ಕ್ಯಾರೆಟ್‌ನಿಂದ ಸಿಹಿ ಎಂದರೆ ಮೊದಲು ನೆನಪಿಗೆ ಬರುವುದು ಹಲ್ವಾ. ಕ್ಯಾರೆಟ್ ಹಲ್ವಾ ಎಲ್ಲರಿಗೂ ಇಷ್ಟ. ಆದರೆ ಅದನ್ನು ತಯಾರಿಸಲು ಅಷ್ಟೇ ತಾಳ್ಮೆ ಹಾಗೂ ಸಮಯವೂ ಬೇಕು. ನೀವು ಫಟಾಫಟ್ ಅಂತ ಏನಾದರೂ ಸಿಹಿ ಮಾಡಬೇಕು ಎಂದುಕೊಂಡಿದ್ದರೆ, ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ. ಕೇವಲ ಅರ್ಧ ಗಂಟೆಯಲ್ಲಿ ತಯಾರಿಸಬಹುದಾದ ಸಿಹಿಯಾದ ಕ್ಯಾರೆಟ್ ಬರ್ಫಿ (Carrot Barfi) ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ತುರಿದ ತೆಂಗಿನಕಾಯಿ – 1 ಕಪ್
ತುರಿದ ಕ್ಯಾರೆಟ್ – 1 ಕಪ್
ಸಕ್ಕರೆ – ಒಂದೂವರೆ ಕಪ್
ತುಪ್ಪ – 2-3 ಟೀಸ್ಪೂನ್
ಏಲಕ್ಕಿ ಪುಡಿ – 1 ಟೀಸ್ಪೂನ್
ಒಣ ಹಣ್ಣುಗಳು – ಅಲಂಕಾರಕ್ಕೆ ಇದನ್ನೂ ಓದಿ: ಸಿಹಿಯಾದ ಪಪ್ಪಾಯಿ ಹಲ್ವಾ – ನೀವೊಮ್ಮೆ ಟ್ರೈ ಮಾಡಲೇ ಬೇಕು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ತುರಿದ ಕ್ಯಾರೆಟ್ ಹಾಗೂ ತೆಂಗಿನ ತುರಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ 3-4 ನಿಮಿಷ ಹುರಿಯಿರಿ.
* ಈಗ ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಸಕ್ಕರೆ ಕರಗಲು ಪ್ರಾರಂಭವಾದ ಬಳಿಕ ಉರಿಯನ್ನು ಮಧ್ಯಮದಲ್ಲಿಟ್ಟು, ಕೈಯಾಡಿಸುತ್ತಿರಿ.
* ಸಕ್ಕರೆ ಸಂಪೂರ್ಣವಾಗಿ ಕರಗಿದ ಬಳಿಕ ಗುಳ್ಳೆಗಳು ಕಾಣಿಸಿಕೊಂಡು ದಪ್ಪವಾಗಲು ಪ್ರಾರಂಭವಾಗುತ್ತದೆ.
* ಈಗ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ.
* ಮಿಶ್ರಣ ಮುದ್ದೆಯಾಗಿ, ಪ್ಯಾನ್‌ನಿಂದ ಬೇರ್ಪಡಲು ಪ್ರಾರಂಭವಾಗುತ್ತಿದ್ದಂತೆ ತಕ್ಷಣ ಅದನ್ನು ಕೆಳಗಿಳಿಸಿ.
* ಈಗ ತುಪ್ಪ ಸವರಿದ ತಟ್ಟೆಯ ಮೇಲೆ ಮಿಶ್ರಣವನ್ನು ಸಮಾನವಾಗಿ ಹರಡಿ.
* ಮೇಲೆ ಒಣ ಹಣ್ಣುಗಳಿಂದ ಅಲಂಕರಿಸಿ, ಬೆಚ್ಚಗಿರುವಾಗಲೇ ಚಾಕು ಸಹಾಯದಿಂದ ತುಂಡುಗಳಾಗಿ ಕತ್ತರಿಸಿ.
* ಸಂಪೂರ್ಣವಾಗಿ ಆರಿದ ಬಳಿಕ ಸಿಹಿಯಾದ ಕ್ಯಾರೆಟ್ ಬರ್ಫಿಯನ್ನು ಸವಿಯಿರಿ. ಇದನ್ನೂ ಓದಿ: ಯಮ್ಮಿ ಯಮ್ಮಿ ಚಿಕ್ಕು ಖೀರ್ ಮಾಡಿ ಸವಿಯಿರಿ