಿ ಇಟ್ಟಿದ್ದ ಗಣೇಶನ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮುನೇಶ್ವರಸ್ವಾಮಿ ದೇಗುಲಕ್ಕೆ ಟೆಂಪೊ ಡಿಕ್ಕಿ – ಪೂಜೆ ಮಾಡುತ್ತಿದ್ದ ಮೂವರಿಗೆ ಗಾಯ, ಓರ್ವ ಸಾವು
ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ದಂಡಿನಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಮೃತದೇಹಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ನಾಗಮಂಗಲ ಕೇಸ್ ಸೇರಿದಂತೆ ಎಲ್ಲಾ ಪ್ರಕರಣದಲ್ಲೂ ಇದು ಕ್ಲೀನ್‌ಚಿಟ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ ಕಿಡಿ