ಅತ್ಯಧಿಕ ಪ್ರೊಟೀನ್ ಅಂಶವಿರುವ ಚಿಕನ್‌ನಿಂದ ಸೂಪ್ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾತ್ರವಲ್ಲದೇ ನಿಮ್ಮ ದೇಹದ ತೂಕವನ್ನೂ ಸರಿದುಗಿಸಲು ಡಯಟ್‌ಗೆ ಚಿಕನ್ ಸೂಪ್ ಬೆಸ್ಟ್ ಆಪ್ಶನ್. ಅತ್ಯಂತ ಸುಲಭವಾಗಿ ಮಾಡಬಹುದಾದ ರುಚಿಕರ ಚಿಕನ್ ಸೂಪ್ ರೆಸಿಪಿ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
* ಆಲೂಗೆಡ್ಡೆ – 2
* ಚಿಕನ್ – ಅರ್ಧ ಕೆಜಿ
* ಕ್ಯಾರೆಟ್ – 2
* ಈರುಳ್ಳಿ – 2
* ನೀರು – 10 ಕಪ್
* ಪಲಾವ್ ಎಲೆ – 2
* ಕರಿಮೆಣಸಿನ ಪುಡಿ – ಒಂದು ಚಮಚ
* ಜೋಳದ ಪುಡಿ(ಕಾರ್ನ್ ಫ್ಲೋರ್) – ಅರ್ಧ ಕಪ್
* ಉಪ್ಪು – 2 ಚಮಚ
* ನಿಂಬೆ ಹಣ್ಣಿನ ರಸ
* ಕೊತ್ತಂಬರಿ ಸೊಪ್ಪು
Advertisement
8
Advertisement
ಮಾಡುವ ವಿಧಾನ:
* ಮೊದಲಿಗೆ 10 ಕಪ್ ನೀರನ್ನು ಕುದಿಯಲು ಇಟ್ಟು, ಅದಕ್ಕೆ ಚಿಕನ್, ಸಿಪ್ಪೆ ಸುಲಿದು ಕತ್ತರಿಸಿದ ಆಲೂಗೆಡ್ಡೆ, ಕ್ಯಾರೆಟ್, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪಲಾವ್ ಎಲೆ, ಕರಿಮೆಣಸಿನ ಪುಡಿ ಹಾಗೂ ಉಪ್ಪು ಹಾಕಿ ಬೇಯಿಸಿ.
* ಬಳಿಕ ರಸ ಹಾಗೂ ತರಕಾರಿಗಳನ್ನು ಪ್ರತ್ಯೆಕಿಸಿ.
* ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿ ಮತ್ತೆ ರಸಕ್ಕೆ ಹಾಕಿ.
* ಬಳಿಕ ಜೋಳದ ಹಿಟ್ಟನ್ನು ಹಾಕಿ. ಈಗ ರಸ ಸ್ವಲ್ಪ ಗಾಢವಾಗುತ್ತದೆ.
* ಚಿಕನ್ ಅನ್ನು ಮೂಳೆಗಳಿಂದ ಬೇರ್ಪಡಿಸಿ, ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ, ರಸಕ್ಕೆ ಹಾಕಿ ಮತ್ತೆ ಚೆನ್ನಾಗಿ ಕುದಿಸಿ.
* ಕೊನೆಯದಾಗಿ ನಿಂಬೆ ಹಣ್ಣಿನ ರಸ ಹಿಂಡಿದರೆ, ಸೂಪ್ ತಯಾರಾದಂತೆ.
* ರುಚಿಕರ ಚಿಕನ್ ಸೂಪ್ ಅನ್ನು ಬೌಲ್‌ಗಳಿಗೆ ಹಾಕಿ, ಸವಿಯಿರಿ.