ತುಮಕೂರು: ಪತಿ, ಪತ್ನಿಯ ಜಗಳ ಬಿಡಿಸಲು ಬಂದ ನಾದಿನಿಯ ಕೈ ಕತ್ತರಿಸಿದ ಘಟನೆ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ ನಡೆದಿದೆ.
ಡಿ.ವಿ.ಹಳ್ಳಿಯ ನಿವಾಸಿ ಹನುಮಂತಪ್ಪ ಮತ್ತು ಪತ್ನಿ ಅನಿತಾ ನಡುವೆ ಜಗಳ ನಡೆದಿದ್ದಾಗ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ 16 ವರ್ಷದ ಮೇಘನಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಹನುಮಂತಪ್ಪ ಪತ್ನಿಯ ಶೀಲ ಶಂಕಿಸಿ ಸದಾ ಜಗಳ ಮಾಡುತ್ತಿದ್ದ. ಇಂದು ಕೂಡ ಜಗಳ ಆರಂಭಸಿದ್ದ. ಈ ವೇಳೆ ಮನೆಗೆ ಬಂದಿದ್ದ ನಾದಿನಿ ಮೇಘನಾ ಜಗಳ ಬಿಡಿಸಲು ಯತ್ನಿಸಿದ್ದಳು. ಮಚ್ಚು ಹಿಡಿದುಕೊಂಡು ಪತ್ನಿ ಅನಿತಾಳ ಮೇಲೆ ಹಲ್ಲೆ ನಡೆಸಲು ಹನುಮಂತ ಯತ್ನಿಸಿದಾಗ ನಾದಿನಿ ಮೇಘನಾ ತಡೆಯಲು ಮುಂದಾಗಿದ್ದಳು. ಪರಿಣಾಮ ಅನಿತಾಳಿಗೆ ಬೀಸಿದ ಮಚ್ಚು ಮೇಘನಾಳ ಕೈಗೆ ಬಿದ್ದು ಮುಂಗೈ ತುಂಡಾಗಿದೆ.
Advertisement
ಮೇಘನಾಳ ಎಡಗೈಯಲ್ಲಿ ಒಂದು ಬೆರಳು ಮಾತ್ರ ಉಳಿದಿದ್ದು, ಉಳಿದ ನಾಲ್ಕು ಬೆರಳು ಸಹಿತ ಅಂಗೈ ತುಂಡಾಗಿದೆ. ಗಂಭೀರವಾಗಿ ಗಾಯಗೊಂಡ ಮೇಘನಾಳನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಹನುಮಂತನನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.