ಹಲವರಿಗೆ ಬೆಂಡೆಕಾಯಿ ಪಲ್ಯ ಇಷ್ಟ. ಆದರೆ ಅದರ ಜಿಗುಟು ಅಂಶ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ನಾವಿಂದು ಬೆಂಡೆಕಾಯಿ ಚಟ್ನಿ (Lady Finger Chutney) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಬೆಂಡೆಕಾಯಿಯಲ್ಲಿ ಜಿಗುಟು ಅಂಶವಿರುವಾಗ ಚಟ್ನಿ ಮಾಡೋದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ, ಈ ರೆಸಿಪಿ ಒಮ್ಮೆ ಓದಿ ನೋಡಿ. ಬೆಂಡೆಕಾಯಿಯ ಜಿಗುಟು ಅಂಶ ಹೋಗಿಸಿ, ಚಟ್ನಿ ಮಾಡುವುದು ಹೇಗೆ ಎಂದು ಇಲ್ಲಿಂದ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು:
ಮಸಾಲೆ ಪುಡಿ ತಯಾರಿಸಲು:
ಎಣ್ಣೆ – 2 ಟೀಸ್ಪೂನ್
ಉದ್ದಿನಬೇಳೆ – ಅರ್ಧ ಟೀಸ್ಪೂನ್
ಕಡಲೆಬೇಳೆ – ಅರ್ಧ ಟೀಸ್ಪೂನ್
ಕೊತ್ತಂಬರಿ ಬೀಜ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಮೆಂತ್ಯ – ಕಾಲು ಟೀಸ್ಪೂನ್
ಒಣ ಕೆಂಪು ಮೆಣಸಿನಕಾಯಿ – 5
ಬೆಂಡೆಕಾಯಿ ಹುರಿಯಲು:
ಎಣ್ಣೆ – 2 ಟೀಸ್ಪೂನ್
ಪುಡಿಮಾಡಿದ ಬೆಳ್ಳುಳ್ಳಿ – 5 ಎಸಳು
ಕತ್ತರಿಸಿದ ಬೆಂಡೆಕಾಯಿ – 2 ಕಪ್
ಹೆಚ್ಚಿದ ಟೊಮೆಟೊ – 1
ಹುಣಿಸೆಹಣ್ಣು – ಸಣ್ಣ ತುಂಡು
ಅರಿಶಿನ – ಕಾಲು ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಒಗ್ಗರಣೆಗೆ:
ಎಣ್ಣೆ – 2 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಉದ್ದಿನಬೇಳೆ – ಅರ್ಧ ಟೀಸ್ಪೂನ್
ಮುರಿದ ಒಣ ಕೆಂಪು ಮೆಣಸಿನಕಾಯಿ – 2
ಕರಿಬೇವಿನ ಎಲೆ – ಕೆಲವು
ಹಿಂಗ್ – ಚಿಟಿಕೆ ಇದನ್ನೂ ಓದಿ: ಫಟಾಫಟ್ ಅಂತ ಮಾಡಿ ನೆಲ್ಲಿಕಾಯಿ ಉಪ್ಪಿನಕಾಯಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, ಉದ್ದಿನಬೇಳೆ, ಕಡಲೆಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯ ಮತ್ತು ಒಣ ಕೆಂಪು ಮೆಣಸಿನಕಾಯಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ.
* ಬಳಿಕ ಪದಾರ್ಥಗಳನ್ನು ಸಂಪೂರ್ಣವಾಗಿ ತಣ್ಣಗಾಗಿಸಿ, ಮಿಕ್ಸರ್ ಜಾರ್ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.
* ಈಗ ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ಹೆಚ್ಚಿದ ಬೆಂಡೆಕಾಯಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ.
* ಬೆಂಡೆಕಾಯಿಯ ಜಿಗುಟು ಹೋಗಿ, ಕುರುಕಲಾಗುವವರೆಗೆ ಚೆನ್ನಾಗಿ ಹುರಿದುಕೊಳ್ಳಿ.
* ಈಗ ಟೊಮೆಟೊ, ಹುಣಸೆಹಣ್ಣು, ಅರಿಶಿನವನ್ನು ಸೇರಿಸಿ, ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ.
* ಈಗ ಹುರಿದ ಬೆಂಡೆಕಾಯಿ ಮಿಶ್ರಣವನ್ನು ಸಂಪೂರ್ಣ ತಣ್ಣಗಾಗಿಸಿ, ಮಿಕ್ಸರ್ ಜಾರ್ಗೆ ಹಾಕಿ, ಉಪ್ಪು ಸೇರಿಸಿ, ಒರಟಾಗಿ ರುಬ್ಬಿಕೊಳ್ಳಿ.
* ಈಗ ಬಾಣಲೆಯಲ್ಲಿ ಮತ್ತೆ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಒಣ ಕೆಂಪು ಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆ ಮತ್ತು ಚಿಟಿಕೆ ಹಿಂಗ್ ಹಾಕಿ, ಒಗ್ಗರಣೆ ಸಿಡಿಯಲು ಬಿಡಿ.
* ಈಗ ಒಗ್ಗರಣೆಗೆ ತಯಾರಿಸಿದ ಚಟ್ನಿಯನ್ನು ಸೇರಿಸಿ, ಚೆನ್ನಾಗಿ ಬೇಯಿಸಿ.
* ಇದೀಗ ಬೆಂಡೆಕಾಯಿ ಚಟ್ನಿ ತಯಾರಾಗಿದ್ದು, ಬಿಸಿ ಅನ್ನ, ಇಡ್ಲಿ, ದೋಸೆಯೊಂದಿಗೆ ಸವಿಯಿರಿ. ಇದನ್ನೂ ಓದಿ: ಬಾಳೆ ಹೂವಿನ ಪಲ್ಯ – ತುಂಬಾ ರುಚಿಕರ