ತುಮಕೂರು: ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ 50ಕ್ಕೂ ಹೆಚ್ಚು ಮೇಕೆಗಳು ಸಜೀವ ದಹನವಾದ ಘಟನೆ ತುಮಕೂರಿನಲ್ಲಿ ನಡೆದಿದೆ.
ಜಿಲ್ಲೆಯ ಮಧುಗಿರಿ ತಾಲೂಕಿನ ಕೋಡ್ಲಾಪುರ ಗ್ರಾಮದ ಲಿಂಗಣ್ಣ ಎಂಬವರ ಮನೆಯಲ್ಲಿ ಹುಲ್ಲಿನ ಬಣವೆಗೆ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಹುಲ್ಲಿನ ಬಣವೆಯಿಂದ ಬೆಂಕಿ ನಿಧಾನವಾಗಿ ಮೇಕೆಗಳಿದ್ದ ಗುಡಿಸಲಿಗೆ ಆವರಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಹುಲ್ಲಿನ ಗುಡಿಸಲು ಧಗಧಗೆ ಹೊತ್ತಿ ಉರಿದಿದೆ. ಜೊತೆಗೆ ಗುಡಿಸಲಿನಲ್ಲಿದ್ದ 50ಕ್ಕೂ ಹೆಚ್ಚು ಮೇಕೆಗಳು ಬೆಂಕಿಗಾಹುತಿಯಾಗಿದ್ದು, ಅರೆಬೆಂದ ಸ್ಥಿತಿಯಲ್ಲಿವೆ.
ಸ್ಥಳಕ್ಕೆ ಕೊಡುಗೇನಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.