ಈ ಆರೋಗ್ಯಕರ ಮಶ್ರೂಮ್ ಸೂಪ್ ರೆಸಿಪಿ ರಷ್ಯಾದಲ್ಲಿ ಹುಟ್ಟಿಕೊಂಡಿದ್ದು, ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸೋ ಗುಣಗಳಿವೆ. ಇದರಲ್ಲಿ ಗೋಧಿಯ ಬಳಕೆಯನ್ನೂ ಮಾಡಿರುವುದರಿಂದ ಹೆಚ್ಚು ಪೌಷ್ಟಿಕಾಂಶಯುಕ್ತವೂ ಆಗಿದೆ. ಅನಾರೋಗ್ಯ ಎನಿಸಿದಾಗ ಈ ರೆಸಿಪಿಯನ್ನು ನೀವೂ ಒಮ್ಮೆ ಟ್ರೈ ಮಾಡಿ ಆರೋಗ್ಯ ಹೆಚ್ಚಿಸಿಕೊಳ್ಳಿ.
Advertisement
ಬೇಕಾಗುವ ಪದಾರ್ಥಗಳು:
ಮಶ್ರೂಮ್ – 2 ಕಪ್
ಸಣ್ಣಗೆ ಹೆಚ್ಚಿದ ಕ್ಯಾರೆಟ್ – 1
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
ಬೇಯಿಸಿದ ಗೋಧಿ – 2 ಕಪ್
ಚಿಕನ್/ವೆಜ್ಟೇಬಲ್ ಸ್ಟಾಕ್ – 3 ಕಪ್
ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು – ಕಾಲು ಕಪ್
ಆಲಿವ್ ಎಣ್ಣೆ – 1 ಟೀಸ್ಪೂನ್
ಬೆಣ್ಣೆ – 2 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್ ಇದನ್ನೂ ಓದಿ: ವೆಜಿಟೇಬಲ್ ಮ್ಯಾಂಚೋ ಸೂಪ್ ಕುಡಿದು ಆನಂದಿಸಿ..!
Advertisement
Advertisement
ಮಾಡುವ ವಿಧನ:
* ಮೊದಲಿಗೆ ಒಂದು ಪಾತ್ರೆಗೆ ಆಲಿವ್ ಎಣ್ಣೆ, ಬೆಣ್ಣೆ ಹಾಕಿ ಬಿಸಿ ಮಾಡಿ. ಕತ್ತರಿಸಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು ಸೇರಿಸಿ ಸುಮಾರು 5 ನಿಮಿಷ ಬೇಯಿಸಿ.
* ಮಶ್ರೂಮ್ ಅನ್ನು ಅದಕ್ಕೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ ಮಧ್ಯಮ ಉರಿಯಲ್ಲಿ ಸುಮಾರು 8-10 ನಿಮಿಷ ಬೇಯಿಸಿ.
* ಬೇಯಿಸಿದ ಗೋಧಿಯನ್ನು ಸೇರಿಸಿ ಮಿಶ್ರಣವನ್ನು ಸುಮಾರು 2 ನಿಮಿಷಗಳ ಕಾಲ ಬೆರೆಸಿ.
* ಚಿಕನ್/ವೆಜ್ಟೇಬಲ್ ಸ್ಟಾಕ್ ಸೇರಿಸಿ ಮತ್ತು ಕುದಿಸಿ.
* ಉರಿಯನ್ನು ಕಡಿಮೆ ಮಾಡಿ 30 ನಿಮಿಷಗಳ ಕಾಲ ಕುದಿಸಿ.
* ಬಳಿಕ ಸಬ್ಬಸಿಗೆ ಸೊಪ್ಪು ಸೇರಿಸಿ.
* ಇದೀಗ ಆರೋಗ್ಯಕರ ರಷ್ಯನ್ ಮಶ್ರೂಮ್ ಸೂಪ್ ತಯಾರಾಗಿದ್ದು, ಹುಳಿ ಕ್ರೀಮ್ ಹಾಗೂ ಟೋಸ್ಟ್ ಮಾಡಿದ ಬ್ರೆಡ್ನೊಂದಿಗೆ ಬಡಿಸಿ ಆನಂದಿಸಿ. ಇದನ್ನೂ ಓದಿ: ಸಿಂಪಲ್ & ಟೇಸ್ಟಿ ಬ್ಲೂಬೆರಿ ಕಾಫಿ ಕೇಕ್
Advertisement
Web Stories