ಉತ್ತರ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿ ಈ ಮಂಡಕ್ಕಿ ಒಗ್ಗರಣೆ (Mandakki Oggarne) ಫೇಮಸ್. ಇದನ್ನು ಉಪಾಹಾರ ಮಾತ್ರವಲ್ಲದೇ ಲಘು ಭೋಜನವಾಗಿಯೂ ಸವಿಯಬಹುದು. ಫಟಾಫಟ್ ಅಂತ ಮಾಡಬಹುದಾದ ಮಂಡಕ್ಕಿ ಒಗ್ಗರಣೆ ರೆಸಿಪಿಯನ್ನು ನಾವಿಂದು ಹೇಳಿಕೊಡುತ್ತೇವೆ. ಬೇಗನೆ ತಿಂಡಿ ಮಾಡಬೇಕಾದ ಸಂದರ್ಭದಲ್ಲಿ ಇದನ್ನು ಖಂಡಿತವಾಗಿಯೂ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಮಂಡಕ್ಕಿ – 8 ಕಪ್
ಹುರಿಗಡಲೆ – 4 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಸಣ್ಣಗೆ ಹೆಚ್ಚಿದ ಟೊಮೆಟೊ – 1
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 4
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
ನಿಂಬೆ ಹಣ್ಣು – 1
ಅರಿಶಿನ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ – 2 ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್
ಉದ್ದಿನ ಬೇಳೆ – 1 ಟೀಸ್ಪೂನ್
ಕಡಲೆ ಬೇಳೆ – 1 ಟೀಸ್ಪೂನ್
ನೆಲಗಡಲೆ – 2 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು ಇದನ್ನೂ ಓದಿ: ಆರೋಗ್ಯಕರ ಹುರುಳಿ ಕಾಳಿನ ದೋಸೆ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಹುರಿಗಡಲೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.
* ದೊಡ್ಡ ಪಾತ್ರೆಯಲ್ಲಿ ಮಂಡಕ್ಕಿಯನ್ನು ಹಾಕಿ, ತೊಳೆದು, ತಕ್ಷಣ ನೀರಿನಿಂದ ತೆಗೆದು ಹಿಂಡಿಕೊಳ್ಳಿ.
* ಈಗ ಒಂದು ಬಾಣಲೆ ತೆಗೆದುಕೊಂಡು, ಅದಕ್ಕೆ ಎಣ್ಣೆ ಹಾಕಿ, ಬಿಸಿ ಮಾಡಿ. ಬಳಿಕ ಸಾಸಿವೆ ಹಾಕಿ ಸಿಡಿಸಿ.
* ನಂತರ ಉದ್ದಿನ ಬೇಳೆ, ಕಡಲೆ ಬೇಳೆ ಹಾಗೂ ನೆಲೆಗಡಲೆ ಸೇರಿಸಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಕರಿಬೇವಿನ ಎಲೆ ಹಾಗೂ ಹಸಿರು ಮೆಣಸಿನ ಕಾಯಿ ಹಾಕಿ 1-2 ನಿಮಿಷ ಹುರಿಯಿರಿ.
* ಈಗ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಫ್ರೈ ಮಾಡಿಕೊಳ್ಳಿ.
* ಈಗ ಟೊಮೆಟೊ, ಅರಿಶಿನ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಬಳಿಕ ಮಂಡಕ್ಕಿಯನ್ನು ಮಿಶ್ರಣಕ್ಕೆ ಸೇರಿಸಿ ಮಿಕ್ಸ್ ಮಾಡಿ.
* ಪುಡಿ ಮಾಡಿದ ಹುರಿಗಡಲೆ, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ಹಣ್ಣಿನ ರಸ ಸೇರಿಸಿ, 2-3 ನಿಮಿಷಗಳ ವರೆಗೆ ಹುರಿಯಿರಿ.
* ಇದೀಗ ಮಂಡಕ್ಕಿ ಒಗ್ಗರಣೆ ತಯಾರಾಗಿದ್ದು, ಉಪಾಹಾರ ಅಥವಾ ಲಘು ಭೋಜನವಾಗಿ ಸವಿಯಿರಿ. ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಮಾಡಿ ರುಚಿಕರವಾದ ಬೆಲ್ಲದ ಪರೋಟ