ಗ್ರೀಕ್ ಲೆಮನ್ ಚಿಕನ್ (Greek Lemon Chicken) ಅನ್ನು ಚಿಕನ್ ಬ್ರೆಸ್ಟ್ ತುಂಡುಗಳಿಂದ ಮಾಡಲಾಗುತ್ತದೆ. ನಿಂಬೆ ರಸ, ಆಲಿವ್ ಎಣ್ಣೆಯ ಸ್ವಾದ ನಿಮಗೆ ಖಂಡಿತವಾಗಿಯೂ ಹೊಸ ರುಚಿಯ ಅನುಭವ ನೀಡುತ್ತದೆ. ಚಿಕನ್‌ನಿಂದ ಹೊಸದಾಗಿ ಏನಾದರೂ ಸಿಂಪಲ್ ಆಗಿ ಅಡುಗೆ ಮಾಡಲು ಬಯಸುವವರು ಈ ರೆಸಿಪಿಯನ್ನು ಖಂಡಿತಾ ಟ್ರೈ ಮಾಡಿ. ಗ್ರೀಕ್ ಚಿಕನ್ ಲೆಮನ್ ಮಾಡೋದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ ಬ್ರೆಸ್ಟ್ – 1 ಕೆ.ಜಿ
ಆಲಿವ್ ಎಣ್ಣೆ – ಅರ್ಧ ಕಪ್
ನಿಂಬೆ ಸಿಪ್ಪೆಯ ತುರಿ – 1 ಟೀಸ್ಪೂನ್
ನಿಂಬೆ ಹಣ್ಣಿನ ರಸ – ಕಾಲು ಕಪ್
ಜೇನುತುಪ್ಪ – 1 ಟೀಸ್ಪೂನ್
ತುರಿದ ಬೆಳ್ಳುಳ್ಳಿ – 1 ಟೀಸ್ಪೂನ್
ಓರಿಗಾನೋ – 2 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್ ಇದನ್ನೂ ಓದಿ: ಹಂದಿ ಮಾಂಸ ಪ್ರಿಯರಿಗಾಗಿ ಹನಿ ಗಾರ್ಲಿಕ್ ಪೋರ್ಕ್ ಚಾಪ್ಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಬೌಲ್‌ನಲ್ಲಿ ಆಲಿವ್ ಎಣ್ಣೆ, ನಿಂಬೆ ಸಿಪ್ಪೆಯ ತುರಿ, ನಿಂಬೆ ರಸ, ಜೇನುತುಪ್ಪ, ಬೆಳ್ಳುಳ್ಳಿ, ಓರಿಗಾನೋ, ಉಪ್ಪು ಮತ್ತು ಕರಿಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ.
* ಈ ಮಿಶ್ರಣಕ್ಕೆ ಚಿಕನ್ ತುಂಡುಗಳನ್ನು ಹಾಕಿ, ಮಿಕ್ಸ್ ಮಾಡಿ.
* ಈಗ ಬೌಲ್ ಅನ್ನು 1 ಗಂಟೆ ಫ್ರಿಜ್‌ನಲ್ಲಿ ಇಟ್ಟು ಮ್ಯಾರಿನೇಟ್ ಆಗಲು ಬಿಡಿ.
* ಈಗ ಗ್ರಿಲ್ ಅಥವಾ ಗ್ರಿಲ್ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
* ಚಿಕನ್ ತುಂಡುಗಳನ್ನು ಗ್ರಿಲ್‌ನಲ್ಲಿಟ್ಟು, ಬೇಯಿಸಿಕೊಳ್ಳಿ.
* ಚಿಕನ್‌ನ ಪ್ರತಿ ಬದಿಗಳನ್ನು 5-7 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
* ಈ ಚಿಕನ್ ಅನ್ನು ಗ್ರಿಲ್‌ನಿಂದ ತೆಗೆದು, 5 ನಿಮಿಷ ತಣ್ಣಗಾಗಲು ಬಿಡಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ, ಗ್ರೀಕ್ ಲೆಮನ್ ಚಿಕನ್ ಅನ್ನು ಬಡಿಸಿ. ಇದನ್ನೂ ಓದಿ: ಚೈನೀಸ್ ಸ್ಟೈಲ್‌ನ ಯಮ್ಮೀ ಯಮ್ಮೀ ಆರೆಂಜ್ ಚಿಕನ್ ರೆಸಿಪಿ