ಆರೋಗ್ಯಕ್ಕೆ ಒಳ್ಳೆಯದು ಅಂತ ಸೊಪ್ಪಿನ ಪಲ್ಯವನ್ನು ಎಲ್ಲರೂ ಮಾಡುತ್ತಾರೆ. ಆದರೆ ಅದನ್ನು ಅಷ್ಟೇ ರುಚಿಕರವಾಗಿ ಮಾಡುವುದು ಎಲ್ಲರಿಗೂ ಸವಾಲಾಗಿದೆ. ನಾವಿಂದು ಹೇಳಿಕೊಡುತ್ತಿರುವ ಮೆಂತ್ಯ ಸೊಪ್ಪಿನ ಬಾಜಿ (Methi Bhaji) ಒಮ್ಮೆ ಟ್ರೈ ಮಾಡಿ ನೋಡಿ. ರುಚಿಕರವೂ ಆರೋಗ್ಯಕರವೂ ಆದ ಮೆಂತ್ಯ ಸೊಪ್ಪಿನ ಬಾಜಿಯನ್ನು ನೀವು ಮತ್ತೆ ಮತ್ತೆ ಮನೆಯಲ್ಲಿ ಮಾಡುತ್ತೀರಿ ಖಂಡಿತಾ.
Advertisement
ಬೇಕಾಗುವ ಪದಾರ್ಥಗಳು:
ಎಣ್ಣೆ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 4
ಸೀಳಿದ ಹಸಿರು ಮೆಣಸಿನಕಾಯಿ – 2
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಅರಿಶಿನ – ಅರ್ಧ ಟೀಸ್ಪೂನ್
ಕತ್ತರಿಸಿದ ಮೆಂತ್ಯ ಸೊಪ್ಪು – 3 ಕಪ್
ಉಪ್ಪು – ಅರ್ಧ ಟೀಸ್ಪೂನ್
ತುರಿದ ತೆಂಗಿನಕಾಯಿ – ಅರ್ಧ ಕಪ್ ಇದನ್ನೂ ಓದಿ: ಚಹಾದೊಂದಿಗೆ ಆನಂದಿಸಿ ಕ್ರಿಸ್ಪಿ ಈರುಳ್ಳಿ ರಿಂಗ್ಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದೊಡ್ಡ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಹುರಿಯಿರಿ.
* ಬೆಳ್ಳುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಈರುಳ್ಳಿ ಸೇರಿಸಿ, ಮೃದುವಾಗುವವರೆಗೆ ಫ್ರೈ ಮಾಡಿ.
* ಈಗ ಅರಿಶಿನ ಸೇರಿಸಿ ಮತ್ತು ಚೆನ್ನಾಗಿ ಹುರಿಯಿರಿ.
* ಬಳಿಕ ಮೆಂತ್ಯ ಸೊಪ್ಪು ಸೇರಿಸಿ 3 ನಿಮಿಷಗಳ ಕಾಲ ಸಾಟ್ ಮಾಡಿ.
* ಮೆಂತ್ಯ ಸೊಪ್ಪಿನಲ್ಲಿ ನೀರಿನಂಶ ಹೆಚ್ಚು ಇರುವುದರಿಂದ ಹೆಚ್ಚಿನ ನೀರು ಸೇರಿಸುವ ಅಗತ್ಯವಿರುವುದಿಲ್ಲ.
* ನಂತರ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಕಡಾಯಿಗೆ ಮುಚ್ಚಳ ಹಾಕಿ, 10 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ.
* ಈಗ ತೆಂಗಿನ ತುರಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* 2 ನಿಮಿಷಗಳ ಕಾಲ ಮುಚ್ಚಿ ಬೇಯಿಸಿ.
* ಈಗ ಆರೋಗ್ಯಕರ ಮೆಂತ್ಯ ಸೊಪ್ಪಿನ ಬಾಜಿ ತಯಾರಾಗಿದ್ದು, ಚಪಾತಿ, ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರುಚಿಯಾದ ಸಬ್ಬಕ್ಕಿ ಕಿಚಡಿ ಮಾಡಿ ತಿನ್ನಿ