‘ಬಿಗ್ ಬಾಸ್’ ಕನ್ನಡ ಸೀಸನ್ 10ನಲ್ಲಿ (Bigg Boss Kannada 10) ಎಲ್ಲ ಸ್ಪರ್ಧಿಗಳ ನಗುವಿನ ಮೊತ್ತ ತೆಗೆದರೆ ಅದರ ಬಹುಪಾಲು ತುಕಾಲಿ ಸಂತೋಷ್ ಅವರಿಗೆ ಹೋಗುತ್ತದೆ. ಅಷ್ಟೇ ಅಲ್ಲ, ಮನೆಯೊಳಗಿನ ಭಿನ್ನಾಭಿಪ್ರಾಯಗಳ ಮೂಲಗಳನ್ನು ಹುಡುಕಿಕೊಂಡು ಹೋದರೆ ಅದರಲ್ಲಿಯೂ ತುಕಾಲಿ ಸಂತೋಷ್ ಅವರ ಕೊಡುಗೆ ಸಣ್ಣದಲ್ಲ. ಹೀಗೆ ನಗುನಗಿಸುತ್ತಲೇ ಚಾಣಾಕ್ಷ ತಂತ್ರವನ್ನೂ ಹೆಣೆಯುವ ವ್ಯಕ್ತಿತ್ವ ತುಕಾಲಿ ಸಂತೋಷ್ ಅವರದ್ದು. ಬಿಗ್ ಬಾಸ್‌ನ 5ನೇ ರನ್ನರ್ ಅಪ್ ಆಗಿ ಹೊಮ್ಮಿರುವ ತುಕಾಲಿ (Tukali Santhosh) ಅವರು ಜಿಯೋ ಸಿನಿಮಾ ಜೊತೆಗೆ ನಡೆಸಿದ ಸಂದರ್ಶನ ಇಲ್ಲಿದೆ.
Advertisement
ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಸಂತೋಷ್ ಕುಮಾರ್ ಎಚ್.ಜಿ. ಅಲಿಯಾಸ್ ತುಕಾಲಿ ಸಂತೋಷ್ ಅವರೇ ನಿಮ್ಮ ಪ್ರೀತಿ ಪಾತ್ರ. ಈ ಸೀಸನ್‌ನಲ್ಲಿ ಟಾಪ್ 6 ಫಿನಾಲೆ ಸ್ಪರ್ಧಿಗಳಲ್ಲಿ ನಾನೂ ಒಬ್ಬ. 5ನೇ ರನ್ನರ್ ಅಪ್ ಆಗಿದ್ದೇನೆ. ನಿಮ್ಮೆಲ್ಲರ ಪ್ರೀತಿಯಿಂದ ನಾನು ಈ ಜಾಗದಲ್ಲಿದ್ದೀನಿ. ಇದನ್ನೂ ಓದಿ:ನಾನು ಫೇಕ್ ಅಲ್ಲ, ವಿಲನ್ ಅಂದ್ಕೊಂಡರೂ ಪರವಾಗಿಲ್ಲ: ವಿನಯ್ ಗೌಡ
Advertisement
Advertisement
ಸಿಕ್ಕಾಪಟ್ಟೆ ಎಕ್ಸೈಟ್‌ಮೆಂಟ್ ಇದೆ. ನಾನು ಮನೆಗೆ ಹೋಗುವಾಗಲೇ ಅಂದುಕೊಂಡಿದ್ದೆ. ಶೋ ಮುಗಿಯುವ ದಿನವೇ ಮನೆಯಿಂದ ಹೊರಗೆ ಬರಬೇಕು ಅಂತ. ಹಾಗೇ ಆಗಿದೆ. ಗ್ರ‍್ಯಾಂಡ್ ಫಿನಾಲೆ ದಿನ ವೇದಿಕೆಯ ಮೇಲಿಂದ ಬೀಳ್ಕೊಟ್ಟು ಅಲ್ಲಿಂದ ಹೋಗಿದ್ದೇನೆ. ತುಂಬ ಖುಷಿಯಾಗುತ್ತಿದೆ.
Advertisement
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರತಿಯೊಂದೂ ವಿಷಯವೂ ಸವಾಲೇ. ಆ ಎಲ್ಲ ಸವಾಲುಗಳನ್ನು ಎದುರಿಸಿ ಫಿನಾಲೆಯವರೆಗೆ ಬಂದು ಕಾಮಿಡಿಯಲ್ಲಿ ನನ್ನದೇ ಆದ ಛಾಪು ಮೂಡಿಸಿದ್ದೀನಿ. ಫೇವರೇಟ್ ಮೊಮೆಂಟ್ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಮಾತ್ರೆ ತಂದುಕೊಡುತ್ತಿದ್ದದ್ದು. ಇನ್ಮೇಲಿಂದ ಮಾತ್ರೆ ತಂದ್ಕೊಡೋರು ಯಾರೋ ಅಣ್ಣಾ? ತಿಂದ್ಯಾ ಮಲಗಿದ್ಯಾ ಏನು ಮಾಡ್ದೆ ಅಂತೆಲ್ಲ ಕೇಳೋರು ಯಾರೂ ಇಲ್ಲ ಇನ್ಮೇಲೆ ಎಂದು ತುಕಾಲಿ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಅಲಾರ್ಮ್ ರೀತಿಯಲ್ಲಿ ಒಂದು ಹಾಡು ಬರುತ್ತಿತ್ತು. ನಿದ್ದೆಗಣ್ಣಲ್ಲಿದ್ರೂ ಆ ಹಾಡು ಕೇಳಿದ ತಕ್ಷಣ ರಪ್ ಅಂತ ಎಚ್ಚರ ಆಗಿಬಿಡುತ್ತದೆ. ಅದನ್ನು ತುಂಬ ಮಿಸ್ ಮಾಡ್ಕೋತೀನಿ. ಹಾಗೆಯೇ ಎಲ್ಲ ಸ್ಪರ್ಧಿಗಳನ್ನೂ ಮಿಸ್ ಮಾಡ್ಕೋತೀನಿ. ನನ್ನ ಹೆಂಡತಿ ಯಾವ್ದೋ ಲೆಟರ್ ಬರೆದಿದ್ದಾಳೆ ಅಂತ ಹೇಳಿ ತಲೆ ಮೇಲೆ ಡಬ್ಬ ಇಟ್ಕೊಂಡು ಟಾಸ್ಕ್ ಗೆದ್ದೆ. ಆ ಲೆಟರ್ ಬಂದ್ಮೇಲೆ ಗೊತ್ತಾಯ್ತು, ಏನೇನು ಬರ್ದವ್ಳೆ ಅಂತ.
ಈ ನೂರಾ ಹನ್ನೊಂದು ದಿನಗಳಲ್ಲಿ ಮಿಸ್ ಮಾಡ್ಕೊಳ್ಳೋದು ತುಂಬ ಇದೆ. ಎಲ್ಲವನ್ನೂ ಮಿಸ್ ಮಾಡ್ಕೋತೀನಿ. ಆ ಮೆಮರಿ ಬರೀಬೇಕು ಅಂದ್ರೆ ನೂರಾಹನ್ನೊಂದು ಪಿಚ್ಚರ್ ಸ್ಟೋರಿ ಹೇಳ್ಬೇಕಾಗತ್ತೆ. ಈ ಸಲದ ಸೀಸನ್‌ನಲ್ಲಿ ಕಾರ್ತೀಕ್ (Karthik) ಹೀರೋ ಸಿನಿಮಾದಲ್ಲಿ ಹೀರೋ ಎಷ್ಟು ಮುಖ್ಯನೋ ಹಾಗೆ. ಪ್ರತಾಪ್ ಪೋಷಕ ನಟ. ಸಂಗೀತಾ ಶೃಂಗೇರಿ (Sangeetha Sringeri) ಆ ಸಿನಿಮಾದ ಹೀರೊಯಿನ್ ಇದ್ದ ಹಾಗೆ. ಹೀಯೋ- ಹೀರೋಯಿನ್ ಇದ್ದ ಮೇಲೆ ವಿನಯ್ ವಿಲನ್ ಆಗಿರಲೇಬೇಕಲ್ಲಾ ವರ್ತೂರು ಸಂತೋಷಣ್ಣ ನ್ಯಾಯ ಕೊಡುವ ದೇವರ ಥರ. ಕರ್ಣನ ಥರ ಅವರ ಬಗ್ಗೆ ಹೇಳೋಕೆ ಒಂದಾ ಎರಡಾ ಇರೋದು ತುಂಬ ಹೇಳಬಹುದು.
ಈ ನೂರಾಹನ್ನೊಂದು ದಿನಗಳ ಮೆಮರಿಯನ್ನು ಒಂದೇ ಸಾಲಿನಲ್ಲಿ ಹೇಳಬೇಕು ಅಂದ್ರೆ, ನೆನಪುಗಳ ಮಾತು ಮಧುರ. ಬಿಗ್ ಬಾಸ್ ಐ ಮಿಸ್ ಯೂ, ಐ ಲವ್ ಯೂ ನಿಮ್ಮ ಧ್ವನಿ ನನ್ನನ್ನು ತುಂಬ ಎಚ್ಚರಗೊಳಿಸ್ತು. ಒಂದು ಅಶರೀರವಾಣಿ ನಮ್ಮನ್ನೆಲ್ಲ ಕಂಟ್ರೋಲ್ ಮಾಡಿತು ಅಂದ್ರೆ ನೀವು ಎಷ್ಟು ಸ್ಟ್ರಾಂಗ್ ಇರಬೇಕು. ನಿಮ್ಮ ಮೆಂಟಾಲಿಟಿ ಎಷ್ಟು ಸ್ಟ್ರಾಂಗ್ ಇರಬೇಕು. ನಿಮ್ಮ ಮನಸ್ಸು ಎಂಥದ್ದಿರಬೇಕು.
ನನಗೆ ಸ್ಪಷ್ಟವಾಗಿ ಇದ್ದ ಆಸೆಗಳನ್ನು ಪೂರೈಸಿದ್ದಾರೆ. ನಾನು ಅಂದುಕೊಂಡಿದ್ದೆಲ್ಲ ಕೊಟ್ಟಿದೀರಾ. ಅದಕ್ಕಿಂತ ಹೆಚ್ಚು ಕೊಟ್ಟಿದೀರಾ. ನಾನು ನಕ್ಕಾಗ ನೀವೂ ನಕ್ಕಿದ್ದೀರಾ. ನೋವಲ್ಲಿ ನೋವು ಪಟ್ಕೊಂಡಿದ್ದೀರಾ. ನನ್ನ ಜೀವಮಾನದಲ್ಲಿ ಬಿಗ್ ಬಾಸ್ ಅನ್ನೋದು ಒಂದು ಇತಿಹಾಸ.