ಆಲೂ ಸಮೋಸ, ವೆಜ್‌ಟೇಬಲ್ ಸಮೋಸ ಎಲ್ಲರಿಗೂ ಇಷ್ಟ. ಹೋಟೆಲ್, ಬೀದಿಗಳಲ್ಲೂ ಇದು ಸಾಮಾನ್ಯವಾಗಿ ಸಿಗುತ್ತದೆ. ಇದರ ರುಚಿಗೆ ಮಾರುಹೋಗದವರು ಯಾರಿದ್ದಾರೆ? ನಾವಿಂದು ಗರಿಗರಿಯಾದ ಚಿಕನ್ ಸಮೋಸ (Chicken Samosa) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಸಾಮಾನ್ಯವಾಗಿ ಹೋಟೆಗಳಲ್ಲಿ ಇದು ಸಿಗುವುದು ಬಲು ಅಪರೂಪ. ನೀವಿದನ್ನು ಮನೆಯಲ್ಲಿಯೇ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಸಣ್ಣಗೆ ಕೊಚ್ಚಿದ ಚಿಕನ್ – 1 ಕಪ್
ಮೆಣಸಿನ ಪುಡಿ – ಒಂದೂವರೆ ಟೀಸ್ಪೂನ್
ಗರಂ ಮಸಾಲಾ – 1 ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್
ಸೋಂಪಿನ ಪುಡಿ – 1 ಟೀಸ್ಪೂನ್
ಕಾಳುಮೆಣಸು – ಅರ್ಧ ಟೀಸ್ಪೂನ್
ಕೊತ್ತಂಬರಿ ಪುಡಿ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಹುರಿಯಲು ಬೇಕಾಗುವಷ್ಟು
ಸಣ್ಣಗೆ ಹೆಚ್ಚಿದ ಈರುಳ್ಳಿ – 3
ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಶುಂಠಿ ಪೇಸ್ಟ್ – ಒಂದೂವರೆ ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಾಯಿ – 3
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಕಾಲು ಕಪ್
ಮೊಟ್ಟೆ – 1
ಮೈದಾ – 2 ಕಪ್
ನೀರು – ಅಗತ್ಯಕ್ಕೆ ತಕ್ಕಷ್ಟು ಇದನ್ನೂ ಓದಿ: ಸವಿದಷ್ಟೂ ಬೇಕೆನಿಸುತ್ತೆ ಪೆಪ್ಪರ್ ಮಟನ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪ್ಯಾನ್‌ನಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಈರುಳ್ಳಿಯನ್ನು ಹಾಕಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.
* ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಶ್ರಣ ಮಾಡಿ.
* ಬಳಿಕ ಸಣ್ಣಗೆ ಕೊಚ್ಚಿದ ಚಿಕನ್, ಸೋಂಪಿನ ಪುಡಿ, ಕಾಳುಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಚಿಕನ್ ಚೆನ್ನಾಗಿ ಬೆಂದ ಬಳಿಕ ಪ್ಯಾನ್ ಅನ್ನು ಪಕ್ಕಕ್ಕಿಟ್ಟು ಮಿಶ್ರಣವನ್ನು ಆರಲು ಬಿಡಿ.
* ಈಗ ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು, ಅದರಲ್ಲಿ ಮೈದಾ, ಮೊಟ್ಟೆ ಹಾಗೂ ಉಪ್ಪು ಹಾಕಿ ಮಿಶ್ರಣ ಮಾಡಿ.
* ಹಿಟ್ಟು ಚೆನ್ನಾಗಿ ಮಿಶ್ರಣವಾದ ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ಸಿದ್ಧಪಡಿಸಿ, ಲಟ್ಟಣಿಗೆಯಿಂದ ರೋಲ್ ಮಾಡಿಕೊಳ್ಳಿ.
* ಈಗ ಹಿಟ್ಟಿನ ಹಾಳೆಯ ಮೇಲೆ ಎರಡೆರಡು ಟೀಸ್ಪೂನ್ ಚಿಕನ್ ಮಿಶ್ರಣವನ್ನು ಹಾಕಿ, ಹಿಟ್ಟನ್ನು ಸಮೋಸ ಆಕಾರದಲ್ಲಿ ಮಡಚಿಕೊಳ್ಳಿ. ಎಲ್ಲಾ ಸ್ಟಫಿಂಗ್‌ಗಳನ್ನು ಹೀಗೇ ತಯಾರಿಸಿಕೊಳ್ಳಿ.
* ಈಗ ತಳವಿರುವ ಬಾಣಲೆಯಲ್ಲಿ ಡೀಪ್ ಫ್ರೈಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಸಮೋಸಗಳನ್ನು ಎಣ್ಣೆಯಲ್ಲಿ ಬಿಟ್ಟು ಹುರಿದುಕೊಳ್ಳಿ.
* ಸಮೋಸ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ.
* ಈಗ ಸಮೋಸಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಗರಿಗರಿಯಾದ ಚಿಕನ್ ಸಮೋಸ ಇದೀಗ ತಯಾರಾಗಿದ್ದು, ಸಾಸ್ ಅಥಾ ಗ್ರೀನ್ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ರುಚಿರುಚಿಯಾಗಿ ತಯಾರಿಸಿ ಚಿಕನ್ ಕೀಮಾ ಪಕೋಡಾ