ಬೆಂಗಳೂರು: ತುಮಕೂರು ಗ್ರಾಮಾಂತರ (Tumkauru Rural) ಶಾಸಕ ಗೌರಿ ಶಂಕರ್ (Gourishankar) ಅನರ್ಹತೆ ವಿರುದ್ದ ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುತ್ತೇವೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ(CM Ibrahim) ತಿಳಿಸಿದ್ದಾರೆ.
ಕಲಬುರಗಿ ಹೈಕೋರ್ಟ್‌ನ (Kalaburagi Highcourt) ಏಕ ಸದಸ್ಯ ಪೀಠದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಏಕ ಸದಸ್ಯ ಪೀಠದ ಆದೇಶ. ಈ ಆದೇಶವನ್ನು ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲಿ ಈ ಕೇಸ್ ನಿಲ್ಲುವುದಿಲ್ಲ ಎಂದು ಆಶಾವಾದ ವ್ಯಕ್ತಪಡಿಸಿದರು ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಲು ಜೆಡಿಎಸ್ ಸರ್ಕಸ್
Advertisement
5 ವರ್ಷದ ಹಳೆ ಕೇಸ್ ಇದು. ಈಗ ಬಹಿರಂಗವಾಗಿ ಹಣ ಹಂಚಿದರೂ ಏನು ಮಾಡುತ್ತಿಲ್ಲ. ನಮಗೆ ಈ ಬಗ್ಗೆ ಆತಂಕ ಇಲ್ಲ.ಗೌರಿ ಶಂಕರ್ ಗೆಲ್ಲುತ್ತಾರೆ. ಅದಕ್ಕೆ ಹೀಗೆಲ್ಲ ಮಾಡ್ತಿದ್ದಾರೆ. ರೋಡ್ ನಲ್ಲಿ ಹೋಗೋವಾಗ ರಸ್ತೆ ಉಬ್ಬು ಇರುತ್ತದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಆ ಸೀಟು ಚೆನ್ನಿಗಪ್ಪನ ಮನೆ ಸೀಟು, ಅವರು ಗೆಲ್ಲುತ್ತಾರೆ. ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.
Advertisement
ಗೌರಿ ಶಂಕರ್ ಶಾಸಕರಾಗಿ ಒಳ್ಳೆ ಸೇವೆ ಮಾಡಿದ್ದಾರೆ. ಮೊನ್ನೆ 50 ಸಾವಿರ ಜನ ಸೇರಿ ಸಭೆ ಮಾಡಿದ್ದೇವೆ. ಅ ಸೀಟು ಜೆಡಿಎಸ್ ಸೀಟು ಅಲ್ಲಿ ಜೆಡಿಎಸ್ ಗೆಲುವು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಗೌರಿ ಶಂಕರ್ ಅನರ್ಹವಾದರೆ ಅವರ ಪತ್ನಿಗೆ ಸೀಟು ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನ ಗೌರಿ ಶಂಕರ್ ತೀರ್ಮಾನ ಮಾಡ್ತಾರೆ. ಗೌರಿ ಶಂಕರ್ ಪತ್ನಿ ನಿಂತರೇ ಇನ್ನು ಹೆಚ್ಚು ಮತ ಬರುತ್ತೆ ಎಂದರು.