ಅಕ್ಕಿ ರೊಟ್ಟಿಯನ್ನು ಸಾಮಾನ್ಯವಾಗಿ ನಾವು ಸವಿದಿರುತ್ತೇವೆ. ಸ್ವಲ್ಪ ಗಟ್ಟಿಯಾಗಿರುವ ಅಕ್ಕಿ ರೊಟ್ಟಿಯನ್ನು ಮೃದುವಾಗಿ ಹೇಗೆ ಮಾಡಬಹುದು ಎಂದು ನಿಮಗೆ ಗೊತ್ತಾ? ಅವಲಕ್ಕಿಯನ್ನು ಬಳಸಿ ಸುಲಭವಾಗಿ ರೊಟ್ಟಿಯನ್ನು ಮೃದುವಾಗಿ ಮಾಡಬಹುದು ಎಂಬುದು ನಿಮಗೆ ಇಲ್ಲಿಯವರೆಗೆ ತಿಳಿದಿರಲಿಲ್ಲವೆಂದರೆ ಒಮ್ಮೆ ಈ ರೆಸಿಪಿ ನೋಡಿ ನೀವೂ ಟ್ರೈ ಮಾಡಿ. ಮೃದುವಾದ ಅವಲಕ್ಕಿ ರೊಟ್ಟಿಯನ್ನೂ ನೀವು ಖಂಡಿತವಾಗಿಯೂ ಇಷ್ಟಪಡುತ್ತೀರಿ.
Advertisement
ಬೇಕಾಗುವ ಪದಾರ್ಥಗಳು:
ಪೋಹಾ/ಅವಲಕ್ಕಿ – 1 ಕಪ್
ಅಕ್ಕಿ ಹಿಟ್ಟು – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಸಣ್ಣಗೆ ಕತ್ತರಿಸಿದ ಕರಿ ಬೇವಿನ ಎಲೆಗಳು – ಸ್ವಲ್ಪ
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
ಜೀರಿಗೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬಿಸಿ ನೀರು – ಬೆರೆಸಲು
ಎಣ್ಣೆ – 1 ಕಪ್ ಇದನ್ನೂ ಓದಿ: ಕ್ರಿಸ್ಪಿ ಪನೀರ್ ಫ್ರೈ ಮಾಡುವುದು ತುಂಬಾ ಸುಲಭ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ಒಂದು ಬಟ್ಟಲಿನಲ್ಲಿ ಅವಲಕ್ಕಿಯನ್ನು ತೆಗೆದುಕೊಂಡು 10 ನಿಮಿಷ ನೀರಿನಲ್ಲಿ ನೆನೆಸಿಡಿ.
* ಬಳಿಕ ಅವಲಕ್ಕಿಯನ್ನು ನೀರಿನಿಂದ ತೆಗೆದು ಇನ್ನೊಂದು ಪಾತ್ರೆಗೆ ವರ್ಗಾಯಿಸಿ.
* ಈಗ ಅದಕ್ಕೆ ಅಕ್ಕಿ ಹಿಟ್ಟು, ಈರುಳ್ಳಿ, ಕೆಲವು ಕರಿ ಬೇವಿನ ಎಲೆಗಳು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
* ಶುಂಠಿ, ಮೆಣಸಿನಕಾಯಿ, ಜೀರಿಗೆ ಮತ್ತು ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಅವಲಕ್ಕಿಯನ್ನು ಆದಷ್ಟು ಹಿಸುಕಿ, ಬಿಸಿನೀರನ್ನು ಸೇರಿಸುತ್ತಾ ದಪ್ಪ ಹಿಟ್ಟನ್ನಾಗಿ ಮಾಡಿಕೊಳ್ಳಿ.
* ಈಗ ಬಾಳೆ ಎಲೆಗಳನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ, ಚೆಂಡಿನ ಗಾತ್ರದ ಹಿಟ್ಟನ್ನು ಅದಕ್ಕೆ ಹಾಕಿ ನಿಧಾನವಾಗಿ ಕೈಯಿಂದ ಹರಡಿ. (ಬಾಳೆ ಎಲೆ ಬದಲು ಬಟರ್ ಪೇಪರ್ ಬಳಸಬಹುದು)
* ಈಗ ಬಿಸಿ ತವಾದ ಮೇಲೆ ಬಾಳೆ ಎಲೆಗೆ ಹರಡಿರುವ ಹಿಟ್ಟನ್ನು ಹಾಕಿ(ಬಾಳೆ ಎಲೆ ಮೇಲಿರಲಿ), 1 ನಿಮಿಷದ ಬಳಿಕ ಬಾಳೆ ಎಲೆಯನ್ನು ನಿಧಾನವಾಗಿ ತೆಗೆಯಿರಿ.
* ರೊಟ್ಟಿಯನ್ನು ಎರಡೂ ಬದಿಗಳಲ್ಲಿ ಚೆನ್ನಾಗಿ ಕಾಯಿಸಿ.
* ಈಗ ಮೃದುವಾದ ಅವಲಕ್ಕಿ ರೊಟ್ಟಿ ತಯಾರಾಗಿದ್ದು, ಅದನ್ನು ತೆಂಗಿನಕಾಯಿ ಚಟ್ನಿ ಜೊತೆ ಸವಿದರೆ ಸೂಪರ್ ಆಗಿರುತ್ತದೆ. ಇದನ್ನೂ ಓದಿ: ದಿಢೀರ್ ಅಂತ ತಯಾರಿಸಿ ಜೋಳದ ದೋಸೆ