ಜೈಪುರದ ವಿಶಿಷ್ಟ ಉಪಹಾರ ಮಿರ್ಚಿ ವಡಾವನ್ನು ಮುಖ್ಯವಾಗಿ ಭಾವನಾಗ್ರಿ ಮೆಣಸಿನಿಂದ ತಯಾರಿಸಲಾಗುತ್ತದೆ. ಜೈಪುರದ ಪ್ರತಿ ಮೂಲೆಗಳಲ್ಲೂ ಮಿರ್ಚಿ ವಡಾ ಮಾರಾಟ ಮಾಡೋ ಸ್ಟಾಲ್ಗಳು ಕಂಡುಬರುತ್ತವೆ. ಆದರೆ ಹೆಸರು ಹೇಳುವಂತೆ ಈ ಮಿರ್ಚಿ ವಡಾ ಹೆಚ್ಚು ಖಾರದ ಖಾದ್ಯವಲ್ಲ. ವಿಭಿನ್ನ ರುಚಿಯ ಈ ತಿನಿಸು ಎಲ್ಲರಿಗೂ ಇಷ್ಟವಾಗುತ್ತದೆ. ಹಾಗಿದ್ರೆ ತಡ ಮಾಡದೇ ಈ ಮಿರ್ಚಿ ವಡಾ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಭಾವನಾಗ್ರಿ ಮೆಣಸು – 250 ಗ್ರಾಂ
ಬೇಯಿಸಿದ ಆಲೂಗಡ್ಡೆ – 4
ಜೀರಿಗೆ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಹಿಂಗ್ – 1 ಚಿಟಿಕೆ
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಒಣ ಮಾವಿನ ಪುಡಿ – 1 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
ಕಡಲೆ ಹಿಟ್ಟು – 125 ಗ್ರಾಂ
ಅಜ್ವೈನ್ – 1 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್ ಇದನ್ನೂ ಓದಿ: ಟೇಸ್ಟಿ ಚಾಟ್ಗೆ ಬಳಸೋ ಗ್ರೀನ್ ಚಟ್ನಿ ಮಾಡೋದು ಹೇಗೆ?
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್ನಲ್ಲಿ ಕಡಲೆ ಹಿಟ್ಟು, ಅಜ್ವೈನ್ ಕಾಳು, ಉಪ್ಪು ಮತ್ತು ಕೆಂಪು ಮೆಣಸಿನ ಪುಡಿ ಹಾಕಿ. ನಿಧಾನವಾಗಿ ನೀರು ಸೇರಿಸಿ ಮತ್ತು ದಪ್ಪ ಪೇಸ್ಟ್ನಂತೆ ಕಲಸಿಕೊಳ್ಳಿ.
* ಹಿಟ್ಟಿನಲ್ಲಿ ಯಾವುದೇ ಉಂಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ ಅದನ್ನು ಪಕ್ಕಕ್ಕೆ ಇರಿಸಿ.
* ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ಮ್ಯಾಶ್ ಮಾಡಿ.
* ಅದಕ್ಕೆ ಉಪ್ಪು, ಅರಿಶಿನ ಪುಡಿ, ಜೀರಿಗೆ, ಒಣ ಮಾವಿನ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಮೆಣಸುಗಳನ್ನು ತೊಳೆದು ದಪ್ಪ ಹತ್ತಿಯ ಬಟ್ಟೆಯಿಂದ ಒರೆಸಿಕೊಳ್ಳಿ. ಮೆಣಸು ತೇವವಾಗಿರಬಾರದು.
* ಒಂದು ಚಾಕುವಿನ ಸಹಾಯದಿಂದ ಮೆಣಸಿನಕಾಯಿಯ ಒಂದು ಭಾಗದಲ್ಲಿ ಉದ್ದಕ್ಕೆ ಸೀಳಿ. ಅದರ ಒಳಗಿನ ಬೀಜಗಳನ್ನು ಹೊರಗೆ ತೆಗೆಯಿರಿ.
* ಈಗ ಆಲೂಗಡ್ಡೆ ಮಿಶ್ರಣವನ್ನು ಮೆಣಸಿನಕಾಯಿಯ ಒಳಗೆ ಚೆನ್ನಾಗಿ ತುಂಬಿಸಿಕೊಳ್ಳಿ. ಎಲ್ಲಾ ಮೆಣಸಿನಕಾಯಿಗಳನ್ನೂ ಹೀಗೆ ತಯಾರಿಸಿ ಇಡಿ.
* ಈಗ ಬಾಣಲೆಯಲ್ಲಿ ಮೆಣಸಿನಕಾಯಿಗಳನ್ನು ಹುರಿಯಲು ಎಣ್ಣೆ ಬಿಸಿ ಮಾಡಿ.
* ಮೆಣಸಿನಕಾಯಿಗಳನ್ನು ಕಡಲೆ ಹಿಟ್ಟಿನ ಬ್ಯಾಟರ್ನಲ್ಲಿ ಅದ್ದಿ, ನಂತರ ಅದನ್ನು ಕಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ.
* ಮಿರ್ಚಿ ವಡಾ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹಾಗೂ ಗರಿಗರಿಯಾಗುವವರೆಗೆ ಫ್ರೈ ಮಾಡಿ.
* ನಂತರ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ಮಿರ್ಚಿ ವಡಾ ತಯಾರಾಗಿದ್ದು, ಚಟ್ನಿಯೊಂದಿಗೆ ಬಡಿಸಿ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ
Advertisement
Web Stories