ಹೆಸರು ಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜನರು ಬಳಸುವ ಕಾಳುಗಳಲ್ಲಿ ‘ಹೆಸರು ಕಾಳು’ ಅಗ್ರಸ್ಥಾನದಲ್ಲಿದೆ. ಈ ಕಾಳಿನಲ್ಲಿ ಜನರು ಸಾರು, ಸಲಾಡ್ ಮಾಡಿಕೊಳ್ಳುತ್ತಾರೆ. ಇಂದು ನಾವು ಸಿಂಪಲ್ ಆಗಿ ಹೇಗೆ ಹೆಸರು ಕಾಳಿನ ಪಲ್ಯ ಮಾಡುವುದು ಎಂಬುದನ್ನು ಹೇಳಿಕೊಡುತ್ತೇನೆ. ಇದನ್ನು ಮಾಡುವುದು ಸುಲಭವಾಗಿದ್ದು, ಆರೋಗ್ಯಕರವು ಆಗಿದೆ.
Advertisement
ಬೇಕಾಗಿರುವ ಪದಾರ್ಥಗಳು:
* ಮೊಳಕೆ ಕಟ್ಟಿದ ಹೆಸರು ಕಾಳು – 2 ಕಪ್
* ಎಣ್ಣೆ – ಅರ್ಧ ಟೀಸ್ಪೂನ್
* ಸಾಸಿವೆ – 1 ಟೀಸ್ಪೂನ್
* ಜೀರಿಗೆ – 1 ಟೀಸ್ಪೂನ್
* ಹಿಂಗು – ಸ್ವಲ್ಪ
* ಕರಿಬೇವಿನ ಎಲೆ – ಅರ್ಧ ಕಪ್
* ಕಟ್ ಮಾಡಿದ ಬೆಳ್ಳುಳ್ಳಿ – 2
Advertisement
* ಮೆಣಸಿನಕಾಯಿ – 1
* ಕಟ್ ಮಾಡಿದ ಈರುಳ್ಳಿ – 1 ಕಪ್
* ಕಟ್ ಮಾಡಿದ ಟೊಮೆಟೊ – 1 ಕಪ್
* ಅರಿಶಿನ ಪುಡಿ – ಅರ್ಧ ಟೀಸ್ಪೂನ್
* ಮೆಣಸಿನ ಪುಡಿ – ಅರ್ಧ ಟೀಸ್ಪೂನ್
* ಬೆಲ್ಲ – ಅರ್ಧ ಟೀಸ್ಪೂನ್
* ಉಪ್ಪು – 1 ಟೀಸ್ಪೂನ್
* ನೀರು – 2 ಲೂಟಾ
* ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಸಾಸಿವೆ, ಜೀರಿಗೆ, ಸ್ವಲ್ಪ ಹಿಂಗು ಮತ್ತು ಕರಿ ಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ.
* ಅದಕ್ಕೆ ಬೆಳ್ಳುಳ್ಳಿ, ಮೆಣಸಿನಕಾಯಿ, ಈರುಳ್ಳಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
* 2 ರಿಂದ 3 ನಿಮಿಷ ಬಿಟ್ಟು ಟೊಮೆಟೊ ಸೇರಿಸಿ ಮೃದುವಾಗಿ ತಿರುಗಿಸಿ. ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಬೆಲ್ಲ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಈ ಫ್ರೈ ಪರಿಮಳ ಬರುವ ತನಕ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
* ಬೇರೆ ಪಾತ್ರೆಯಲ್ಲಿ ಹೆಸರು ಕಾಳನ್ನು ಹೆಚ್ಚು ಬೇಯಿಸಿ ಅದಕ್ಕೆ ಗ್ರೇವಿ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ನೀರು ಹಾಕಿ ಬೇಯಿಸಿ. 15 ನಿಮಿಷಗಳ ಕಾಲ ಮುಚ್ಚಿ.
– ಅಂತಿಮವಾಗಿ ಕೊತ್ತಂಬರಿ ಸೊಪ್ಪನ್ನು ಸೇರಿಸಿದ್ರೆ ‘ಹೆಸರು ಕಾಳಿನ ಪಲ್ಯ’ ರೆಡಿ. ಇದನ್ನು ಜೋಳದ ರೊಟ್ಟಿ/ಚಪಾತಿಯೊಂದಿಗೆ ಸೇವಿಸಿ.