ಇತ್ತೀಚೆಗೆ ದಿಢೀರ್ ಎಂದು ಬದಲಾಗುತ್ತಿರುವ ವಾತಾವರಣದಿಂದ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅದಕ್ಕೆ ನೀವು ಆರೋಗ್ಯ ಕೆಟ್ಟ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕಾಗಿ ಇಂದು ನಿಮಗೆ ದೇಹವನ್ನು ಒಳಗಿನಿಂದ ಹೈಡ್ರೇಟ್ ಮಾಡುವ ಸೂಪರ್ ರೆಸಿಪಿಯನ್ನು ಹೇಳಿಕೊಡುತ್ತಿದ್ದೇವೆ. ಬೆಳಗ್ಗೆಯೇ ‘ತುಳಸಿ ಕಷಾಯ’ವನ್ನು ಮಾಡಿ ಕುಡಿದ್ರೆ ಇಡೀ ದಿನ ಎನರ್ಜಿಯಿಂದ ಇರಬಹುದು.
Advertisement
ಬೇಕಾಗಿರುವ ಪದಾರ್ಥಗಳು:
* ನೀರು – 2 ಕಪ್
* ತುಳಸಿ – 5 ರಿಂದ 4 ಎಲೆ
* ಕರಿಮೆಣಸಿನ ಪುಡಿ – 1/2 ಟೀಸ್ಪೂನ್
* ಒಣ ಶುಂಠಿ ಪುಡಿ – 1/2 ಟೀಸ್ಪೂನ್
* ಸಕ್ಕರೆ – 1 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲು ಎಲ್ಲ ಪದಾರ್ಥಗಳನ್ನು ಸರಿಯಾಗಿ ತೆಗೆದುಕೊಳ್ಳಿ.
* ಒಂದು ಪ್ಯಾನ್‍ಗೆ ನೀರು ಸೇರಿಸಿ, ತುಳಸಿ ಎಲೆಗಳನ್ನು ಹರಿದು ಹಾಕಿ ಕುದಿಸಿ.
* ನೀರಿನ ಬಣ್ಣ ಬದಲಾದ ನಂತರ, ಕರಿಮೆಣಸಿನ ಪುಡಿ, ಶುಂಠಿ, ಸಕ್ಕರೆ ಸೇರಿಸಿ ಕೆಲವು ನಿಮಿಷ ಕುದಿಸಿ ಮತ್ತು ಗ್ಯಾಸ್ ಆಫ್ ಮಾಡಿ.
* ತುಳಸಿ ಕಷಾಯವನ್ನು ಬಿಸಿಯಾಗಿರುವಾಗಲೇ ಸೇವಿಸಿ.
Advertisement
– ಇದನ್ನು ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಕೆಮ್ಮು ಮತ್ತು ಶೀತದಿಂದ ಕಡಿಮೆಯಾಗುತ್ತೆ.