ಮೈಸೂರಿನಲ್ಲಿರುವ ಪ್ರವಾಸಿತಾಣಗಳಿಗೆ ಜಾರಿಯಾಗುತ್ತಾ ಟಫ್‍ರೂಲ್ಸ್..?

Public TV
1 Min Read
MYS CORONA 5

ಮೈಸೂರು: ಕೊರೊನಾ ಮೂರನೇ ಅಲೆಯ ದೊಡ್ಡ ಅಪಾಯ ಮೈಸೂರಿನ ಮೇಲೆ ಅಪ್ಪಳಿಸಿದೆ. ಒಂದೇ ವಾರದಲ್ಲಿ ಮೈಸೂರಲ್ಲಿ ಕೊರೊನಾ ದೊಡ್ಡ ಮಟ್ಟದಲ್ಲಿ ಸ್ಫೋಟವಾಗಿವೆ. ಹೀಗಾಗಿ ಜಿಲ್ಲೆಯ ಪ್ರವಾಸಿತಾಣ ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಟಫ್‍ರೂಲ್ಸ್ ಜಾರಿ ತರಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

MYS CORONA 3

ರಾಜ್ಯದ ಪ್ರವಾಸಿತಾಣಗಳಲ್ಲಿ ಒಂದಾಗಿರುವ ಹಾಗೂ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮೈಸೂರಿಗೆ 3ನೇ ಅಲೆಯ ಭೀತಿ ಎದುರಾಗಿದೆ. ನೋಡನೋಡ್ತಿದ್ದಂತೆ ಕೊರೊನಾ ಬಿಗ್‍ಬ್ಲಾಸ್ಟ್ ಆಗಿ, ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಅಲ್ಲದೆ ರಾಜಧಾನಿ ಬೆಂಗಳೂರಿಗೆ ಹತ್ತಿರವಾದ ಕಾರಣ ದಿನನಿತ್ಯ ಕೆಲಸಕ್ಕಾಗಿ ಓಡಾಡುವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ರೈಲು ಹಾಗೂ ಬಸ್‍ಗಳ ಮೂಲಕ ಪ್ರಯಾಣಿಸುತ್ತಲೇ ಇರುತ್ತಾರೆ. ಇದಕ್ಕೆ ಕಡಿವಾಣ ಹಾಕುವುದೇ ಜಿಲ್ಲಾಡಾಳಿತಕ್ಕೆ ಸವಾಲಿನ ಕೆಲಸವಾಗಿದೆ.

MYS CORONA 4

ಕಳೆದ ಒಂದು ವಾರದಿಂದ ಸೋಂಕಿನ ಸಂಖ್ಯೆ ಸಾವಿರ ಗಡಿ ದಾಟುತ್ತಲೆ ಸಾಗಿದೆ. ನಿನ್ನೆ 1892 ಕೊರೊನಾ ಕೇಸ್ ಬಂದಿದೆ. ದಿನ ದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಸ್ಥಳೀಯರಲ್ಲಿ ಹಾಗೂ ಜಿಲ್ಲಾಡಾಳಿತಕ್ಕೆ ಚಿಂತೆಗೇಡು ಮಾಡಿದೆ. ಬೆಂಗಳೂರಿನಿಂದ ಮೈಸೂರಿಗೆ ನಿತ್ಯ ಓಡಾಡೋರ ಸಂಖ್ಯೆಯಲ್ಲಿ ಹೆಚ್ಚಳ. ಪ್ರವಾಸಿ ಕೇಂದ್ರಗಳನ್ನು ಇನ್ನೂ ತೆರೆದಿರುವುದು. ಪ್ರವಾಸಿ ಕೇಂದ್ರಗಳಲ್ಲಿ ಜನರ ನಿಯಂತ್ರಿಸುವಲ್ಲಿ ವಿಫಲವಾಗಿರುವುದು. ಕಾರ್ಖಾನೆಗಳಲ್ಲಿ ಕಾರ್ಮಿಕರ ನಿಯಂತ್ರಣಕ್ಕೆ ಸೂಕ್ತ ಕ್ರಮ ಜರುಗಿಸದೇ ಇರುವುದು. ಹಾಗೂ ಜನರು ರೂಲ್ಸ್ ಮರೆತು ಓಡಾಡುವುದೇ ಮೈಸೂರಲ್ಲಿ ಸೋಂಕು ಹೆಚ್ಚಳವಾಗಲು ಮುಖ್ಯ ಕಾರಣವಾಗಿದೆ. ಇದನ್ನೂ ಓದಿ: 11 ವರ್ಷದವರೆಗೆ ಮಾಸ್ಕ್ ಕಡ್ಡಾಯವಲ್ಲ: ಕೇಂದ್ರ

MYS CORONA 1

ವೀಕೆಂಡ್ ಕರ್ಫ್ಯೂ ಹಾಗೂ ಸಿನಿಮಾ ಮಂದಿರಗಳಲ್ಲಿ ಸೀಟು ಭರ್ತಿಗೆ 50-50 ನಿಯಮ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಚಿತ್ರಮಂದಿರಗಳ ಮಾಲೀಕರು, ಇಂದಿನಿಂದ ಮೈಸೂರಿನಲ್ಲಿ ಚಲನಚಿತ್ರ ಮಂದಿರಗಳನ್ನು ಬಂದ್ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ರೂಲ್ಸ್ ಮುಗಿಯೋವರೆಗೆ ಚಿತ್ರಮಂದಿರ ಬಂದ್ ಆಗಿರಲಿವೆ. ಇತ್ತ ಮೈಸೂರಂದ್ರೆ ಪ್ರವಾಸಿಗರ ಹಾಟ್‍ಸ್ಪಾಟ್. ಕೊರೊನಾ ಹೆಚ್ಚಾಗ್ತಿದ್ರೂ ಜಿಲ್ಲಾಡಳಿತ ಮಾತ್ರ ಪ್ರವಾಸಿತಾಣಗಳ ಮೇಲೆ ಕ್ರಮ ಕೈಗೊಂಡಿಲ್ಲ. ಹಾಗಾಗಿ ನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರು ಬರ್ತಾನೇ ಇದ್ದಾರೆ. ಈಗ ಕೊರೊನಾ ಡಬ್ಲಿಂಗ್ ಆಗ್ತಿರೋ ಹೊತ್ತಲ್ಲಿ ಪ್ರವಾಸಿತಾಣಗಳಿಗೆ ಕಠಿಣ ನಿಯಮ ತರುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *