ಮೃದುವಾದ ಅವಲಕ್ಕಿ ರೊಟ್ಟಿ ಒಮ್ಮೆ ಟ್ರೈ ಮಾಡಿ

Advertisements

ಕ್ಕಿ ರೊಟ್ಟಿಯನ್ನು ಸಾಮಾನ್ಯವಾಗಿ ನಾವು ಸವಿದಿರುತ್ತೇವೆ. ಸ್ವಲ್ಪ ಗಟ್ಟಿಯಾಗಿರುವ ಅಕ್ಕಿ ರೊಟ್ಟಿಯನ್ನು ಮೃದುವಾಗಿ ಹೇಗೆ ಮಾಡಬಹುದು ಎಂದು ನಿಮಗೆ ಗೊತ್ತಾ? ಅವಲಕ್ಕಿಯನ್ನು ಬಳಸಿ ಸುಲಭವಾಗಿ ರೊಟ್ಟಿಯನ್ನು ಮೃದುವಾಗಿ ಮಾಡಬಹುದು ಎಂಬುದು ನಿಮಗೆ ಇಲ್ಲಿಯವರೆಗೆ ತಿಳಿದಿರಲಿಲ್ಲವೆಂದರೆ ಒಮ್ಮೆ ಈ ರೆಸಿಪಿ ನೋಡಿ ನೀವೂ ಟ್ರೈ ಮಾಡಿ. ಮೃದುವಾದ ಅವಲಕ್ಕಿ ರೊಟ್ಟಿಯನ್ನೂ ನೀವು ಖಂಡಿತವಾಗಿಯೂ ಇಷ್ಟಪಡುತ್ತೀರಿ.

Advertisements

ಬೇಕಾಗುವ ಪದಾರ್ಥಗಳು:
ಪೋಹಾ/ಅವಲಕ್ಕಿ – 1 ಕಪ್
ಅಕ್ಕಿ ಹಿಟ್ಟು – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಸಣ್ಣಗೆ ಕತ್ತರಿಸಿದ ಕರಿ ಬೇವಿನ ಎಲೆಗಳು – ಸ್ವಲ್ಪ
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
ಜೀರಿಗೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬಿಸಿ ನೀರು – ಬೆರೆಸಲು
ಎಣ್ಣೆ – 1 ಕಪ್ ಇದನ್ನೂ ಓದಿ: ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ

Advertisements

ಮಾಡುವ ವಿಧಾನ:
* ಮೊದಲಿಗೆ, ಒಂದು ಬಟ್ಟಲಿನಲ್ಲಿ ಅವಲಕ್ಕಿಯನ್ನು ತೆಗೆದುಕೊಂಡು 10 ನಿಮಿಷ ನೀರಿನಲ್ಲಿ ನೆನೆಸಿಡಿ.
* ಬಳಿಕ ಅವಲಕ್ಕಿಯನ್ನು ನೀರಿನಿಂದ ತೆಗೆದು ಇನ್ನೊಂದು ಪಾತ್ರೆಗೆ ವರ್ಗಾಯಿಸಿ.
* ಈಗ ಅದಕ್ಕೆ ಅಕ್ಕಿ ಹಿಟ್ಟು, ಈರುಳ್ಳಿ, ಕೆಲವು ಕರಿ ಬೇವಿನ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
* ಶುಂಠಿ, ಮೆಣಸಿನಕಾಯಿ, ಜೀರಿಗೆ ಮತ್ತು ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಅವಲಕ್ಕಿಯನ್ನು ಆದಷ್ಟು ಹಿಸುಕಿ, ಬಿಸಿನೀರನ್ನು ಸೇರಿಸುತ್ತಾ ದಪ್ಪ ಹಿಟ್ಟನ್ನಾಗಿ ಮಾಡಿಕೊಳ್ಳಿ.
* ಈಗ ಬಾಳೆ ಎಲೆಗಳನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ, ಚೆಂಡಿನ ಗಾತ್ರದ ಹಿಟ್ಟನ್ನು ಅದಕ್ಕೆ ಹಾಕಿ ನಿಧಾನವಾಗಿ ಕೈಯಿಂದ ಹರಡಿ. (ಬಾಳೆ ಎಲೆ ಬದಲು ಬಟರ್ ಪೇಪರ್ ಬಳಸಬಹುದು)
* ಈಗ ಬಿಸಿ ತವಾದ ಮೇಲೆ ಬಾಳೆ ಎಲೆಗೆ ಹರಡಿರುವ ಹಿಟ್ಟನ್ನು ಹಾಕಿ(ಬಾಳೆ ಎಲೆ ಮೇಲಿರಲಿ), 1 ನಿಮಿಷದ ಬಳಿಕ ಬಾಳೆ ಎಲೆಯನ್ನು ನಿಧಾನವಾಗಿ ತೆಗೆಯಿರಿ.
* ರೊಟ್ಟಿಯನ್ನು ಎರಡೂ ಬದಿಗಳಲ್ಲಿ ಚೆನ್ನಾಗಿ ಕಾಯಿಸಿ.
* ಈಗ ಮೃದುವಾದ ಅವಲಕ್ಕಿ ರೊಟ್ಟಿ ತಯಾರಾಗಿದ್ದು, ಅದನ್ನು ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ಸೂಪರ್ ಆಗಿರುತ್ತದೆ. ಇದನ್ನೂ ಓದಿ: ದಿಢೀರ್ ಅಂತ ತಯಾರಿಸಿ ಜೋಳದ ದೋಸೆ

Live Tv

Advertisements
Exit mobile version