ಬಿರಿಯಾನಿ ತಿನ್ನಬೇಕು ಅಂತ ಹಲವರಿಗೆ ಆಗಾಗ ಅನ್ನಿಸುತ್ತಲೇ ಇರುತ್ತೆ. ಆದರೆ ಕೆಲವೊಮ್ಮೆ ನಾನ್‌ವೆಜ್ ತಿನ್ನಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಬಿರಿಯಾನಿ ಮಾಡಲು ವೆಜ್ ಆಯ್ಕೆಯನ್ನೇ ಮಾಡಿಕೊಳ್ಳಬೇಕಾಗುತ್ತದೆ. ಈ ಸಂದರ್ಭ ಮಶ್ರೂಮ್, ಪನೀರ್ ನಿಮ್ಮ ತಲೆಯಲ್ಲಿ ಹೊಳೆಯಬಹುದು. ಆದರೆ ಅದಾವುದೂ ನಿಮ್ಮ ಮನೆಯಲ್ಲಿ ಇಲ್ಲದೇ ಹೋದಾಗ ಟೊಮೆಟೊ ಬಳಸಿಯೇ ಬಿರಿಯಾನಿ ಮಾಡಿ ನೋಡಿ. ಟೊಮೆಟೊ ಬಿರಿಯಾನಿ ಮಾಡುವ ಸುಲಭ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ತುಪ್ಪ – 1 ಟೀಸ್ಪೂನ್
ಲವಂಗ – 5
ದಾಲ್ಚಿನ್ನಿ – 1 ಇಂಚು
ಏಲಕ್ಕಿ – 2
ಜೀರಿಗೆ – 1 ಟೀಸ್ಪೂನ್
ಸೋಂಪು – ಅರ್ಧ ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಈರುಳ್ಳಿ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಹಸಿರು ಮೆಣಸಿನಕಾಯಿ – 1
ಟೊಮೆಟೊ ಪ್ಯೂರಿ – 1 ಕಪ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಬಿರಿಯಾನಿ ಮಸಾಲಾ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕತ್ತರಿಸಿದ ಕ್ಯಾರೆಟ್ – ಅರ್ಧ
ಬಟಾಣಿ – 2 ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
ತೆಂಗಿನ ಹಾಲು – 1 ಕಪ್
ಸಣ್ಣಗೆ ಕತ್ತರಿಸಿದ ಪುದಿನಾ – 2 ಟೀಸ್ಪೂನ್
ನೀರು – 1 ಕಪ್
ಬಾಸ್ಮತಿ ಅಕ್ಕಿ – 1 ಕಪ್ (20 ನಿಮಿಷ ನೀರಿನಲ್ಲಿ ನೆನೆಸಿಡಿ)
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪ್ರೆಶರ್ ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ದಾಲ್ಚಿನ್ನಿ, ಲವಂಗ, ಏಲಕ್ಕಿ, ಜೀರಿಗೆ ಮತ್ತು ಸೋಂಪು ಹಾಕಿ ಹುರಿಯಿರಿ.
* ಬಳಿಕ ಈರುಳ್ಳಿಯನ್ನು ಸೇರಿಸಿ ಚೆನ್ನಾಗಿ ಹುರಿಯಿರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಭಾಗ ಮಾಡಿದ ಹಸಿರು ಮೆಣಸಿನಕಾಯಿಯನ್ನು ಸೇರಿಸಿ.
* ಈಗ ಟೊಮೆಟೊ ಪ್ಯೂರಿಯನ್ನು ಸೇರಿಸಿ, ಅದು ದಪ್ಪವಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.
* ಬಳಿಕ ಅರಿಶಿನ, ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮಸಾಲೆಗಳು ಸಂಪೂರ್ಣವಾಗಿ ಬೇಯುವವರೆಗೆ ಹುರಿಯಿರಿ.
* ಹೆಚ್ಚುವರಿಯಾಗಿ ಕ್ಯಾರೆಟ್, ಬಟಾಣಿ, ಪುದಿನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಒಂದು ನಿಮಿಷ ಹುರಿಯಿರಿ.
* ಈಗ ತೆಂಗಿನ ಹಾಲು ಮತ್ತು ನೀರನ್ನು ಸೇರಿಸಿ, ಚೆನ್ನಾಗಿ ಬೆರೆಸಿ.
* 20 ನಿಮಿಷ ನೆನೆಸಿದ ಬಾಸ್ಮತಿ ಅಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಪ್ರೆಶರ್ ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ 2 ಸೀಟಿ ಹೊಡೆಯುವವರೆಗೆ ಬೇಯಿಸಿ.
* ಇದೀಗ ಟೊಮೆಟೊ ಬಿರಿಯಾನಿ ರೆಡಿಯಾಗಿದ್ದು, ಈರುಳ್ಳಿ ಟೊಮೆಟೊ ರಾಯಿತದೊಂದಿಗೆ ಬಡಿಸಿದರೆ ಸೂಪರ್ ಟೇಸ್ಟ್ ನೀಡುತ್ತದೆ.