Bigg Boss: ನೊಂದವರ ಗುಂಪಿಗೆ ಅಧ್ಯಕ್ಷ ಯಾರು ಗೊತ್ತಾ?

Public TV
2 Min Read
bigg boss 1 15

ಬಿಗ್ ಬಾಸ್ ಮನೆಯ (Bigg Boss Kannada) ಆಟ ಈಗಾಗಲೇ 8ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಗ್ರೂಪಿಸಂ, ಟೀಮ್‌ಗಳಾಗಿ ವಿಂಗಡಣೆ ಆಗಿದೆ. ವಿನಯ್, ಕಾರ್ತಿಕ್, ನೊಂದವರ ಗುಂಪು ಎಂದೆಲ್ಲಾ ತಂಡಗಳಾಗಿದೆ. ನೊಂದವರು ಎಂದು ಹೇಳಿಕೊಂಡು ಓಡಾಡುವ ತುಕಾಲಿಗೆ ಸುದೀಪ್, ನೊಂದವರ ಸಂಘದಲ್ಲಿ ಯಾರಿಗೆ ಯಾವ ಸ್ಥಾನ ಕೊಡುತ್ತೀರಾ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಬಾತ್‌ರೂಂ ಬಿಟ್ಟು ಕೊಡದೇ ಡ್ರೋನ್‌ಗೆ ಕಾಡಿಸಿದ ಸ್ನೇಹಿತ್‌ಗೆ ಸುದೀಪ್‌ ಕ್ಲಾಸ್‌

bigg boss 1 16ದೊಡ್ಮನೆ ವಾತಾವರಣ ಸಂಪೂರ್ಣ ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಈಗ ರಿಯಲ್ ಗೇಮ್ ಶುರುವಾಗಿದೆ. ಆಗಾಗ ತುಕಾಲಿ ಸಂತೂ, ತಮಗೆ ಟಾಸ್ಕ್ ಆಡಲು ಸರಿಯಾದ ಅವಕಾಶ ಸಿಗುತ್ತಿಲ್ಲ. ಮೂಲೆಗುಂಪು ಮಾಡ್ತಾರೆ ಎಂದೆಲ್ಲಾ ಕುಟುಕಿದ್ದಾರೆ. ನೊಂದವರು ನಾವು ಎಂದೆಲ್ಲಾ ಅವರು ಮಾತನಾಡಿದ್ದಾರೆ. ಇದು ಕಿಚ್ಚನ ಗಮನಕ್ಕೂ ಬಂದಿದ್ದು, ನೊಂದವರು ಎಂದು ಹಣೆಪಟ್ಟಿ ಕಟ್ಟಿಕೊಂಡು ಓಡಾಡುತ್ತಿದ್ದ ತುಕಾಲಿ ಸಂತೋಷ್ ಕಾಣಿಸಿದ್ದಾರೆ. ಇದನ್ನೇ ಒಂದು ಹಾಸ್ಯವಾಗಿ ತೆಗೆದುಕೊಂಡ ಕಿಚ್ಚ ಸುದೀಪ್ ಇಂದು ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ತುಕಾಲಿ ಅವರನ್ನು ಕಿಚಾಯಿಸಿದ್ದಾರೆ.

sudeep 5

ನೊಂದವರ ಗುಂಪಿನ ಸಂಘದಲ್ಲಿ ಯಾರ್ಯಾರಿಗೆ ಯಾವ ಸ್ಥಾನವನ್ನ ನೀಡುತ್ತೀರಾ ಎಂದು ತುಕಾಲಿ ಸಂತೋಷ್ ರವರನ್ನು ಕಿಚ್ಚ ಸುದೀಪ್ (Sudeep) ಕೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಕಾರ್ತಿಕ್ ಹಾಗೂ ವರ್ತೂರು ಸಂತೋಷ್, ಡ್ರೋಣ್ ಪ್ರತಾಪ್ ಅವರ ಹೆಸರನ್ನ ತೆಗೆದುಕೊಂಡಿದ್ದಾರೆ. ಅವರಿಗೆ ಇಂತಹ ಸ್ಥಾನವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮನೆಯ ಸದಸ್ಯರಿಗೆ ಬ್ಯಾಡ್ಜ್ ಕೂಡ ಬಂದಿದೆ ಅದನ್ನು ತುಕಾಲಿಯವರಿಗೆ ಹಾಕಲು ಸುದೀಪ್ ಹೇಳಿದ್ದಾರೆ.

karthik 1

ದೊಡ್ಮನೆಯಲ್ಲಿ ನೊಂದವರ ಸಂಘವನ್ನು ಉದ್ಘಾಟನೆ ಮಾಡಿದ್ದಾರೆ. ತುಕಾಲಿ ಸಂತೋಷ್ ನೊಂದವರ ಸಂಘದ ಗೌರವಾಧ್ಯಕ್ಷರಾಗಿದ್ದಾರೆ. ಯಾವಾಗಲೂ ತುಕಾಲಿ ಸಂತೋಷ್ ವಿನಯ್ ಏನಾದರೂ ಮಾತನಾಡಿದರೆ ನಾವು ನೊಂದವರು ನಮ್ಮ ಕಷ್ಟವನ್ನು ಕೇಳಲು ಯಾರು ಇಲ್ಲ ಎಂಬ ಮಾತನ್ನು ಬಳಕೆ ಮಾಡುತ್ತಿದ್ದರು. ಅದಕ್ಕೆ ಇಂದು ನೊಂದವರ ಸಂಘ ಎಂದು ಅಧಿಕೃತವಾಗಿ ಚಾಲನೆಯನ್ನು ನೀಡಲಾಗಿದೆ. ಇನ್ನು ತುಕಾಲಿ ಸಂತೋಷ ತಮ್ಮ ಸಂಘದ ಬಗ್ಗೆ ಮಾತನಾಡಿದ್ದು ಸಂಘಕ್ಕೆ ಅಧ್ಯಕ್ಷರನ್ನಾಗಿ ಕಾರ್ತಿಕ್ ಅವರನ್ನ ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ.

ಕಾರ್ತಿಕ್ (Karthik Mahesh) ತುಂಬಾ ನೊಂದು ಬೆಂದಿದ್ದಾರೆ. ಅದಕ್ಕೆ ಅವರನ್ನೇ ಸಂಘದ ಅಧ್ಯಕ್ಷರನ್ನಾಗಿ ಮಾಡುತ್ತಾ ಇದ್ದೇನೆ ಎಂದು ತುಕಾಲಿ ಸಂತೋಷ್ ಹೇಳಿದ್ದೆ ತಡ ಸಂಗೀತಾ ಮುಖಭಾವವೇ ಚೇಂಜ್ ಆಗಿ ಹೋಗಿದೆ. ಇನ್ನು ಉಪಾಧ್ಯಕ್ಷರನ್ನಾಗಿ ವರ್ತೂರು ಸಂತೋಷ್ ಅವರನ್ನ ಮಾಡಲಾಗಿದೆ. ಇದಕ್ಕೆ ತುಕಾಲಿ ಕೊಟ್ಟ ರೀಸನ್ ಮಾತ್ರ ಎಲ್ಲರ ಮುಖದಲ್ಲೂ ನಗು ತರಿಸಿದೆ. ವರ್ತೂರು ಸಂತೋಷ್ ಮಾತನಾಡುತ್ತಾ ಇದ್ದರು ಅದು ಅಳುವ ರೀತಿ ಕಾಣಿಸುತ್ತದೆ ಎಂದು ಹೇಳಿದ್ದಾರೆ. ತುಕಾಲಿ ಸಂತೋಷ್ ಮಾತಿಗೆ ನೊಂದವರ ಸಂಘದವರು ಬಿದ್ದು ಬಿದ್ದು ನಕ್ಕರೆ ವಿರೋಧಿ ಗುಂಪಿನವರು ಮಾತ್ರ ಏನು ರಿಯಾಕ್ಟ್ ಮಾಡದೆ ಸುಮ್ಮನೆ ಕುಳಿತುಕೊಂಡಿದ್ದಾರೆ.

Share This Article