ತಿರುಪತಿ: ಇಲ್ಲಿಯವರೆಗೆ ತೆಲುಗಿನನಲ್ಲಿ ಮಾತ್ರ ಪ್ರಸರಾವಾಗುತ್ತಿದ್ದ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಅ.11 ರಿಂದ ಕನ್ನಡ ಮತ್ತು ಹಿಂದಿಯಲ್ಲಿ ಪ್ರಸಾರವಾಗಲಿದೆ.
ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ನಿರ್ವಹಿಸುವ ಈ ಚಾನೆಲ್ ಬ್ರಹ್ಮೋತ್ಸವದ ಗರುಡಸೇವಾ ಆಚರಣೆಯ ವೇಳೆ ಈ ಚಾನೆಲಿಗೆ ಆಂಧ್ರ ಸಿಎಂ ಜಗನ್ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ
Advertisement
Advertisement
ಈ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟಿಟಿಡಿ ಆಹ್ವಾನ ನೀಡಿದೆ. ಇದನ್ನೂ ಓದಿ: ಮದುವೆ ಊಟಕ್ಕೆ ಕರೆದಿಲ್ಲವೆಂದು ಫೋಟೋಗಳನ್ನೇ ಡಿಲೀಟ್ ಮಾಡಿದ ಫೋಟೋಗ್ರಾಫರ್!
Advertisement
2008ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೇಲ್ 24 ಗಂಟೆಯ ತೆಲುಗಿನ ವಾಹಿನಿಯನ್ನು ಉದ್ಘಾಟಿಸಿದ್ದರು. ದಶಕದ ಬಳಿಕ ತಮಿಳಿನಲ್ಲೂ ಪ್ರಸಾರ ಮಾಡಿತ್ತು. ಇದನ್ನೂ ಓದಿ: ಪೋಷಕರೇ ಎಚ್ಚರ: ಆಟವಾಡುವಾಗ ಆಯತಪ್ಪಿ 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು
Advertisement
ಅ.7 ರಂದು ಆರಂಭವಾಗಲಿರುವ ತಿರುಪತಿ ಬಾಲಾಜಿ ವಾರ್ಷಿಕ ನವರಾತ್ರಿ ಬ್ರಹ್ಮೋತ್ಸವ ಭಕ್ತರ ಪಾಲ್ಗೊಳ್ಳುವಿಕೆ ಇಲ್ಲದೇ ನಡೆಯಲಿದೆ. ಕಳೆದ ವರ್ಷವೂ ಈ ಧಾರ್ಮಿಕ ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ ಇರಲಿಲ್ಲ. ಈ ವರ್ಷವೂ ಕೋವಿಡ್ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಮತಿ ನೀಡುವುದಿಲ್ಲ ಎಂದು ಟಿಟಿಡಿ ಹೇಳಿದೆ.