ಖ್ಯಾತ ನಟ ಶಿವರಾಜ್ ಕುಮಾರ್ (Shivaraj Kumar) ಅವರ ಅಭಿಮಾನಿಗಳು ಎಲ್ಲಿ ಇಲ್ಲ ಹೇಳಿ? ಬಿಗ್‌ಬಾಸ್ (Bigg Boss Kannada) ಮನೆಯಲ್ಲಿಯೂ ಶಿವಣ್ಣನ ನೆನಪುಗಳು ಹರಿದಾಡಿವೆ. ಅದಕ್ಕೆ ಕಾರಣವಾಗಿದ್ದು ತುಕಾಲಿ ಸಂತು (Tukali Santu). ತುಕಾಲಿಗೂ ಶಿವಣ್ಣನಿಗೂ ಎಲ್ಲಿಂದ ಎಲ್ಲಿಯ ಸಂಬಂಧ?
ಇದು ಅಭಿಮಾನದ ಸಂಬಂಧ. ತುಕಾಲಿ ಸಂತುಗೆ ಶಿವಣ್ಣನ ಮೇಲಿದ್ದ ಅಭಿಮಾನ ವ್ಯಕ್ತಗೊಂಡಿದ್ದು ಅವರನ್ನು ಮಿಮಿಕ್ರಿ ಮಾಡುವ ಮೂಲಕ. ಮೊದಲೇ ಮಾತಿಗೊಮ್ಮೆ ಹಾಸ್ಯ ಚಟಾಕಿ ಸಿಡಿಸುವ ಸಂತು ಅವರು, ಶಿವಣ್ಣನ ಮಿಮಿಕ್ರಿ ಮಾಡಿದರೆ ಕೇಳಬೇಕೇ? ಹಾಗಂತ ತುಕಾಲಿ ಅವರು ಶಿವಣ್ಣನ ಮಿಮಿಕ್ರಿ ಮಾಡುವುದರಲ್ಲಿಯೂ ಒಂದು ಅಡ್ವಾಂಟೇಜ್ ತೆಗೆದುಕೊಂಡಿದ್ದಾರೆ. ಆ ಅಡ್ವಾಂಟೇಜ್ ಏನು ಗೊತ್ತಾ?
‘ಸಮರ್ಥ’ ಮತ್ತು ‘ಅಸಮರ್ಥ’ ಸ್ಪರ್ಧಿಗಳ ನಡುವೆ ಕೆಲವರು ಬಿಗ್‌ಬಾಸ್ ಮನೆಯಲ್ಲಿನ ಹುಲ್ಲುಹಾಸಿನ ಮೇಲೆ ಕೂತು ಹರಟೆ ಹೊಡೆಯುತ್ತಿದ್ದರು. ಆಗಲೇ ತುಕಾಲಿ ಸಂತುಗೆ ಶಿವಣ್ಣನ ಮಿಮಿಕ್ರಿ ಮಾಡುವ ಹುಕಿ ಬಂದಿದ್ದು. ಬರೀ ಮಿಮಿಕ್ರಿ ಮಾಡಿದರೆ ಸಾಕೇ? ಅದರ ಮೂಲಕವೇ ನಮ್ರತಾ ಗೌಡ ಜೊತೆಗೆ ಎರಡು ಹೆಜ್ಜೆ ಹಾಕುವ ಆಸೆಯನ್ನೂ ಈಡೇರಿಸಿಕೊಂಡಿದ್ದಾರೆ. ಕಾಮಿಡಿ ಮಾಡ್ತಾನೇ ಫ್ಲರ್ಟ್ ಮಾಡುವ ಕಲೆ ಅವರಿಗೆ ಕರಗತ ಆಗಿರುವಂತಿದೆ.
‘ಹುಲ್ಲು ಹಾಸಿನ ಮೇಲೆ ಮಲಗಿದ್ದ ನಮ್ರತಾ ಎದುರಿಗೆ ಹೋಗಿ ನಿಂತ ತುಕಾಲಿ ಶಿವಣ್ಣ ಅವರ ಸ್ಟೈಲ್‌ನಲ್ಲಿಯೇ, ‘ನೀವಂದ್ರೆ ತುಂಬ ಇಷ್ಟ. ಒಂದೆರಡು ಸ್ಟೆಪ್ ಹಾಕ್ಬೋದಾ?’ ಎಂದು ಕೇಳಿದ್ದಾರೆ. ಶಿವಣ್ಣನ ಧ್ವನಿಯಲ್ಲಿ ‘ಸ್ಟೆಪ್ ಹಾಕೋಣ್ವಾ?’ ಅಂತ ಕೇಳಿದ್ರೆ ನೋ ಅನ್ನಕ್ಕಾಗತ್ತಾ? ನಮ್ರತಾ ಖುಷಿಯಿಂದಲೇ ಎದ್ದುಹೋಗಿ ಅವರ ಪಕ್ಕ ನಿಂತಿದ್ದಾರೆ.
‘ರಾಜಾ ರಾಜಾ ಶಿವರಾಜ…’ ಎಂದು ಶಿವಣ್ಣನ ಧ್ವನಿಯನ್ನೇ ಅನುಕರಿಸುತ್ತ ಹಾಡುವುದರ ಜೊತೆಗೆ ತುಕಾಲಿ ಅವರು ಡಾನ್ಸ್ ಎಕ್ಸ್‌ಫರ್ಟ್ ನಮ್ರತಾಗೇ (Namrata Gowda)ಸ್ಟೆಪ್ಸ್ ಹೇಳಿಕೊಟ್ಟಿದ್ದಾರೆ. ಈ ಎಲ್ಲ ಕ್ಷಣಗಳು JioCinemaದಲ್ಲಿ ದಾಖಲಾಗಿವೆ.
Web Stories