ಮಂಡ್ಯ: ಸಕ್ಕರೆ ನಾಡಿನಲ್ಲಿ ಮತ್ತೆ ಮಕ್ಕಳ ಕಳ್ಳರ ಆತಂಕ ಶುರುವಾಗಿದ್ದು, ಮನೆಯ ಮುಂದೆ ಇದ್ದ ಐದು ವರ್ಷದ ಮಗುವನ್ನು ಇಬ್ಬರು ಮುಸುಕುದಾರಿಗಳು ಅಪಹರಣ (Baby Kidnap) ಮಾಡಲು ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಜರುಗಿದೆ.
ಕಿರುಗಾವಲು ಗ್ರಾಮದ 5 ವರ್ಷದ ಮಗು ಕಳ್ಳತನಕ್ಕೆ ಇಬ್ಬರು ಮುಸುಕುದಾರಿಗಳು ಬಂದಿದ್ದು, ಕಳ್ಳರನ್ನು ಕಂಡು ಮಗು ಕಿರುಚಿದ್ದು, ಮಗುವಿನ ಶಬ್ದ ಕೇಳಿ ಮುಸುಕುದಾರಿಗಳು ಪರಾರಿಯಾಗಿದ್ದಾರೆ. ಸೋಮವಾರ ಮಧ್ಯಾಹ್ನ ಪೌಡರ್ ಮಾರಾಟಕ್ಕೆ ಇಬ್ಬರು ಕಿರುಗಾವಲು ಗ್ರಾಮಕ್ಕೆ ಬಂದಿದ್ದು, ಈ ವೇಳೆ ಮಹಿಳೆಯರನ್ನು ಪೌಡರ್ ತೆಗೆದುಕೊಳ್ಳುತ್ತೀರಾ ಎಂದು ಕೇಳಿದ್ದಾರೆ. ಮಹಿಳೆಯರು ನಮಗೆ ಯಾವ ಪೌಡರ್ ಬೇಡಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಬಲಿ- ನಾಲ್ವರಿಗೆ ಗಾಯ, ಚಾಲಕ ವಶಕ್ಕೆ
ಮತ್ತೆ ಸಂಜೆಯ ವೇಳೆ ಅದೇ ಬೀದಿಯಲ್ಲಿ ಬೈಕ್‍ನಲ್ಲಿ ಇಬ್ಬರು ಓಡಾಡಿದ್ದಾರೆ. ಬಳಿಕ ರಾತ್ರಿ 8 ಗಂಟೆಯ ಸುಮಾರಿಗೆ ಸ್ಪ್ಲೆಂಡರ್ ಬೈಕ್‍ನಲ್ಲಿ ಬಂದ ಇಬ್ಬರು ಮುಸುಕುದಾರಿಗಳು ಮನೆಯ ಮುಂದೆ ಇದ್ದ ಮಗು ಅಪಹರಣಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಗು ಮುಸುಕುದಾರಿಗಳನ್ನು ಕಂಡು ಕಿರುಚಿದ್ದು ಮಗುವಿನ ಶಬ್ದ ಕೇಳಿ ಮುಸುಕುದಾರಿಗಳು ಪರಾರಿಯಾಗಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಮಗುವಿನ ಪೋಷಕರು ಮಗುವನ್ನು ಸಮಾಧಾನ ಪಡಿಸಿದ್ದಾರೆ. ಮಗು ಅಪಹರಣಕ್ಕೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಪೋಷಕರು ಕಿರುಗಾವಲು ಪೊಲೀಸ್ ಠಾಣೆ (Kirugavalu Police Station) ಗೆ ದೂರನ್ನು ಸಹ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k