ಮಾರುಕಟ್ಟೆಯಲ್ಲಿ ಸಿಗುವ ಫ್ರೂಟ್ ಜೆಲ್ಲಿಗಳಿಗೆ ಹೆಚ್ಚಾಗಿ ಕೃತಕ ಪದಾರ್ಥಗಳನ್ನು ಬಳಸಲಾಗುತ್ತದೆ. ಈ ಮೂಲಕ ಅವುಗಳನ್ನು ಕೆಡದಂತೆ ಹೆಚ್ಚು ದಿನ ಬಳಸಲು ಸಾಧ್ಯವಾಗುವಂತೆ ಮಾಡಲಾಗುತ್ತದೆ. ಆದರೆ ಅವುಗಳಿಂದ ಆರೋಗ್ಯಕ್ಕೆ ಹಾನಿಯಾಗುವ ಭೀತಿ ಹುಟ್ಟೋದು ಸಹಜ. ಹೀಗಾಗಿ ನಾವು ಕೇವಲ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಆಪಲ್ ಜೆಲ್ಲಿ ಮನೆಯಲ್ಲಿಯೇ ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇವೆ. ಹೆಚ್ಚಾಗಿ ಮಕ್ಕಳು ಇಷ್ಟಪಟ್ಟು ಸವಿಯೋ ಈ ಜೆಲ್ಲಿಯನ್ನು ಅವರ ಆರೋಗ್ಯದ ಬಗ್ಗೆ ಯಾವುದೇ ಭಯವಿಲ್ಲದೆ ನೀಡಬಹುದು.
Advertisement
ಬೇಕಾಗುವ ಪದಾರ್ಥಗಳು:
ಸೇಬು ಹಣ್ಣುಗಳು – 6-7
ನಿಂಬೆ ರಸ – 1 ಹಣ್ಣು
ನೀರು – 6 ಕಪ್
ಸಕ್ಕರೆ – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ಡೈರಿ ಉತ್ಪನ್ನ ಬೇಡ – ಕೂಲ್ ಕೂಲ್ ಗ್ರೇಪ್ ಐಸ್ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸೇಬುಗಳನ್ನು ತೊಳೆದು ತುಂಡುಗಳಾಗಿ ಕತ್ತರಿಸಿ.
* ಸೇಬಿನ ತುಂಡುಗಳ ಮೇಲೆ ನಿಂಬೆ ರಸವನ್ನು ಸುರಿಯಿರಿ. ಇದರಿಂದ ಅವು ಕಂದು ಬಣ್ಣಕ್ಕೆ ತಿರುಗುವುದಿಲ್ಲ.
* ಬಾಣಲೆಗೆ ಸೇಬುಗಳನ್ನು ಹಾಕಿ, ನೀರನ್ನು ಸೇರಿಸಿ ಸುಮಾರು 30 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ, ಮೃದುವಾಗುವವರೆಗೆ ಸೇಬುಗಳನ್ನು ಬೇಯಿಸಿ.
* ಉರಿಯನ್ನು ಆಫ್ ಮಾಡಿ, ಸ್ವಚ್ಛವಾದ ಬಟ್ಟೆಯಲ್ಲಿ ಅದರ ನೀರಿನಂಶವನ್ನು ಸೋಸಿ ಸಂಗ್ರಹಿಸಿ. ಸೇಬುಗಳನ್ನು ಹೆಚ್ಚು ಒತ್ತಬೇಡಿ. ಇದರಿಂದ ಅದರ ಬಣ್ಣ ಸ್ಪಷ್ಟವಿರುವುದಿಲ್ಲ.
* ಈಗ ಸೇಬನ ರಸವನ್ನು ಮತ್ತೆ ಬಾಣಲೆಗೆ ಹಾಕಿ, ಸಕ್ಕರೆ ಸೇರಿಸಿ ಬಿಸಿ ಮಾಡಿ.
* ರಸ ಕುದಿಯಲು ಪ್ರಾರಂಭಿಸುತ್ತಿದ್ದಂತೆ ಉರಿಯನ್ನು ಕಡಿಮೆ ಮಾಡಿ ಬೇಯಿಸಿಕೊಳ್ಳಿ.
* ಮುಚ್ಚಳವಿರುವ ಸ್ವಚ್ಛ ಗಾಜಿನ ಬಾಟಲಿಯಲ್ಲಿ ರಸವನ್ನು ಸುರಿಯಿರಿ. ನಂತರ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ.
* 24 ಗಂಟೆಗಳ ಬಳಿಕ ಆಪಲ್ ಜೆಲ್ಲಿ ಬಳಕೆಗೆ ಸಿದ್ಧವಾಗುತ್ತದೆ. ಇದನ್ನೂ ಓದಿ: ಮಕ್ಕಳಿಗಾಗಿ ಚೋಕೋ ಚಿಪ್ ಕುಕ್ಕೀಸ್..!
Advertisement
Web Stories