ಭಾರತೀಯರು ಸಿಹಿ ತಿಂಡಿಗಳನ್ನು ಪ್ರೀತಿಸುತ್ತಾರೆ. ಯಾವುದೇ ಹಬ್ಬ ಹರಿದಿನಗಳಲ್ಲಿ ಸಿಹಿ ಹಂಚುವ ಮೂಲಕ ಪದಗಳಿಲ್ಲದೆ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ದೀಪಾವಳಿಯಂತಹ ಹಬ್ಬ ಬಂದಾಗ ಗುಲಾಬ್ ಜಾಮೂನ್, ರಸಮಲೈ, ಲಡ್ಡು, ಬರ್ಫಿ ಮಾಡೋದು ಸಾಮಾನ್ಯ. ಇದು ಹಲವು ವರ್ಷಗಳಿಂದಲೇ ಜನರು ಮಾಡಿಕೊಂಡು ಬಂದಿದ್ದಾರೆ. ನಾವಿಂದು ನಿಮಗಾಗಿ ಒಂದು ಸ್ಪೆಷಲ್ ಸಿಹಿಯನ್ನು ಹೇಳಿಕೊಡುತ್ತೇವೆ. ಗುಲಾಬ್ ಜಾಮೂನ್ ಅನ್ನು ನೀವು ಯಾವಾಗಲೂ ಮಾಡಿರುತ್ತೀರಿ. ಆದರೆ ಗುಲಾಬ್ ಬರ್ಫಿ ಕೇಳಿದ್ದೀರಾ? ಇಲ್ಲ ಎಂದರೆ ಇಂದೇ ಇದನ್ನು ಮಾಡಿ, ಎಲ್ಲರಿಗೂ ಹಂಚಿ.
Advertisement
ಬೇಕಾಗುವ ಪದಾರ್ಥಗಳು:
ತುಪ್ಪ – 2 ಟೀಸ್ಪೂನ್
ಹಾಲು – 100 ಮಿ.ಲೀ
ಏಲಕ್ಕಿ ಪುಡಿ – ಚಿಟಿಕೆ
ಹಾಲಿನ ಪುಡಿ – 1 ಕಪ್
ಗುಲಾಬಿ ದಳಗಳು – 2-3 ಟೀಸ್ಪೂನ್
ಸಕ್ಕರೆ – 5 ಟೀಸ್ಪೂನ್
ಹೆಚ್ಚಿದ ಪಿಸ್ತಾ – ಕೆಲವು ಇದನ್ನೂ ಓದಿ: ದೀಪಾವಳಿ ಸ್ಪೆಷಲ್- ವಾಲ್ನಟ್ ಬರ್ಫಿ ಮಾಡಿ ಹಬ್ಬವನ್ನಾಚರಿಸಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪ್ಯಾನ್ ಅನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಸೇರಿಸಿ.
* ನಂತರ ಹಾಲು ಹಾಕಿ 2-3 ನಿಮಿಷಗಳ ಕಾಲ ಬೆರೆಸಿ.
* ಈಗ ಹಾಲಿನ ಪುಡಿಯನ್ನು ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಸೇರಿಸಿ.
* ಮಿಶ್ರಣವನ್ನು ಚೆನ್ನಾಗಿ ಬೆರೆಸಿ, ಯಾವುದೇ ಉಂಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ನಂತರ ಸಕ್ಕರೆ ಸೇರಿಸಿ, ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ತಳ ಹಿಡಿಯುವುದನ್ನು ತಡೆಯಲು ಆಗಾಗ ಬೆರೆಸಿಕೊಳ್ಳಿ.
* ಮಿಶ್ರಣ ಸಾಕಷ್ಟು ದಪ್ಪವಾದ ಬಳಿಕ ಸ್ವಲ್ಪ ಗುಲಾಬಿ ದಳಗಳು ಮತ್ತು ಹೆಚ್ಚಿದ ಪಿಸ್ತಾಗಳನ್ನು ಸೇರಿಸಿ, ಉರಿಯನ್ನು ಆಫ್ ಮಾಡಿ.
* ಒಂದು ಟ್ರೇ ತೆಗೆದುಕೊಂಡು ಸ್ವಲ್ಪ ತುಪ್ಪವನ್ನು ಗ್ರೀಸ್ ಮಾಡಿ. ಅದರ ಮೇಲೆ ಬಟರ್ ಪೇಪರ್ ಇರಿಸಿ.
* ಅದರ ಮೇಲೆ ಕೆಲವು ಗುಲಾಬಿ ದಳಗಳು ಮತ್ತು ಕತ್ತರಿಸಿದ ಪಿಸ್ತಾಗಳನ್ನು ಹರಡಿ.
* ತಯಾರಿಸಿಟ್ಟ ಮಿಶ್ರಣವನ್ನು ಅದರಲ್ಲಿ ಸುರಿದು, ಒಂದು ಚಾಕು ಬಳಸಿ ಅದನ್ನು ಎಚ್ಚರಿಕೆಯಿಂದ ಹರಡಿ.
* ಅದರ ಮೇಲೆ ಮತ್ತೆ ಸ್ವಲ್ಪ ಗುಲಾಬಿ ದಳಗಳು ಮತ್ತು ಕತ್ತರಿಸಿದ ಪಿಸ್ತಾ ಸೇರಿಸಿ.
* ಅದನ್ನು ಫ್ರಿಜ್‌ನಲ್ಲಿ 6-7 ಗಂಟೆಗಳ ಕಾಲ ಇರಿಸಿ.
* ನಂತರ ಅದನ್ನು ತೆಗೆದು ತುಂಡುಗಳಾಗಿ ಕತ್ತರಿಸಿ.
* ಇದೀಗ ಗುಲಾಬ್ ಬರ್ಫಿ ತಯಾರಾಗಿದ್ದು, ಮನೆಮಂದಿಗೆ ಹಂಚಿ ಹಬ್ಬವನ್ನಾಚರಿಸಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡಿ ಬೀಟ್‌ರೂಟ್ ಹಲ್ವಾ!