ಟ್ರೈ ಮಾಡಿ ಟೇಸ್ಟಿ ಫಿಶ್ ಪಕೋಡಾ

Public TV
1 Min Read
Fish Pakoda

ಮೀನು ಖಾದ್ಯ ಪ್ರಿಯರು ನಮ್ಮಲ್ಲಿ ಬಹಳಷ್ಟು ಜನ ಇದ್ದಾರೆ. ಪ್ರತಿ ಬಾರಿ ವಿವಿಧ ರೀತಿಯಲ್ಲಿ ಮೀನಿನ ಅಡುಗೆಗಳನ್ನು ಸವಿಯಲು ಬಯಸುತ್ತಾರೆ. ಇಂತಹವರಿಗಾಗಿ ನಾವಿಂದು ಸೂಪರ್ ಆದ ಮೀನಿನ ರೆಸಿಪಿ ಹೇಳಿಕೊಡುತ್ತೇವೆ. ಫಿಶ್ ಪಕೋಡಾ ಅಥವಾ ಫಿಶ್ 65 ಎಂತಲೂ ಇದನ್ನು ಕರೆಯಬಹುದು. ಮಾಡೋದಕ್ಕೂ ಸುಲಭವಾದ ಈ ರೆಸಿಪಿಯನ್ನು ನೀವೂ ಟ್ರೈ ಮಾಡಿ.

Fish Pakoda 2

ಬೇಕಾಗುವ ಪದಾರ್ಥಗಳು:
ಮೀನು ಮಾಂಸ – 250 ಗ್ರಾಂ (ಸಣ್ಣ ಮೂಳೆಗಳಿಲ್ಲದ ಬಿಳಿ ಮಾಂಸದ ಯಾವುದೇ ಮೀನು ಬಳಸಬಹುದು)
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕಾರ್ನ್ ಫ್ಲೋರ್ – 1 ಟೀಸ್ಪೂನ್
ಕಡಲೆ ಹಿಟ್ಟು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಡೀಪ್‌ಫ್ರೈಗೆ ಬೇಕಾಗುವಷ್ಟು ಇದನ್ನೂ ಓದಿ: ಈ ಸೀಸನ್‌ನಲ್ಲಿ ಮಾಡಿ ಟೇಸ್ಟಿ ಮ್ಯಾಂಗೋ ಚಿಕನ್

Fish Pakoda 1

ಮಾಡುವ ವಿಧಾನ:
* ಮೊದಲಿಗೆ ಮೀನನ್ನು ಶುಚಿಗೊಳಿಸಿ, ಮೂಳೆಗಳನ್ನು ಬೇರ್ಪಡಿಸಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ.
* ಒಂದು ಬೌಲ್‌ನಲ್ಲಿ ಎಣ್ಣೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ.
* ಅದಕ್ಕೆ ಮೀನಿನ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ, 20 ನಿಮಿಷ ಮ್ಯಾರಿನೇಟ್ ಆಗಲು ಬಿಡಿ.
* ಈಗ ಎಣ್ಣೆ ಬಿಸಿ ಮಾಡಿ, ಮೀನಿನ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಕೈಯಲ್ಲಿ ತೆಗೆದುಕೊಂಡು ಪಕೋಡಾ ರೀತಿಯಲ್ಲಿ ಎಣ್ಣೆಯಲ್ಲಿ ಬಿಡಿ.
* ಪಕೋಡಾ ಗೋಲ್ಡನ್ ಬ್ರೌನ್ ಬಣ್ಣ ಹಾಗೂ ಗರಿಗರಿಯಾಗುವವರೆಗೆ ಫ್ರೈ ಮಾಡಿಕೊಳ್ಳಿ.
* ಇದೀಗ ಗರಿಗರಿಯಾದ ಫಿಶ್ ಪಕೋಡಾ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಕ್ಲಾಸಿಕ್ ಬೆಂಗಾಲಿ ಮೀನು ಸಾರು – ಹೆಚ್ಚು ಮಸಾಲೆ ಇಲ್ಲದಿದ್ರೂ ಸೂಪರ್ ಸ್ವಾದ

Share This Article