ನಾನು ಇರೋದು ಒಬ್ಬಳೇ, ದುಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು

Public TV
1 Min Read
Tumakuru Old women

ತುಮಕೂರು: ಲಾಕ್‍ಡೌನ್ ನಡುವೆಯೇ ವೃದ್ಧೆಯೊಬ್ಬಳು ತಲೆಯ ಮೇಲೆ ಮೂಟೆ ಹೊತ್ತು ನಗರದಲ್ಲಿ ಓಡಾಡುತ್ತಿದ್ದನ್ನು ಕಂಡ ಪೊಲೀಸರು ತಿಳಿಹೇಳಿ ವಾಪಸ್ ಕಳುಹಿಸಿದ್ದಾರೆ.

ಈ ವೇಳೆ ಪೊಲೀಸರೊಂದಿಗೆ ವೃದ್ಧೆ ಮಾತಿಗಿಳಿದು ನಾನು ಇರೋದು ಒಬ್ಬಳೇ. ದುಡಿದರೆ ಮಾತ್ರ ಹೊಟ್ಟೆಗೆ ಹಿಟ್ಟು, ನನಗೆ ಯಾರೂ ಇಲ್ಲ. ಮನೆ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕು ಎಂದಿದ್ದಾಳೆ. ಇದನ್ನು ಕೇಳುತ್ತಿದ್ದಂತೆ ಪೊಲೀಸರ ಮನಸ್ಸು ಕೂಡ ಕರಗಿ ಹೋಗಿದೆ.

Tumakuru Old women 2

ಜೀವ ಇದ್ದರೆ ತಾನೇ ಹೊಟ್ಟೆ ತುಂಬಿಸಿಕೊಳ್ಳುವುದು ಎಂದು ಪೊಲೀಸರು ಬುದ್ಧಿ ಹೇಳಿ ವೃದ್ಧೆಯನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ. ನೀವು ಕೆಲಸ ಮಾಡುವ ಮನೆಯಲ್ಲಿ ಮಾಸ್ಕ್ ಕೇಳಿ ಪಡೆದು ಹಾಕಿಕೊಳ್ಳಲು ಸಲಹೆ ನೀಡಿ ಕಳುಹಿಸಿದ್ದಾರೆ. ತುಮಕೂರು ನಗರದ ಶಿವಕುಮಾರ ಸ್ವಾಮೀಜಿ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ವೃದ್ಧೆ ಮತ್ತು ಪೊಲೀಸರ ನಡುವೆ ನಡೆದ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *