ದಕ್ಷಿಣ ಭಾರತದ ಜನಪ್ರಿಯ ಸಿಹಿ ತಿಂಡಿಗಳಲ್ಲಿ ಕಜ್ಜಾಯ. ಇದನ್ನು ಜನರು ತಿನ್ನಲು ಎಷ್ಟ ಇಷ್ಟಪಡುವತ್ತಾರೋ ಅಷ್ಟೇ ಮಾಡಲು ಕಷ್ಟ ಪಡುತ್ತಾರೆ. ಏಕೆಂದರೆ ಕಜ್ಜಾಯದ ಪಾಕವಿಧಾನ ಅಷ್ಟು ಸುಲಭವಾಗಿಲ್ಲ. ಆದರೆ ಅಡುಗೆ ಪ್ರಿಯರಿಗೆ ಕಜ್ಜಾಯ ಮಾಡುವುದು ಎಂದರೆ ಹಬ್ಬ. ನೀವು ಒಮ್ಮೆ ಟ್ರೈ ಮಾಡಿ. ಈ ಪಾಕವನ್ನು 2 ತಿಂಗಳ ಕಾಲ ಇಟ್ಟುಕೊಳ್ಳಬಹುದು.
Advertisement
ಬೇಕಾಗಿರುವ ಪದಾರ್ಥಗಳು:
* ಅಕ್ಕಿ – 1 ಕಪ್
* ಬಿಳಿ ಎಳ್ಳು – 1 ಟೀಸ್ಪೂನ್
* ಗಸಗಸೆ -1 ಟೀಸ್ಪೂನ್
* ಬೆಲ್ಲ – 2 ಅಚ್ಚು
* ನೀರು – ¼ ಕಪ್
* ಏಲಕ್ಕಿ ಪುಡಿ – ¼ ಟೀಸ್ಪೂನ್
* ಕರಿ ಮೆಣಸು ಪುಡಿ – ¼ ಟೀಸ್ಪೂನ್
* ತುಪ್ಪ, ಆಳವಾಗಿ ಹುರಿಯಲು
Advertisement
Advertisement
ಮಾಡುವ ವಿಧಾನ:
* ಮೊದಲನೆಯದಾಗಿ, 1 ಕಪ್ ಅಕ್ಕಿಯನ್ನು 4 ಗಂಟೆಗಳ ಕಾಲ ನೆನೆಸಿ. ನಂತರ ನೀರನ್ನು ಪೂರ್ತಿಯಾಗಿ ತೆಗೆದು, ಒಣ ಬಟ್ಟೆಯ ಮೇಲೆ ಹರಡಿ. 30 ನಿಮಿಷಗಳ ಕಾಲ ಒಣಗಿಸಲು ಬಿಡಿ.
* ಅಕ್ಕಿ ಇನ್ನೂ ತೇವವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಸಂಪೂರ್ಣವಾಗಿ ಒಣಗಲು ಬಿಡಬೇಡಿ.
* ಈಗ ಅಕ್ಕಿಯನ್ನು ಮಿಕ್ಸಿಗೆ ವರ್ಗಾಯಿಸಿ ಪುಡಿ ಮಾಡಿಕೊಳ್ಳಿ. ಅಕ್ಕಿ ಹಿಟ್ಟನ್ನು ಜರಡಿಯಾಡಿ.
* ತವಾವನ್ನು ಬಿಸಿ ಮಾಡಿಕೊಂಡು ಅದಕ್ಕೆ ಎಳ್ಳು ಮತ್ತು 1 ಟೀಸ್ಪೂನ್ ಗಸಗಸೆ ರೋಸ್ಟ್ ಮಾಡಿ. ಪರಿಮಳ ಬರುವವರೆಗೆ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
Advertisement
* ನಂತರ, ದೊಡ್ಡ ಪಾತ್ರೆಗೆ ನೀರು ಬೆರೆಸಿ ಬೆಲ್ಲವನ್ನು ಹಾಕಿ. ಬೆಲ್ಲ ಕರಗುವ ತನಕ ಚೆನ್ನಾಗಿ ಬೇಯಿಸಿ. ಬೆಲ್ಲದ ಸಿರಪ್ ಅನ್ನು ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ.
* ಬೆಲ್ಲದ ಸಿರಪ್‍ಗೆ ಅಕ್ಕಿ ಹಿಟ್ಟನ್ನು ಗಂಟಾಗದಂತೆ ಮಿಶ್ರಣ ಮಾಡಿ. ಹುರಿದ ಗಸಗಸೆ ಮತ್ತು ಎಳ್ಳು ಕೂಡ ಸೇರಿಸಿ.
* ಇದಲ್ಲದೆ ¼ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು ಳಿ ಟೀಸ್ಪೂನ್ ಕರಿ ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಲ್ಲವನ್ನೂ ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
* ಮಿಶ್ರಣವನ್ನು ಗಾಜಿನ ಬಟ್ಟಲಿಗೆ ವರ್ಗಾಯಿಸಿ. ಈ ಮಿಶ್ರಣ ಒಣಗದಂತೆ ನೊಡಿಕೊಳ್ಳುವುದಕ್ಕೆ ಎಣ್ಣೆ ಅಥವಾ ತುಪ್ಪದೊಂದಿಗೆ ಮಿಕ್ಸ್ ಮಾಡಿ 12 ಗಂಟೆ ಕಾಲ ಮುಚ್ಚಿಡಿ.
ಫ್ರೈ ಮಾಡುವುದು ಹೇಗೆ?
* 12 ಗಂಟೆಗಳ ನಂತರ, ಮೃದುವಾದ ಹಿಟ್ಟಿಗೆ ಬಾಳೆಹಣ್ಣನ್ನು ಬೆರೆಸಿ ಒಂದು ಟೇಬಲ್‍ಸ್ಪೂನ್ ಅಕ್ಕಿ ಹಿಟ್ಟನ್ನು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿ.
* ಮಿಶ್ರಣವನ್ನು ಉದ್ದಿನ ವಡ್ಡೆಯಂತೆ ಒತ್ತಿ ಚಪ್ಪಟೆ ಮಾಡಿ
* ರಸವನ್ನು ಬೇರ್ಪಡಿಸದೆ ನಿಧಾನವಾಗಿ ತೆಗೆಯಿರಿ.
* ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಎರಡೂ ಬದಿಗಳಲ್ಲಿ ಡೀಪ್ ಫ್ರೈ ಮಾಡಿ.
ಗಾಳಿಯಾಡದ ಡಬ್ಬದಲ್ಲಿ ಕಜ್ಜಾಯವನ್ನು ಸಂಗ್ರಹಿಸುವುದರಿಂದ ಈ ಮಿಶ್ರಣವನ್ನು 2 ವಾರಗಳ ಕಾಲ ಇಟ್ಟುಕೊಳ್ಳಬಹುದು.