ಚಾಕ್ಲೇಟ್ ಮೋಸ್ ಕ್ರೀಮಿ, ರಿಚ್, ಸಿಂಪಲ್ ಆದ ಸಿಹಿಯಾಗಿದ್ದು, ಯಾವುದೇ ಪಾರ್ಟಿಗೂ ಸೂಕ್ತವಾಗಿದೆ. ಕೆಲವೇ ಪದಾರ್ಥಗಳನ್ನು ಬಳಸಿ ಇದನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಇದರ ಕ್ರೀಮಿ ಟೆಕ್ಸ್‌ಚರ್ ಮಕ್ಕಳಿ ಇಷ್ಟವಾಗುತ್ತದೆ. ನೀವೂ ಇದನ್ನು ಸಿಂಪಲ್ ಆಗಿ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಚಾಕ್ಲೇಟ್ – 250 ಗ್ರಾಂ
ನೀರು – ಅರ್ಧ ಕಪ್ (2 ಪ್ರತ್ಯೇಕ ಬಳಕೆಗೆ)
ಬೆಣ್ಣೆ – 2 ಟೀಸ್ಪೂನ್
ವೆನಿಲ್ಲಾ ಸಾರ – 1 ಟೀಸ್ಪೂನ್
ಮೊಟ್ಟೆಯ ಹಳದಿ ಬಾಗ – 3
ಸಕ್ಕರೆ ಪುಡಿ – ಕಾಲು ಕಪ್
ವಿಪ್ಪಿಂಗ್ ಕ್ರೀಮ್ – ಒಂದೂವರೆ ಕಪ್ ಇದನ್ನೂ ಓದಿ: ಒಳಗಡೆ ಮೃದು, ಹೊರಗಡೆ ಕ್ರಂಚಿ – ಸುಲಭದ ಶುಂಠಿ ಕುಕೀಸ್ ಹೀಗೆ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‌ನಲ್ಲಿ ವಿಪ್ಪಿಂಗ್ ಕ್ರೀಮ್ ಹಾಕಿಕೊಂಡು, ಅದನ್ನು ಎಲೆಕ್ಟ್ರಿಕ್ ವಿಸ್ಕ್ ಬಳಸಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ.
* ಕ್ರೀಮ್ ಮೃದುವಾದ ನಂತರ ಅದನ್ನು ಸೆಟ್ ಆಗಲು ಫ್ರಿಡ್ಜ್‌ನಲ್ಲಿ ಇಡಿ.
* ಡಬಲ್ ಬಾಯ್ಲರ್ ಅಥವಾ ಒಂದು ಪಾತ್ರೆಯಲ್ಲಿ ನೀರನ್ನು ಮಧ್ಯಮ ಉರಿಯಲ್ಲಿ ಕಾಯಿಸಿಕೊಳ್ಳಿ. ಅದರ ಮೇಲೆ ಡಬಲ್ ಬಾಯ್ಲರ್‌ನ ಇನ್ನೊದು ಭಾಗವನ್ನಿಡಿ. ಅಥವಾ ಇನ್ನೊಂದು ಪಾತ್ರೆಯನ್ನಿಡಿ.
* ಅದಕ್ಕೆ ಚಾಕ್ಲೇಟ್, ಕಾಲು ಕಪ್ ನೀರು, ಬೆಣ್ಣೆ, ವೆನಿಲ್ಲಾ ಸಾರ ಸೇರಿಸಿ.
* ಚಾಕ್ಲೇಟ್ ಸಂಪೂರ್ಣ ಕರಗಿದ ಬಳಿಕ ಅದನ್ನು ನಯವಾಗಿ ಮಿಶ್ರಣ ಮಾಡಿಕೊಳ್ಳಿ. ಉರಿಯನ್ನು ಆಫ್ ಮಾಡಿ, ಪಕ್ಕಕ್ಕಿಡಿ.
* ತಳವಿರುವ ಪಾತ್ರೆಯಲ್ಲಿ ಕಡಿಮೆ ಉರಿಯಲ್ಲಿ ಮೊಟ್ಟೆಯ ಹಳದಿ ಭಾಗವನ್ನು ಹಾಕಿ, ಅದಕ್ಕೆ ಕಾಲು ಕಪ್ ನೀರು, ಸಕ್ಕರೆ ಸೇರಿಸಿ ನಿರಂತರವಾಗಿ ಮಿಶ್ರಣ ಮಾಡುತ್ತಿರಿ.
* ಶಾಖ 160 ಡಿಗ್ರಿ ಪ್ಯಾರಹೀಟ್ ಆಗುವವರೆಗೂ ಮಿಶ್ರಣ ಮಾಡುತ್ತಿರಿ. ಇದಕ್ಕೆ ಸುಮಾರು 10 ನಿಮಿಷ ತೆಗೆದುಕೊಳ್ಳತ್ತದೆ. ಮೊಟ್ಟೆ ಬೆಂದು ಗಟ್ಟಿಯಾಗದಂತೆ ಎಚ್ಚರವಹಿಸಿ, ದೂರ ಹೋಗದೇ ನಿರಂತರವಾಗಿ ಬೆರೆಸುತ್ತಿರಿ. ಬಳಿಕ ಉರಿಯನ್ನು ಆಫ್ ಮಾಡಿ.
* ತಯಾರಿಸಿಟ್ಟ ಎಲ್ಲಾ ಮಿಶ್ರಣ ತಣ್ಣಗಾದ ಬಳಿಕ ಮೊಟ್ಟೆಯ ಮಿಶ್ರಣವನ್ನು ಚಾಕ್ಲೇಟ್ ಮಿಶ್ರಣಕ್ಕೆ ಹಾಕಿ, ಚೆನ್ನಾಗಿ ಬೆರೆಸಿಕೊಳ್ಳಿ.
* ಒಂದು ಅಗಲದ ಪಾತ್ರೆಯಲ್ಲಿ ಐಸ್ ಕ್ಯೂಬ್‌ಗಳನ್ನಿಟ್ಟು, ಅದರ ಮೇಲೆ ಚಾಕ್ಲೇಟ್ ಮಿಶ್ರಣದ ಪಾತ್ರೆಯನ್ನು ಇಡಿ. ಸುಮಾರು 5-7 ನಿಮಿಷಗಳ ಕಾಲ ನಿಧಾನವಾಗಿ ಆಗಾಗ ಕೈಯಾಡಿಸುತ್ತಾ ಚಾಕ್ಲೇಟ್ ಅನ್ನು ತಣ್ಣಗಾಗಲು ಬಿಡಿ.
* ನಯವಾಗಿ ತಣ್ಣಗಾದ ಚಾಕ್ಲೇಟ್ ಮಿಶ್ರಣಕ್ಕೆ ಫ್ರಿಜ್‌ನಲ್ಲಿ ಇಟ್ಟಿದ್ದ ಕ್ರೀಮ್ ಅನ್ನು ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಇದೀಗ ಚಾಕ್ಲೇಟ್ ಮೋಸ್ ತಯಾರಾಗಿದೆ. ಇದನ್ನು ಡೆಸರ್ಟ್ ಕಪ್‌ಗಳಲ್ಲಿ ಬಡಿಸಿ, ಸವಿಯಿರಿ. ಇದನ್ನೂ ಓದಿ: ಸುಲಭವಾಗಿ ಮಾಡಿ ಮಶ್ರೂಮ್ ಸ್ಯಾಂಡ್‌ವಿಚ್
Advertisement
Web Stories