ಚಿಕನ್ ಬಾರ್ಬೆಕ್ಯೂ ಎಂದರೆ ನಾನ್‌ವೆಜ್ ಪ್ರಿಯರ ಬಾಯಲ್ಲಿ ನೀರು ಬರದೇ ಇರಲಾರದು. ರೆಸ್ಟೊರೆಂಟ್ ಇಲ್ಲವೇ ಸ್ಟ್ರೀಟ್ ಫೂಡ್ ಆಗಿ ಇದು ಹೆಚ್ಚು ಫೇಮಸ್ ಇದ್ದರೂ ಕಡಿಮೆ ವೆಚ್ಚದಲ್ಲಿ ಮನೆಯಲ್ಲಿಯೂ ಮಾಡಬಹುದು. ಹಾಲಿಡೇ ಟೈಮ್‌ನಲ್ಲಿ ಟ್ರೈ ಮಾಡೋಕೆ ಪರ್ಫೆಕ್ಟ್ ರೆಸಿಪಿ ಕೂಡಾ ಹೌದು. ನಾವಿಂದು ಬಾರ್ಬೆಕ್ಯೂ ಚಿಕನ್ ಸಲಾಡ್ ಮಾಡೋದು ಹೇಗೆಂದು ಹೇಳಿಕೊಡಲಿದ್ದೇವೆ. ಇದನ್ನೂ ಒಮ್ಮೆ ಟ್ರೈ ಮಾಡಿ, ಬಾರ್ಬೆಕ್ಯೂ ವಿವಿಧ ರೀತಿಯಲ್ಲಿ ಸವಿದು ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಆಲಿವ್ ಎಣ್ಣೆ – 1 ಟೀಸ್ಪೂನ್
ಮೂಳೆಗಳಿಲ್ಲದ, ಚರ್ಮರಹಿತ ತೆಳ್ಳಗೆ ಕತ್ತರಿಸಿದ ಚಿಕನ್ ಬ್ರೆಸ್ಟ್ – 2
ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
ಉಪ್ಪು – ರುಚಿಗೆ ತಕ್ಕಷ್ಟು
ಬೇಯಿಸಿದ ಕಾರ್ನ್ ಕರ್ನಲ್ಸ್ – ಮುಕ್ಕಾಲು ಕಪ್
ಬೇಯಿಸಿದ ಕಪ್ಪು ಬೀನ್ಸ್ ಕಾಳು – ಮುಕ್ಕಾಲು ಕಪ್
ಹೆಚ್ಚಿದ ಈರುಳ್ಳಿ – ಕಾಲು ಕಪ್
ಹೆಚ್ಚಿದ ಟೊಮೆಟೋ – ಕಾಲು ಕಪ್
ತುರಿದ ಚೀಸ್ – ಅರ್ಧ ಕಪ್
ಮೆಯಾನೀಸ್ – ಕಾಲು ಕಪ್
ಬಾರ್ಬೆಕ್ಯೂ ಸಾಸ್ – ಕಾಲು ಕಪ್ ಇದನ್ನೂ ಓದಿ: ನಾಲ್ಕೇ ಪದಾರ್ಥ ಬಳಸಿ ಮಾಡಿ ಫ್ರೆಂಚ್ ಆನಿಯನ್ ಪೋರ್ಕ್ ಚಾಪ್ಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚಿಕನ್ ಬ್ರೆಸ್ಟ್‌ಗೆ ಉಪ್ಪು ಹಾಗೂ ಕರಿಮೆಣಸಿನ ಪುಡಿ ಹಾಕಿ ಸುತ್ತಲೂ ಚೆನ್ನಾಗಿ ಸವರಿ.
* ಬಾಣಲೆಯನ್ನು ಮಧ್ಯಮ ಉರಿಯಲ್ಲಿ ಬಿಸಿಗಿಟ್ಟು, ಎಣ್ಣೆ ಹಾಕಿ. ಅದರಲ್ಲಿ ಚಿಕನ್ ಅನ್ನು ಹಾಕಿ ಬೇಯಿಸಿಕೊಳ್ಳಿ.
* ಪ್ರತಿ ಬದಿಯಲ್ಲೂ ಸುಮಾರು 3-4 ನಿಮಿಷ ಬೇಯಿಸಿಕೊಳ್ಳಿ.
* ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಿಸಿ, ಬಳಿಕ ಅದನ್ನು ಬೈಟ್ಸ್ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಳ್ಳಿ.
* ಈಗ ದೊಡ್ಡ ಬಟ್ಟಲಿನಲ್ಲಿ ಚಿಕನ್, ಕಾರ್ನ್, ಕಪ್ಪು ಬೀನ್ಸ್, ಈರುಳ್ಳಿ, ಟೊಮೆಟೋಗಳನ್ನು ಇರಿಸಿ.
* ಅದರ ಮೇಲೆ ಚೀಸ್, ಮೆಯಾನೀಸ್, ಬಾರ್ಬೆಕ್ಯೂ ಸಾಸ್ ಸುರಿದು, ಎಲ್ಲವೂ ಚೆನ್ನಾಗಿ ಸಂಯೋಜಿಸುವಂತೆ ನಿಧಾನವಾಗಿ ಟಾಸ್ ಮಾಡಿ.
* ಇದೀಗ ಬಾರ್ಬೆಕ್ಯೂ ಚಿಕನ್ ಸಲಾಡ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನು ಟೋರ್ಟಿಲ್ಲಾ ಸ್ಟ್ರಿಪ್‌ನೊಂದಿಗೂ ಸವಿಯಬಹುದು. ಇದನ್ನೂ ಓದಿ: ಹಸಿವನ್ನು ತಣಿಸಲು ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡಿ
Advertisement
Web Stories