ನಾವೆಲ್ಲರೂ ವಿವಿಧ ರೀತಿಯಲ್ಲಿ ತರಕಾರಿ ಪಲ್ಯಗಳನ್ನು ಮಾಡಿ ಸವಿದಿರುತ್ತೇವೆ. ಆದರೆ ಯಾವತ್ತಾದರೂ ಮೊಟ್ಟೆಯಿಂದ ಪಲ್ಯ ಮಾಡಿದ್ದೀರಾ? ಚಪಾತಿ, ರೋಟಿ, ಪರೋಟದೊಂದಿಗೆ ಚೆನ್ನಾಗಿ ಹೊಂದುವ ವಿಭಿನ್ನವಾದ ಮೊಟ್ಟೆ ಪಲ್ಯವನ್ನು ನೀವೂ ಕೂಡಾ ಒಮ್ಮೆ ಟ್ರೈ ಮಾಡಿ. ಏಕೆಂದರೆ ತುಂಬಾ ಸಿಂಪಲ್ ಹಾಗೂ ಬೇಗನೆ ಮಾಡಬಹುದಾದ ರೆಸಿಪಿ ಅರ್ಜೆಂಟ್ ಆಗಿ ಅಡುಗೆ ಮಾಡುವ ಸಮಯದಲ್ಲಿ ತುಂಬಾ ಸಹಾಯವಾಗುತ್ತದೆ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಿದ ಮೊಟ್ಟೆ – 3
ಕತ್ತರಿಸಿದ ಕ್ಯಾಪ್ಸಿಕಂ – ಅರ್ಧ
ಕತ್ತರಿಸಿದ ಟೊಮೆಟೊ – 1
ಎಣ್ಣೆ – 4 ಟೀಸ್ಪೂನ್
ಅರಿಶಿನ ಹುಡಿ – ಅರ್ಧ ಟೀಸ್ಪೂನ್
ಜೀರಿಗೆ ಹುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನ ಹುಡಿ – 1 ಟೀಸ್ಪೂನ್
ಕಸೂರಿ ಮೇಥಿ – 1 ಟೀಸ್ಪೂನ್
ಕಿಚನ್ ಕಿಂಗ್ ಮಸಾಲ – 1 ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ತವಾವನ್ನು ಬಿಸಿಗೆ ಇಟ್ಟು, ಅದಕ್ಕೆ 4 ಟೀಸ್ಪೂನ್ ಎಣ್ಣೆ ಹಾಕಿ.
* ಅದಕ್ಕೆ ಕತ್ತರಿಸಿಕೊಂಡ ಟೊಮೆಟೋ ಹಾಗೂ ಕ್ಯಾಪ್ಸಿಕಂ ಹಾಕಿ.
* ಬಳಿಕ ಅರಿಶಿನ ಹುಡಿ, ಜೀರಿಗೆ ಹುಡಿ, ಉಪ್ಪು ಮತ್ತು ಕೆಂಪು ಮೆಣಸಿನ ಹುಡಿ ಹಾಕಿ ಚೆನ್ನಾಗಿ ಹುರಿಯಿರಿ.
* ಕಸೂರಿ ಮೇಥಿಯನ್ನು ಅಂಗೈಯಲ್ಲಿ ಹಿಚುಕಿಕೊಂಡು ಮಸಾಲೆಗೆ ಹಾಕಿ.
* ಈಗ ಬೇಯಿಸಿದ ಮೊಟ್ಟೆಯನ್ನು ಮಧ್ಯಮ ಗಾತ್ರದ ತುಂಡುಗಳನ್ನಾಗಿ ಮಾಡಿ, ಮಸಾಲೆಗೆ ಹಾಕಿ.
* ಈಗ ಕಿಚನ್ ಕಿಂಗ್ ಮಸಾಲ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿ.
* ಇದೀಗ ರುಚಿಕರ ಮೊಟ್ಟೆ ಪಲ್ಯ ತಯಾರಾಗಿದ್ದು, ಚಪಾತಿ ಅಥವಾ ರೋಟಿಯೊಂದಿಗೆ ಬಡಿಸಿ.