ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸೆಪ್ಟೆಂಬರ್ 3ರಿಂದ ಇಡಿ ಬಂಧನದಲ್ಲಿದ್ದಾರೆ. ಸೆಪ್ಟೆಂಬರ್ 3ರಂದು ವಿಚಾರಣೆಗೆ ಹಾಜರಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಸೆಪ್ಟೆಂಬರ್ 4ರಂದು ನ್ಯಾಯಾಲಯ ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ 13ರವರೆಗೆ ಇಡಿ ವಶಕ್ಕೆ ನೀಡಿದೆ. ಕಳೆದ ಮೂರು ದಿನಗಳಿಂದ ಸೆಲ್ ನಲ್ಲಿರುವ ಡಿ.ಕೆ.ಶಿವಕುಮಾರ್ ಪೊಲೀಸ್ ಸ್ಟೇಷನ್ ನಲ್ಲಿ ಹೇಗಿದ್ದೀನಿ ಗೊತ್ತಾ ಎಂದು ಕಾಂಗ್ರೆಸ್ ನಾಯಕರ ಮುಂದೆ ಭಾವುಕರಾಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಇಡಿ ವಿಚಾರಣೆ ಬಳಿಕ ಪ್ರತಿದಿನ ಡಿಕೆಶಿಯವರನ್ನು ದೆಹಲಿಯ ತುಘಲಕ್ ಪೊಲೀಸ್ ಸ್ಟೇಷನ್ ನಲ್ಲಿ ಇರಿಸಲಾಗುತ್ತದೆ. ಆಪ್ತರು ಭೇಟಿಯಾದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಜೈಲಿನ ಅವ್ಯವಸ್ಥೆಯ ಬಗ್ಗೆ ಹೇಳಿ ಭಾವುಕರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ರಾಜ್ಯ ಕಾಂಗ್ರೆಸ್ ನಾಯಕ ಈ ವಿಷಯವನ್ನು ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ತುಘಲಕ್ ಪೊಲೀಸ್ ಠಾಣೆಯಲ್ಲಿ ಕಾಮನ್ ಟಾಯ್ಲೆಟ್ ಬಳಸಬೇಕು. ವಿಶ್ರಮಿಸಲು ಒಂದು ದಿವಾನ್ ಕಾಟ್ ನೀಡಿದ್ದು, ಮಲಗಲು ಒಂದು ಚಾಪೆ ಮತ್ತು ಬೆಡ್ ಶೀಟ್ ನೀಡಿದ್ದಾರೆ. ಸೆಲ್ ನಲ್ಲಿಯ ವಾಸನೆಯಿಂದ ಇಲ್ಲಿರಲು ಸಾಧ್ಯವಾಗುತ್ತಿಲ್ಲ. ಠಾಣೆಯಲ್ಲಿ ನೀಡಿರುವ ಸೌಲಭ್ಯಗಳು ಇಷ್ಟೇ ಎಂದು ಡಿ.ಕೆ.ಶಿವಕುಮಾರ್ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.