ನಾನ್‌ವೆಜ್ ಪ್ರಿಯರು ಅದರಲ್ಲೂ ಮೀನು ಖಾದ್ಯ ಪ್ರಿಯರಿಗೆ ಸಿಗಡಿ ಎಂದರೆ ಬಾಯಲ್ಲಿ ನೀರು ಬರದೇ ಇರಲಾರದು. ಸಿಗಡಿಯ ಯಾವ ರೀತಿಯ ಖಾದ್ಯ ತಯಾರಿಸಿದರೂ ಅದರ ರುಚಿಯನ್ನು ಮತ್ತೆ ಮರೆಯುವುದೇ ಅಸಾಧ್ಯ. ಇಂದು ನಾವು ಸ್ವಲ್ಪ ವಿಭಿನ್ನವಾಗಿ, ಸಿಗಡಿ ಚಿಲ್ಲಿ ಫ್ರೈ (Prawn Chilli Fry) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಇದಕ್ಕೆ ಆಲೂಗಡ್ಡೆ, ತೆಂಗಿನ ತುರಿ ಬಳಸಿರುವುದರಿಂದ ಇದರ ರುಚಿ ವಿಭಿನ್ನವಾಗಿರುತ್ತದೆ. ಒಮ್ಮೆ ಈ ರೆಸಿಪಿಯನ್ನು ನೀವು ಕೂಡಾ ಮಾಡಿ ಸವಿಯಿರಿ.
Advertisement
ಬೇಕಾಗುವ ಪದಾರ್ಥಗಳು:
ಸಿಗಡಿ – 200 ಗ್ರಾಂ
ಸಣ್ಣಗೆ ಹೆಚ್ಚಿದ ಈರುಳ್ಳಿ – 2
ಹೆಚ್ಚಿದ ಆಲೂಗಡ್ಡೆ – 1
ಸೀಳಿದ ಹಸಿ ಮೆಣಸಿನಕಾಯಿ – 2 (ಇನ್ನಷ್ಟು ಬಳಸಬಹುದು)
ಅರಿಶಿನ ಪುಡಿ – 1 ಟೀಸ್ಪೂನ್
ತೆಂಗಿನ ತುರಿ – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 4 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೀಸ್ಪೂನ್ ಇದನ್ನೂ ಓದಿ: ಸರಳ, ರುಚಿಕರವಾಗಿ ಮೀನು ಸಾರು ಹೀಗೆ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸಿಗಡಿಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿಡಿ.
* ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಆಲೂಗಡ್ಡೆ, ಹಸಿ ಮೆಣಸಿನಕಾಯಿ ಹಾಕಿ 2-3 ನಿಮಿಷ ಫ್ರೈ ಮಾಡಿ.
* ಈಗ ಸಿಗಡಿಯನ್ನು ಸೇರಿಸಿ 5-6 ನಿಮಿಷ ಫ್ರೈ ಮಾಡಿ.
* ಬಳಿಕ ಅರಿಶಿನ ಪುಡಿ, ತೆಂಗಿನ ತುರಿ, ಬೆಳ್ಳುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರಣ ಮಾಡಿ.
* ಸಿಗಡಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಇದೀಗ ಸಿಗಡಿ ಚಿಲ್ಲಿ ಫ್ರೈ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಗರಿಗರಿಯಾದ ಚಿಕನ್ ಸಮೋಸ ಮಾಡಿ ನೋಡಿ