ನೀವೊಂದು ಫಟಾಫಟ್ ಅಂತ ತಯಾರಿಸಬಹುದಾದಂತಹ ಸೂಪ್ ರೆಸಿಪಿ ಹುಡುಕಾಟದಲ್ಲಿದ್ದರೆ ಒಮ್ಮೆ ಮೆಕ್ಸಿಕನ್ ಚಿಕನ್ ಲೈಮ್ ಸೂಪ್ ಖಂಡಿತವಾಗಿಯೂ ಟ್ರೈ ಮಾಡಬೇಕು. ಈ ಸೂಪ್ ಅನ್ನು ಒಮ್ಮೆ ಸವಿದರೆ ಇಡೀ ದಿನ ರಿಫ್ರೆಶಿಂಗ್ ಅನುಭವ ನಿಮಗೆ ಸಿಗುತ್ತದೆ. ಸಖತ್ ಟೇಸ್ಟಿಯಾದ ಈ ಸೂಪ್ ಅನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು.
Advertisement
ಬೇಕಾಗುವ ಪದಾರ್ಥಗಳು:
ಆಲಿವ್ ಎಣ್ಣೆ – 2 ಟೀಸ್ಪೂನ್
ಚಿಕನ್ ಬ್ರೆಸ್ಟ್ – 4 (ಮೂಳೆಗಳಿಲ್ಲದ, ಚರ್ಮರಹಿತ ತುಂಡುಗಳು)
ಹೆಚ್ಚಿದ ಈರುಳ್ಳಿ – 1 ಕಪ್
ತುರಿದ ಬೆಳ್ಳುಳ್ಳಿ – 2
ಹೆಚ್ಚಿದ ಟೊಮೆಟೊ – 2
ಚಿಕನ್ ಸ್ಟಾಕ್ – 6 ಕಪ್
ನಿಂಬೆ ರಸ – ಅರ್ಧ ಕಪ್ (4-5 ನಿಂಬೆ ಹಣ್ಣು ಬೇಕಾಗಬಹುದು)
ಕಾರ್ನ್ ಟೋರ್ಟಿಲಾ ಚಿಪ್ಸ್ – 2 ಕಪ್ (ಐಚ್ಛಿಕ)
ಕತ್ತರಿಸಿದ ಆವಕಾಡೋ (ಬಟರ್ ಫ್ರೂಟ್) – 2
ಹೆಚ್ಚಿದ ಸ್ಪ್ರಿಂಗ್ ಆನಿಯನ್ – 4 ಇದನ್ನೂ ಓದಿ: ಮಕ್ಕಳ ಫೇವರಿಟ್ ರುಚಿಯಾದ ವೆಜ್ ರೋಲ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಬಾಣಲೆ ತೆಗೆದುಕೊಡು, ಅದರಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಚಿಕನ್ ಬ್ರೆಸ್ಟ್ ಅನ್ನು ಬೇಯಿಸಿಕೊಳ್ಳಿ.
* ಚಿಕನ್ ತುಂಡುಗಳು ಬೆಂದು ಕೆಂಪಗಾದಬಳಿಕ ಅದನ್ನು ಆರಲು ಬದಿಗಿಡಿ.
* ಈಗ ಒಂದು ಪಾತ್ರೆಯಲ್ಲಿ ಉಳಿದ ಎಣ್ಣೆಯನ್ನು ಬಿಸಿ ಮಾಡಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಟೊಮೆಟೊ ಸೇರಿಸಿ, ಈರುಳ್ಳಿ ಮೃದುವಾಗುವವರೆಗೆ ಮುಚ್ಚಿ, 5 ನಿಮಿಷ ಬೇಯಿಸಿಕೊಳ್ಳಿ.
* ಬಳಿಕ ಚಿಕನ್ ಸ್ಟಾಕ್ ಹಾಗೂ ನಿಂಬೆ ರಸ ಸೇರಿ.
* ಈಗ ಚಿಕನ್ ತುಂಡನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ. ನೀವು ಫೋರ್ಕ್ ಬಳಸಿ ಒರಟಾಗಿ ಪುಡಿ ಮಾಡಿಕೊಳ್ಳಬಹುದು. ಅದನ್ನು ಸೂಪ್‌ಗೆ ಸೇರಿಸಿ, ಮುಚ್ಚಿ ಕುದಿಸಿಕೊಳ್ಳಿ
* ಸೂಪ್ ಮಧ್ಯಮ ಉರಿಯಲ್ಲಿ ಸುಮಾರು 10 ನಿಮಿಷ ಬೆಂದ ಬಳಿಕ ಅದನ್ನು ಸರ್ವಿಂಗ್ ಬೌಲ್‌ಗಳಿಗೆ ಹಾಕಿಕೊಳ್ಳಿ.
* ಸೂಪ್‌ಗೆ ಅನ್ನು ಟೋರ್ಟಿಲ್ಲಾ ಚಿಪ್ಸ್, ಆವಕಾಡೊ ಮತ್ತು ಸ್ಪ್ರಿಂಗ್ ಆನಿಯನ್ ಹಾಕಿ ಅಲಂಕರಿಸಿದರೆ, ಮೆಕ್ಸಿಕನ್ ಚಿಕನ್ ಲೈಮ್ ಸೂಪ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ