ಸ್ವೀಟ್ ಲಸ್ಸಿ ಪಂಜಾಬಿ ಪಾನೀಯವಾಗಿದ್ದು, ಉತ್ತರ ಭಾರತದಾದ್ಯಂತ ಇದು ಜನಪ್ರಿಯ. ಸಾಮಾನ್ಯವಾಗಿ ಊಟದ ಬಳಿಕ ಅಥವಾ ಬೇಸಿಗೆಯ ದಿನಗಳಲ್ಲಿ ದೇಹವನ್ನು ತಂಪಾಗಿಡಲು ಇದನ್ನು ಸವಿಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಟ್ರಾಬೆರಿ, ಮ್ಯಾಂಗೋ, ರೋಸ್ ಹೀಗೆ ವಿವಿಧ ಫ್ಲೇವರ್‌ಗಳಲ್ಲಿ ಲಸ್ಸಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಾವಿಂದು ಪಂಜಾಬ್‌ನ ಸಾಂಪ್ರದಾಯಿಕ ಸ್ವೀಟ್ ಲಸ್ಸಿ (Sweet Lassi) ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ. ಇದಕ್ಕೆ ಯಾವುದೇ ಹೆಚ್ಚುವರಿ ಫ್ಲೇವರ್ ಸೇರಿಸಲಾಗಿಲ್ಲ ಹಾಗೂ ಮಾಡೋದು ಅತ್ಯಂತ ಸುಲಭವಾಗಿದೆ. ಸಾಂಪ್ರದಾಯಿಕ ಪಂಜಾಬಿ ಸ್ವೀಟ್ ಲಸ್ಸಿ ನೀವು ಕೂಡಾ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಸಾದಾ ಮೊಸರು – 2 ಕಪ್
ಸಕ್ಕರೆ – 3 ಟೀಸ್ಪೂನ್
ಏಲಕ್ಕಿ ಪುಡಿ – ಕಾಲು ಟೀಸ್ಪೂನ್
ಹಾಲು – ಅರ್ಧ ಕಪ್
ಕತ್ತರಿಸಿದ ಒಣ ಹಣ್ಣುಗಳು – 1 ಟೀಸ್ಪೂನ್ (ಐಚ್ಛಿಕ) ಇದನ್ನೂ ಓದಿ: ಸ್ವೀಟ್ ರಂಗೀಲಾ ಬರ್ಫಿ ಟೇಸ್ಟ್ ಮಾಡಿ ಥ್ರಿಲ್ ಆಗಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಳ್ಳಿ.
* ಅದಕ್ಕೆ ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ.
* ಈಗ ಹ್ಯಾಂಡ್ ಬೀಟರ್ ಅಥವಾ ಹ್ಯಾಂಡ್ ಬ್ಲೆಂಡರ್ ಬಳಸಿ ಮೊಸರನ್ನು ನಯವಾಗುವವರೆಗೆ ಚೆನ್ನಾಗಿ ವಿಸ್ಕ್ ಮಾಡಿಕೊಳ್ಳಿ.
* ಈಗ ಮೊಸರಿಗೆ ಹಾಲು ಸೇರಿಸಿ ಮತ್ತೆ 1-2 ನಿಮಿಷ ಚೆನ್ನಾಗಿ ವಿಸ್ಕ್ ಮಾಡಿಕೊಳ್ಳಿ.
* ಇದೀಗ ಸ್ವೀಟ್ ಲಸ್ಸಿ ತಯಾರಾಗಿದ್ದು, ಅದನ್ನು ಗ್ಲಾಸ್‌ಗಳಿಗೆ ಸುರಿದು ಕತ್ತರಿಸಿದ ಒಣ ಹಣ್ಣುಗಳಿಂದ ಅಲಂಕರಿಸಿ ಸವಿಯರಿ. ಇದನ್ನೂ ಓದಿ: ಡಿಫರೆಂಟ್ ಆಗಿ ಮಾಡಿ ರುಚಿಕರ ಈರುಳ್ಳಿ ಪರೋಟ