ಗ್ರೀನ್ ಚಟ್ನಿ ನೀವು ಮೊದಲಿನಿಂದಲೇ ಸವಿದಿರುತ್ತೀರಿ. ಸಮೋಸಾ, ಪಾನಿ ಪೂರಿ ಸೇರಿದಂತೆ ಹಲವು ವಿಧದ ತಿಂಡಿಗಳೊಂದಿಗೆ ಸವಿದು ಇದರ ರುಚಿ ನಿಮಗೆ ಗೊತ್ತೇ ಇದೆ. ಆದರೆ ನೀವೆಂದಾದರೂ ಗ್ರೀನ್ ಚಟ್ನಿ ಸ್ಯಾಂಡ್ವಿಚ್ ಸವಿದಿದ್ದೀರಾ? ಇಲ್ಲ ಎಂದರೆ ಇಂದು ನೀವೇ ಇದನ್ನು ಮನೆಯಲ್ಲಿ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಕೊತ್ತಂಬರಿ ಸೊಪ್ಪು – 1 ಕಪ್
ತಾಜಾ ತೆಂಗಿನಕಾಯಿ ತುರಿ – ಕಾಲು ಕಪ್
ಹಸಿರು ಮೆಣಸಿನಕಾಯಿ – 2-3
ಸಕ್ಕರೆ – 1 ಟೀಸ್ಪೂನ್
ನೀರು – 2-3 ಟೀಸ್ಪೂನ್
ನಿಂಬೆ ರಸ – ಕಾಲು ಟೀಸ್ಪೂನ್
ಉಪ್ಪು – ಚಿಟಿಕೆ ಇದನ್ನೂ ಓದಿ: ಹೀಗೆ ಮಾಡಿ ಕ್ರಿಸ್ಪಿ ಹಾಗಲಕಾಯಿ ಫ್ರೈಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಮಿಕ್ಸರ್ ಜಾರ್ಗೆ ಕೊತ್ತಂಬರಿ ಸೊಪ್ಪು, ತಾಜಾ ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಸಕ್ಕರೆ, ನಿಂಬೆ ರಸ ಮತ್ತು ಉಪ್ಪು ಸೇರಿಸಿ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
* ನಡುವೆ 2-3 ಟೀಸ್ಪೂನ್ ನೀರು ಸೇರಿಸಿ ಮಿಶ್ರಣ ಮಾಡಿ. ಹೆಚ್ಚು ನೀರು ಸೇರಿಸಬೇಡಿ. ಏಕೆಂದರೆ ಚಟ್ನಿ ದಪ್ಪವಿದ್ದಷ್ಟು ಉತ್ತಮ.
* ಈಗ ಬ್ರೆಡ್ ಸ್ಲೈಸ್ಗಳನ್ನು ತೆಗೆದುಕೊಂಡು ಅದರ ಒಂದು ಬದಿಗೆ ಸ್ವಲ್ಪ ಬೆಣ್ಣೆಯನ್ನು ಹರಡಿ.
* ಅದರ ಮೇಲೆ ಒಂದು ಟೀಸ್ಪೂನ್ನಷ್ಟು ಗ್ರೀನ್ ಚಟ್ನಿ ಹಾಕಿಕೊಂಡು ಹರಡಿ.
* ಎಲ್ಲಾ ಬ್ರೆಡ್ಗೂ ಇದೇ ರೀತಿ ಮಾಡಿ, 2-3 ಪದರಗಳಲ್ಲಿ ಜೋಡಿಸಿ.
* ನಿಮ್ಮ ಆಯ್ಕೆಯಂತೆ ತ್ರಿಕೋನ ಅಥವಾ ಚೌಕಾಕಾರವಾಗಿ ಕತ್ತರಿಸಿ.
* ಇದೀಗ ಗ್ರೀನ್ ಚಟ್ನಿ ಸ್ಯಾಂಡ್ವಿಚ್ ತಯಾರಾಗಿದ್ದು, ಚಹಾ, ಕಾಫಿ ಅಥವಾ ಜ್ಯೂಸ್ ಜೊತೆ ಸವಿಯಿರಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ಟೇಸ್ಟಿ ಪೀನಟ್ ಬಟರ್