ಅಮರಾವತಿ: ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ತಿರುಪತಿಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಗುರುವಾರ ತನ್ನ 2022-23ನೇ ಸಾಲಿನ ಬಜೆಟ್ ಮಂಡಿಸಿದೆ.
ತಿರುಮಲದ ಪುರಾತನ ವೆಂಕಟೇಶ್ವರ ದೇವಾಲಯದ ಆಡಳಿತ ಮಂಡಳಿ 2022-23ರ ವಾರ್ಷಿಕ ಬಜೆಟ್‌ನಲ್ಲಿ 3,096.40 ಕೋಟಿ ರೂ. ಆದಾಯವನ್ನು ಅಂದಾಜಿಸಿದೆ.
Advertisement
ಮುಂದಿನ 12 ತಿಂಗಳ ಹಣಕಾಸು ಯೋಜನೆಯನ್ನು ಬಜೆಟ್ ಸಭೆಯಲ್ಲಿ ಪರಿಶೀಲಿಸಿದ ಬಳಿಕ ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಜವಾಹರ ರೆಡ್ಡಿ ವಾರ್ಷಿಕ ಬಜೆಟ್ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: 290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ
Advertisement
Advertisement
ದೇವಾಲಯದ ವಾರ್ಷಿಕ ಆದಾಯದಲ್ಲಿ ಸುಮಾರು 1,000 ಕೋಟಿ ರೂ. ಹುಂಡಿಯಲ್ಲಿ (ದಾನ-ಪಾತ್ರೆ) ಭಕ್ತರಿಂದ ಬರುತ್ತದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿನ ಠೇವಣಿ ಮೇಲಿನ ಬಡ್ಡಿ ಸುಮಾರು 668.5 ಕೋಟಿ ರೂ., ವಿವಿಧ ರೀತಿಯ ಟಿಕೆಟ್‌ಗಳ ಮಾರಾಟದಿಂದ 362 ಕೋಟಿ ರೂ. ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.
Advertisement
ಲಡ್ಡು ಪ್ರಸಾದ ಮಾರಾಟದಿಂದ 365 ಕೋಟಿ ರೂ., ವಸತಿ ಹಾಗೂ ಮದುವೆ ಮಂಟಪದ ಬಾಡಿಗೆಯಿಂದ 95 ಕೋಟಿ ರೂ., ಭಕ್ತರು ಅರ್ಪಿಸುವ ಕೂದಲು ಮಾರಾಟದಿಂದ 126 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಮಂಡಳಿಯ ವಿವಿಧ ಸೇವೆಗಳ ವೆಚ್ಚವನ್ನು 1,360 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ
ಭಕ್ತರು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಬಂದು ತಮ್ಮ ಕೂದಲನ್ನು ದಾನ ಮಾಡಿದರೆ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯುತ್ತಾರೆ ಹಾಗೂ ಅವರ ಎಲ್ಲಾ ತೊಂದರೆಗಳು ದೂರವಾಗುತ್ತದೆ ಎಂಬುದು ಜನಪ್ರಿಯ ನಂಬಿಕೆ. ಲಕ್ಷ್ಮಿ ದೇವಿ ಇಲ್ಲಿ ಎಲ್ಲಾ ಪಾಪಗಳನ್ನು ಹಾಗೂ ದುಷ್ಟತನವನ್ನು ತೊರೆಯುವ ವ್ಯಕ್ತಿಯ ಎಲ್ಲಾ ದುಃಖಗಳನ್ನು ದೂರ ಮಾಡುತ್ತಾಳೆ ಎಂದು ನಂಬಲಾಗುತ್ತದೆ.
ಈ ನಂಬಿಕೆಯನ್ನು ಪೂರ್ಣಗೊಳಿಸಲು ಜನರು ಎಲ್ಲಾ ದುಷ್ಟತನ ಹಾಗೂ ಪಾಪವನ್ನು ತಮ್ಮ ಕೂದಲ ರೂಪದಲ್ಲಿ ಬಿಡುತ್ತಾರೆ. ಪ್ರತಿದಿನ ಸುಮಾರು 20 ಸಾವಿರ ಭಕ್ತರು ತಿರುಪತಿ ದೇವಸ್ಥಾನಕ್ಕೆ ಕೇಶ ದಾನಕ್ಕೆ ಹೋಗುತ್ತಾರೆ. ಈ ಕೆಲಸಕ್ಕಾಗಿ ಸುಮಾರು 600 ಕ್ಷೌರಿಕರನ್ನು ದೇವಾಲಯದ ಆವರಣದಲ್ಲಿ ಇರಿಸಲಾಗಿದೆ.