ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಆಯುರ್ವೇದದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ವಾಸ್ತವವಾಗಿ ತುಳಸಿ ಎಲೆಗಳ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಎಲೆಗಳಿಂದ ಶೀತ ಮತ್ತು ಕೆಮ್ಮು ಸುಲಭವಾಗಿ ಗುಣವಾಗುತ್ತದೆ. ತುಳಸಿ ಎಲೆಗಳು ಮಾತ್ರವಲ್ಲದೆ ಅದರ ಬೀಜಗಳೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ತುಳಸಿ ಬೀಜಗಳಿಂದಾಗುವ ಪ್ರಯೋಜನಗಳೇನು..?
* ತುಳಸಿ ಬೀಜಗಳು (Tulsi Seeds) ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಹೊಂದಿವೆ. ಇದು ಅನೇಕ ರೋಗಗಳು ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ತುಳಸಿ ಬೀಜಗಳ ಕಷಾಯವನ್ನು ಕುಡಿಯುವುದರಿಂದ ದೇಹಕ್ಕೆ ಪ್ರಯೋಜನಕಾರಿಯಾಗಿದೆ.
Advertisement
Advertisement
* ತುಳಸಿ ಬೀಜಗಳು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಇದರಲ್ಲಿರುವ ಅನೇಕ ಪೋಷಕಾಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಇದನ್ನೂ ಓದಿ: ರಾತ್ರಿ ಮಲಗೋ ಮುನ್ನ ಕುಡಿಯುವ 1 ಲೋಟ ಬೆಚ್ಚಗಿನ ನೀರಿನಿಂದ ಆಗುವ ಪ್ರಯೋಜನಗಳು
Advertisement
* ಮಲಬದ್ಧತೆಯಂತಹ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಬೆಳಗ್ಗೆ ಇದರ ಸೇವನೆಯು ನಿಮ್ಮ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ.
Advertisement
* ದಿನದಿಂದ ದಿನಕ್ಕೆ ನಿಮ್ಮ ತೂಕದಲ್ಲಿ ಹೆಚ್ಚಳ ಕಂಡುಬರುತ್ತಿದ್ದರೆ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಇದರಲ್ಲಿ ಫೈಬರ್ ಅಂಶ ಹೇರಳವಾಗಿದ್ದು, ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಹೀಗಾಗಿ ನಿಮಗೆ ದಪ್ಪವಾಗುತ್ತಿದ್ದೇನೆ ಎಂಬ ಭಾವನೆ ಬಂದರೆ ಈ ಬೀಜಗಳನ್ನು ಸೇವಿಸುವುದರಿಂದ ದೀರ್ಘಕಾಲ ಹಸಿವಾಗುವುದಿಲ್ಲ. ಇದರಿಂದಾಗಿ ನಿಮ್ಮ ತೂಕ ಕ್ರಮೇಣ ಕಡಿಮೆಯಾಗುತ್ತದೆ.
* ಗ್ಯಾಸ್ಟ್ರಿಕ್ ನಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ತುಳಸಿ ಬೀಜಗಳು ನಿಮಗೆ ಪ್ರಯೋಜನಕಾರಿಯಾಗಬಲ್ಲವು. ಒಂದು ಚಮಚ ತುಳಸಿ ಕಾಳುಗಳನ್ನು ಒಂದು ಲೋಟ ನೀರಿಗೆ ಹಾಕಿ ಊದಿಕೊಂಡ ನಂತರ ಕುಡಿಯಿರಿ. ಈ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.