ಹೆಚ್ಚು ಸಮಯ ಬೇಕಾಗದೇ ಕೇವಲ ಅರ್ಧ ಗಂಟೆಯಲ್ಲಿ ಮಾಡಬಹುದಾದ ರುಚಿಕರವಾದ ಸಿಗಡಿ ರೋಸ್ಟ್ ಅನ್ನು ಪ್ರತಿಯೊಬ್ಬರೂ ಮಾಡಿ ನೋಡಲೇ ಬೇಕು. ಮಸಾಲೆಗಳ ಪರಿಪೂರ್ಣವಾದ ಮಿಶ್ರಣದ ಕೇರಳ ಶೈಲಿಯ ಸಿಗಡಿ ರೋಸ್ಟ್ (Kerala style prawn roast) ಅನ್ನದೊಂದಿಗೆ ಸೂಪರ್ ಟೇಸ್ಟ್ ನೀಡುತ್ತದೆ. ಸುಲಭವಾಗಿ ಮಾಡಬಹುದಾಗ ಕೇರಳ ಶೈಲಿಯ ಸಿಗಡಿ ರೋಸ್ಟ್ ಒಮ್ಮೆ ನೀವೂ ಮಾಡಿ ನೋಡಿ.
Advertisement
Advertisement
ಬೇಕಾಗುವ ಪದಾರ್ಥಗಳು:
ಸಿಗಡಿ – 15-20
ತೆಂಗಿನ ಎಣ್ಣೆ – 2 ಟೀಸ್ಪೂನ್
ಕರಿಬೇವಿನ ಎಲೆ – 10-12
ಸಾಸಿವೆ – ಅರ್ಧ ಟೀಸ್ಪೂನ್
ಮೆಂತ್ಯ – ಕಾಲು ಟೀಸ್ಪೂನ್
ಹೆಚ್ಚಿದ ಬೆಳ್ಳುಳ್ಳಿ – 5-6
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್
ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮಸಾಲೆ ರುಬ್ಬಲು:
ಶುಂಠಿ – 1 ಇಂಚು
ಹಸಿರು ಮೆಣಸಿನಕಾಯಿ – 2
ಕರಿಬೇವಿನ ಎಲೆ – 10-12
ಹೆಚ್ಚಿದ ಈರುಳ್ಳಿ – ಅರ್ಧ ಕಪ್ ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಪನೀರ್ ಗೀ ರೋಸ್ಟ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮಿಕ್ಸರ್ ಗ್ರೈಂಡರ್‌ಗೆ ಶುಂಠಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆ ಹಾಗೂ ಹೆಚ್ಚಿದ ಈರುಳ್ಳಿ ಹಾಕಿ, ನುಣ್ಣಗೆ ರುಬ್ಬಿ ಪಕ್ಕಕ್ಕಿಡಿ.
* ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಕರಿಬೇವು, ಸಾಸಿವೆ, ಮೆಂತ್ಯ ಹಾಗೂ ಬೆಳ್ಳುಳ್ಳಿ ಹಾಕಿ 1 ನಿಮಿಷ ಹುರಿಯಿರಿ.
* ಈಗ ತಯಾರಿಸಿಟ್ಟ ಮಸಾಲೆ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ.
* ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿನ, ಕರಿಮೆಣಸಿನ ಪುಡಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಮತ್ತೆ 1 ನಿಮಿಷ ಫ್ರೈ ಮಾಡಿ.
* ಬಳಿಕ ಮಸಾಲೆಗೆ ಸಿಗಡಿ ಹಾಕಿ, 2-3 ನಿಮಿಷ ಚೆನ್ನಾಗಿ ಬೇಯಿಸಿ.
* ಇದೀಗ ಕೇರಳ ಶೈಲಿಯ ರುಚಿಕರ ಸಿಗಡಿ ರೋಸ್ಟ್ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ