ಮಕ್ಕಳ ಎವರ್ ಗ್ರೀನ್ ಫೇವರಿಟ್ ನಾನ್‌ವೆಜ್ ರೆಸಿಪಿಗಳಲ್ಲೊಂದು ಕಬಾಬ್. ಸ್ನ್ಯಾಕ್ಸ್ ಅಥವಾ ಊಟದ ಸಂದರ್ಭದಲ್ಲಿ ಸವಿಯೋದಕ್ಕೆ ಕಬಾಬ್ ಪರ್ಫೆಕ್ಟ್. ನಾವಿಂದು ಶ್ಯಾಲೋ ಫ್ರೈ ಮಟನ್ ಶಮಿ ಕಬಾಬ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ರುಚಿಕರವಾದ ಹಾಗೂ ಸುಲಭದ ಈ ರೆಸಿಪಿ ಯಾವುದೇ ಪಾರ್ಟಿ ಸಂದರ್ಭದಲ್ಲೂ ಸ್ಟಾರ್ಟರ್ ಆಗಿ ಬಡಿಸಬಹುದು. ಬರ್ಗರ್‌ಗೆ ಪ್ಯಾಟಿ ಆಗಿಯೂ ಮಟನ್ ಶಮಿ ಕಬಾಬ್ ಅನ್ನು ಬಳಸಬಹುದು.
Advertisement
ಬೇಕಾಗುವ ಪದಾರ್ಥಗಳು:
ಮಟನ್ – ಅರ್ಧ ಕೆಜಿ
ಕಡಲೆ ಬೇಳೆ – 75 ಗ್ರಾಂ
ಬೆಳ್ಳುಳ್ಳಿ – 2
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ದಾಲ್ಚಿನ್ನಿ – 1 ಇಂಚು
ಲವಂಗ – 4-5
ಹೆಚ್ಚಿದ ಈರುಳ್ಳಿ – 2
ಪುದೀನಾ ಸೊಪ್ಪು – 1
ಹೆಚ್ಚಿದ ಕೊತ್ತಂಬರಿ ಚಿಗುರು – 2
ಹಸಿರು ಮೆಣಸಿನಕಾಯಿ – 2
ಮೊಟ್ಟೆ – 1
ನಿಂಬೆ ರಸ – 1 ಟೀಸ್ಪೂನ್ ಇದನ್ನೂ ಓದಿ: ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕಡಲೆ ಬೇಳೆ, ಬೆಳ್ಳುಳ್ಳಿ, ಮೆಣಸಿನ ಪುಡಿ, ಅರಿಶಿನ, ದಾಲ್ಚಿನ್ನಿ, ಹಾಗೂ ಲವಂಗವನ್ನು ಪ್ರೆಶರ್ ಕುಕ್ಕರ್‌ಗೆ ಹಾಕಿ, ಮಟನ್ ಸೇರಿಸಿ, ಅಗತ್ಯವಿರುವಷ್ಟು ನೀರು ಹಾಗೂ ಉಪ್ಪು ಸೇರಿಸಿ ಬೇಯಿಸಿಕೊಳ್ಳಿ.
* 1 ವಿಸಿಲ್ ಬಳಿಕ 15-20 ನಿಮಿಷಗಳ ಕಾಲ ಅದನ್ನು ಕುದಿಸಿಕೊಳ್ಳಿ.
* ಬೇಯಿಸಿದ ಮಾಂಸವನ್ನು ತಣ್ಣಗಾಗಿಸಿ, ಗ್ರೈಂಡರ್‌ಗೆ ವರ್ಗಾಯಿಸಿ ಪುಡಿ ಮಾಡಿ.
* ಅದಕ್ಕೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಪುದೀನಾ ಸೇರಿಸಿ.
* ಮೊಟ್ಟೆ ಒಡೆದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
* ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಪ್ಯಾಟಿ ರೀತಿಯ ಆಕಾರ ನೀಡಿ.
* ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ, ಬಿಸಿ ಮಾಡಿ ನಂತರ ಕಬಾಬ್‌ಗಳನ್ನು ಅದರಲ್ಲಿ ಹಾಕಿ ಶ್ಯಾಲೋ ಫ್ರೈ ಮಾಡಿ.
* ಕಬಾಬ್ ಎರಡೂ ಬದಿ ಬೆಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ. ಎಲ್ಲಾ ಕಬಾಬ್ ಪ್ಯಾಟಿಗಳನ್ನೂ ಹೀಗೇ ಮುಂದುವರಿಸಿ.
* ಇದೀಗ ಮಟನ್ ಶಮಿ ಕಬಾಬ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಏರ್ ಫ್ರೈಯರ್ ಸ್ಪೈಸಿ ಹನಿ ಚಿಕನ್ ವಿಂಗ್ಸ್ ರೆಸಿಪಿ
Advertisement
Web Stories