ಪ್ರಧಾನಿ ಮೋದಿಯನ್ನ ಜೀವಂತವಾಗಿ ಸುಡುವ ಕಾಲ ಬಂದಿದೆ: ಟಿ.ಬಿ.ಜಯಚಂದ್ರ

Public TV
1 Min Read
Narendra Modi T.B.Jayachandra

ತುಮಕೂರು: ರಾಜ್ಯ ರಾಜಕೀಯದಲ್ಲಿ ನಾಯಕರು ಸಭ್ಯತೆ ಮರೆತು ಹೇಳಿಕೆ ನೀಡುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಈ ಬಾರಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೋಟು ನಿಷೇಧ ಖಂಡಿಸಿ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವರು, ನೋಟು ರದ್ದತಿಯಲ್ಲಿ ನನಗೆ 50 ದಿನ ಕಾಲವಕಾಶ ಕೊಡಿ ಇದರಲ್ಲಿ ಗೆದ್ದು ಬರುತ್ತೇನೆ. ಒಂದು ವೇಳೆ ಬರದಿದ್ದರೆ ನನ್ನನ್ನ ಜೀವಂತವಾಗಿ ಸುಡಿ ಅಂತಾ ಪ್ರಧಾನಿ ಮೋದಿಯವರೇ ಹೇಳಿದ್ದರು. ಅವರ ಮಾತಿನಂತೆ ಬಹುಶಃ ಜೀವಂತವಾಗಿ ಸುಡುವ ಕಾಲ ಇಂದು ಬಂದಿದೆ ಎಂದು ಕಿಡಿಕಾರಿದರು.

T.B.Jayachandra

ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ರಾಜಿನಾಮೇ ನೀಡಿ ಮನೆಗೆ ಹೊಗಬೇಕು. ಕೇಂದ್ರ ಸರ್ಕಾರದ ನಡೆ ಕತ್ತೆಗೆ ಹೋಲಿಕೆಯಾಗುತ್ತದೆ. ಅದು ಎಂದಿಗೂ ಕೆಲಸ ಮಾಡಿಲ್ಲ. ಆ ಕೆಲಸ ಮಾಡಿದ್ದು ಗುಳ್ಳೆನರಿ. ಪ್ರತಿಭಟನೆಗೆ ಆ ಗುಳ್ಳೆನರಿ ತಂದಿದ್ದರೆ ಬಹಳ ಚೆನ್ನಾಗಿರುತ್ತಿತ್ತು ಎಂದ ಸಚಿವರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯನ್ನ ಗುಳ್ಳೆನರಿಗೆ ಹೋಲಿಸಿ ವ್ಯಂಗ್ಯವಾಡಿದರು.

ಬಿಎಸ್‍ವೈ ಖಂಡನೆ:
ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿಕೆ ವಿರುದ್ಧ ಕಿಡಿಕಾರಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಸಹಿಸದೆ ಬುದ್ಧಿ ಸ್ಥಿಮಿತತೆ ಕಳೆದುಕೊಂಡವರಂತೆ ಮಾತನಾಡ್ತಿದ್ದಾರೆ. ಮಾಜಿ ಕಾನೂನು ಸಚಿವರಾಗಿದ್ದ ಜಯಚಂದ್ರ ಅವರ ಹೇಳಿಕೆ ಖಂಡನೀಯ. ಅವರ ಕೀಳುಮಟ್ಟದ, ಆಕ್ಷೇಪಾರ್ಹ ಹೇಳಿಕೆಗೆ ಜನರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಿ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಮಾಧ್ಯಮ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/

Share This Article
Leave a Comment

Leave a Reply

Your email address will not be published. Required fields are marked *