ಮಂಗಳೂರು: ಚೀನಿಕಾಯಿ ಒಳಗೆ ಗಾಂಜಾ ತುಂಬಿಸಿ ವಿದೇಶಕ್ಕೆ ಸಾಗಿಸಲು ಯತ್ನಿಸಿದ ವ್ಯಕ್ತಿಯನ್ನು ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪೊಳಲಿ ಸಮೀಪದ ಕಲಾಯಿ ನಿವಾಸಿ ತಸ್ಲಿಮ್ ಯಾನೆ ಬಶೀರ್ ಬಂಧಿತ ವ್ಯಕ್ತಿ. ಈತ ಮೂರು ಚೀನಿಕಾಯಿ ಒಳಗಡೆ 10 ಕೆ.ಜಿ ಗಾಂಜಾ ತುಂಬಿಸಿ ಒಯ್ಯುತ್ತಿರುವುದು ಪತ್ತೆಯಾಗಿದೆ. ದೋಹಾಕ್ಕೆ ತೆರಳಲೆಂದು ಏರ್ ಪೋರ್ಟಿಗೆ ಬಂದಿದ್ದ ಸಂದರ್ಭದಲ್ಲಿ ಬಶೀರ್ ಜೊತೆಗಿದ್ದ ಲಗೇಜನ್ನು ಸಿಐಎಸ್ ಎಫ್ ಭದ್ರತಾ ಪಡೆ ತಪಾಸಣೆ ನಡೆಸಿದ್ದಾರೆ.
Advertisement
ಈ ವೇಳೆ ಮೂರು ಚೀನಿಕಾಯಿ ಇದ್ದುದ್ದು ಶಂಕೆಗೆ ಕಾರಣವಾಗಿದೆ. ನಂತರ ತಪಾಸಣೆ ನಡೆಸಿದಾಗ ಹಣ್ಣಿನ ಒಳಭಾಗದ ತಿರುಳನ್ನು ತೆಗೆದು ಗಾಂಜಾ ತುಂಬಿಸಿಟ್ಟಿದ್ದು ಗೊತ್ತಾಗಿದೆ. ಸದ್ಯ ಸುಮಾರು 60 ಸಾವಿರ ಮೌಲ್ಯದ ಗಾಂಜಾ ಮತ್ತು ಆರೋಪಿ ಬಶೀರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement