ಬೆಂಗಳೂರು: ದೇಶದ ಪ್ರಧಾನಿಯವರು ಟಿಬಿ ಮುಕ್ತ ಭಾರತಕ್ಕಾಗಿ (TB Mukt Bharat Abhiyan) ಪಣ ತೊಟ್ಟಿದ್ದಾರೆ. ತಮ್ಮ ಕನಸಿನ ಸಾಕಾರಕ್ಕಾಗಿ ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆ ನೀಡಿದ್ದಾರೆ ಎಂದು ರಾಜ್ಯಪಾಲ (Governor) ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಹೇಳಿದರು.
ಕ್ಷಯ ರೋಗಿಗಳ ದತ್ತು ಪಡೆಯುವ ಮತ್ತು ನಿ-ಕ್ಷಯ ಮಿತ್ರ ದಾನಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಟಿಬಿ ಮುಕ್ತ ಭಾರತ ಅಭಿಯಾನವನ್ನು ಜನಾಂದೋಲನವನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾಗರಿಕರು, ಎನ್‍ಜಿಒಗಳು, ಕಾರ್ಪೋರೇಟ್ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು ನಿ-ಕ್ಷಯ ಮಿತ್ರರಾಗುವ ಮೂಲಕ ಟಿಬಿ ಮುಕ್ತ ಭಾರತ ಅಭಿಯಾನವನ್ನು ಬೆಂಬಲಿಸಬೇಕು. ಒಬ್ಬರ ಜೀವವನ್ನು ಉಳಿಸುವ ಕಾರ್ಯವು ಮಾನವೀಯ ಸೇವೆಯ ಅತ್ಯುತ್ತಮ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಪತ್ನಿ ತಡವಾಗಿ ಏಳುತ್ತಾಳೆ – ಪತಿಯಿಂದ ಪೊಲೀಸರಿಗೆ ದೂರು
`ನಿ-ಕ್ಷಯ 2.0′ ಪೋರ್ಟ್‌ಲ್ ಸುಮಾರು 13.5 ಲಕ್ಷ ಕ್ಷಯ ರೋಗಿಗಳು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 89 ಲಕ್ಷ ಸಕ್ರಿಯ ಟಿಬಿ ರೋಗಿಗಳು ದತ್ತು ತೆಗೆದುಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ನಿ-ಕ್ಷಯ ಪೋರ್ಟಲ್ ಟಿಬಿಯಿಂದ ಬಳಲುತ್ತಿರುವ ವ್ಯಕ್ತಿಗಳ ಬೆಂಬಲಕ್ಕಾಗಿ ವೇದಿಕೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.
ವಿಶ್ವಸಂಸ್ಥೆಯ ಪ್ರಕಾರ, ಪ್ರಪಂಚದ ಅನೇಕ ದೇಶಗಳು 2030 ರ ವೇಳೆಗೆ ಟಿಬಿಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿವೆ. 2025 ರ ವೇಳೆಗೆ ಭಾರತವನ್ನು ಟಿಬಿ ಮುಕ್ತ ಮಾಡುವ ಗುರಿಯನ್ನು ಪ್ರಧಾನಿ ಮೋದಿ (Narendra Modi) ಹೊಂದಿದ್ದಾರೆ. ರಾಜ್ಯವು ಕ್ಷಯ ಮುಕ್ತ ಕರ್ನಾಟಕ 2025ಕ್ಕಾಗಿ (TB Mukt Karnataka) ಈ ಯೋಜನೆಯನ್ನು ಅಳವಡಿಸಿಕೊಂಡಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಗುರುತಿಸಲಾದ 39,745 ಟಿಬಿ ರೋಗಿಗಳಲ್ಲಿ 25,895 ರೋಗಿಗಳು ಪೋಷಣ್ ಆಧಾರ್‍ಗೆ ಒಪ್ಪಿಗೆ ನೀಡಿದ್ದಾರೆ. ಅವರಲ್ಲಿ 25,110 ರೋಗಿಗಳನ್ನು ಅನೇಕ ಸಾಮಾಜಿಕ ಸಂಸ್ಥೆಗಳು, ಸಾರ್ವಜನಿಕ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ದತ್ತು ಪಡೆದಿದ್ದಾರೆ. 100 ಟಿಬಿ ರೋಗಿಗಳನ್ನು ರಾಜಭವನದಿಂದ (Raj Bhavan) ದತ್ತು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ರಾಜ್ಯಸಭಾ ಸದಸ್ಯರಾದ ಲೆಹರ್ ಸಿಂಗ್ ಸಿರೋಯಾ ಅವರು 500 ಟಿಬಿ ರೋಗಿಗಳನ್ನು ಕಾರ್ಯಕ್ರಮದಲ್ಲಿ ದತ್ತು ಪಡೆದರು. ಇದನ್ನೂ ಓದಿ: 3ರ ಬಾಲೆಯ ಕೈಯಿಂದ ಸಿಡಿದ ಗುಂಡು: ಸಹೋದರಿ ಸಾವು