ತುಮಕೂರು: ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿ ತುಮಕೂರಿನ (Tumakuru) ವಿಶೇಷ ಮಕ್ಕಳ ಸ್ನೇಹಿ ನ್ಯಾಯಾಲಯ (Child friendly Court) ಆದೇಶಿಸಿದೆ.
ಏನಿದು ಕೇಸ್?
ಶಿರಾ ತಾಲೂಕಿನ ಕಸಬಾ ಹೋಬಳಿ, ಮುದಿಗೆರೆ ಗ್ರಾಮದಲ್ಲಿ, ತಂದೆ ಬಸವರಾಜು ಮಲಗಿದ್ದ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನ ಎಬ್ಬಿಸಿ, ಬೆದರಿಸಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಯಾರಿಗಾದರೂ ತಿಳಿಸಿದ್ರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದ. ಇದನ್ನೂ ಓದಿ: ಹಣ ಕೊಡದಿದ್ದಕ್ಕೆ ಬಿಜೆಪಿ ಬಾವುಟಕ್ಕೆ ಬೆಂಕಿ – ಚಿನ್ನ ಗಿರವಿಯಿಟ್ಟು ಕಾರ್ಯಕರ್ತರಿಗೆ ಹಣ ಕೊಟ್ಟ ಮುಖಂಡ
Advertisement
Advertisement
ತಂದೆಯ ದುಷ್ಕೃತ್ಯವನ್ನು ಬಾಲಕಿ ತನ್ನ ಚಿಕ್ಕಮ್ಮನಿಗೆ ತಿಳಿಸಿದ್ದಳು. ಇದರಿಂದ ಎಚ್ಚೆತ್ತುಕೊಂಡ ಸಂತ್ರಸ್ತೆ ಚಿಕ್ಕಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಅಧಿಕಾರಿಗಳು ಬಸವರಾಜು ವಿರುದ್ಧ ಶಿರಾ ಪೊಲೀಸ್ ಠಾಣೆಗೆ (Sira Police Station) ದೂರು ನೀಡಿದ್ದರು. ಅದರನ್ವಯ ಆರೋಪಿ ವಿರುದ್ಧ ಕಲಂ 04, ಪೋಕ್ಸೋ ಕಾಯ್ದೆ (POCSO Act), ಐಪಿಸಿ 504, 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
Advertisement
ಪ್ರಕರಣ ಸಂಬಂಧ ತನಿಖೆ ನಡೆಸಿದ ಶಿರಾ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಬಿ ಹನುಮಂತಪ್ಪ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.
Advertisement
ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಫ್‌ಟಿಎಸ್‌ಸಿ ಅಭಿಯೋಜನೆಯ ಪರ ಸಾಕ್ಷಿಗಳಿಂದ ನಡೆದ ವಿಚಾರಣೆ, ಹಾಜರುಪಡಿಸಿದ ದಾಖಲೆಗಳಿಂದ ಆರೋಪ ಸಾಬೀತಾಗಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿತು. ಇದರೊಂದಿಗೆ ನೊಂದ ಬಾಲಕಿಗೆ 10 ಲಕ್ಷ ಪರಿಹಾರ ಘೋಷಿಸಿತು. ಇದನ್ನೂ ಓದಿ: ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..
ಸರ್ಕಾರದ ಪರ ವಿಶೇಷ ಅಭಿಯೋಜಕರಾದ ಕೆ.ಎಸ್ ಆಶಾ ವಾದ ಮಂಡಿಸಿದರು.