ತುಮಕೂರು: ತಾಲೂಕಿನ ವ್ಯಾಪ್ತಿಯಲ್ಲಿ ನಾಲ್ಕು ಜನರನ್ನು ಬಲಿ ತೆಗೆದುಕೊಂಡಿರುವ ನರಭಕ್ಷಕ ಚಿರತೆಗೆ ಕಂಡಲ್ಲಿ ಗುಂಡಿಕ್ಕಲು ಕೊನೆಗೂ ಆದೇಶವಾಗಿದೆ.
ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಇಲಾಖೆಯಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಕಳೆದ 6 ತಿಂಗಳಲ್ಲಿ ಮೂರು ಜನರನ್ನು ಬಲಿತೆಗೆದುಕೊಂಡಿದ್ದ ಚಿರತೆ ಪುನಃ ಫೆಬ್ರವರಿ 28ರಂದು ಬೈಚೇನಹಳ್ಳಿಯ ಚಂದನಾ ಎಂಬ ಮೂರು ವರ್ಷದ ಬಾಲಕಿಯನ್ನು ಬಲಿ ಪಡೆದಿತ್ತು. ಆದರೂ ಚಿರತೆ ಸೆರೆ ಹಿಡಿಯಲು ಆಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಚಿರತೆ ಶೂಟೌಟ್ ಮಾಡಲು ಒತ್ತಾಯಿಸಿದ್ದರು.
ಕಳೆಸ ಐದಾರು ದಿನಗಳಿಂದ ಚಿರತೆಯನ್ನ ಸೆರೆಹಿಡಿಯಲು ಬೋನಿಟ್ಟು ಕಾರ್ಯಾಚರಣೆ ಮಾಡಲಾಗುತ್ತಿತ್ತು. ಆದರೂ ನರಭಕ್ಷಕ ಚಿರತೆ ಸರೆಯಾಗಿಲ್ಲ. ಹಾಗಾಗಿ ಅನಿವಾರ್ಯವಾಗಿ ಕಂಡಲ್ಲಿ ಗುಂಡಿಕ್ಕಲು ಇಲಾಖೆ ಅನುಮತಿ ನೀಡಿದೆ.