ನೀವು ಚಿಕನ್(Chicken) ಅನ್ನು ಅನೇಕ ವಿಧಾನದಲ್ಲಿ ಮಾಡಿ ಸವಿದಿರಬಹುದು. ಆದರೆ ಚಿಕನ್ ಸೀಕ್ ಕಬಾಬ್(Chicken Seekh Kebab)ನ ರುಚಿಯನ್ನು ಹೆಚ್ಚಿನವರು ನೋಡಿರಲಿಕ್ಕಿಲ್ಲ. ರೆಸ್ಟೊರೆಂಟ್‌ಗಳಲ್ಲಿ ನೀವು ನೋಡಿದ್ದರೂ ಮೆನೆಯಲ್ಲಿಯೇ ಮಾಡುವ ಪ್ರಯತ್ನ ಮಾಡಿರಲಿಕ್ಕಿಲ್ಲ. ತಂದೂರ್ ಅಥವಾ ಚಾರ್ಕೋಲ್ ಗ್ರಿಲ್ ಮೂಲಕ ಮಾಡುವ ಈ ರೆಸಿಪಿಯನ್ನು ಒಮ್ಮೆ ನೀವೂ ಕೂಡಾ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಸಣ್ಣಗೆ ಕಟ್ ಮಾಡಿದ ಕೋಳಿ ಮಾಂಸ – 1 ಕೆ.ಜಿ
ಮೊಟ್ಟೆ – 2
ಜೀರಿಗೆ ಪುಡಿ – 1 ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 4 ಟೀಸ್ಪೂನ್
ಪುಡಿಮಾಡಿದ ಗೋಡಂಬಿ – 4 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಶುಂಠಿ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 4 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 5 ಟೀಸ್ಪೂನ್
ಗರಂ ಮಸಾಲಾ – 1 ಟೀಸ್ಪೂನ್
ಬೆಣ್ಣೆ – ಕಾಯಿಸಲು ಬೇಕಾಗುವಷ್ಟು ಇದನ್ನೂ ಓದಿ: ಚಿಕನ್ ಚೆಟ್ಟಿನಾಡ್ ಮಸಾಲಾ ಸಖತ್ ಟೇಸ್ಟಿ – ಯಾವತ್ತಾದ್ರೂ ಟ್ರೈ ಮಾಡಿದ್ದೀರಾ?
Advertisement
Advertisement
ಮಾಡುವ ವಿಧಾನ:
* ಒಂದು ಬಟ್ಟಲಿಗೆ ಮೊಟ್ಟೆಯನ್ನು ಒಡೆದು ಹಾಕಿ, ಅದಕ್ಕೆ ಜೀರಿಗೆ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ ಮಿಕ್ಸ್ ಮಾಡಿ.
* ಕಟ್ ಮಾಡಿದ ಕೋಳಿ ಮಾಂಸವನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ವಿಶ್ರಾಂತಿ ನೀಡಿ.
* ಈಗ ಗೋಡಂಬಿ, ಶುಂಠಿ, ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಗರಂ ಮಸಾಲಾ ಸೇರಿಸಿ ಮಿಶ್ರಣ ಮಾಡಿ.
* ಈಗ ತಯಾರಾದ ಮಿಶ್ರಣವನ್ನು 10 ಸಮ ಭಾಗಗಳಾಗಿ ಮಾಡಿ.
* ಮಾಂಸ ಬೇಯಿಸಲು ಬಳಸುವ ಮರದ ಅಥವಾ ಲೋಹದ ಕಡ್ಡಿಗಳಿಗೆ ಒಂದೊಂದೇ ಮಾಂಸದ ಮುದ್ದೆಯನ್ನು ರೋಲ್ ಮಾಡಿ. (ಕಡ್ಡಿಗಳ ಎರಡೂ ಅಂಚುಗಳಲ್ಲಿ ಹಿಡಿಯಲು ಸ್ವಲ್ಪ ಜಾಗ ಬಿಡಿ) ಇದನ್ನೂ ಓದಿ: ಒಮ್ಮೆ ಟ್ರೈ ಮಾಡಿ ಮೊಟ್ಟೆಯ ಪಲ್ಯ
Advertisement
* ಮಿಶ್ರಣವನ್ನು ಹಚ್ಚಿದ ಕಡ್ಡಿಗಳನ್ನು ಮಧ್ಯಮ ಉರಿಯಲ್ಲಿರುವ ತಂದೂರ್ ಅಥವಾ ಚಾರ್ಕೋಲ್ ಗ್ರಿಲ್‌ನಲ್ಲಿ ಸುಮಾರು 6 ನಿಮಿಷಗಳ ಕಾಲ ಹುರಿಯಿರಿ. ನಿಮ್ಮ ಬಳಿ ಗ್ರಿಲ್ ಇಲ್ಲ ಎಂದಾದರೆ ಒವನ್‌ನಲ್ಲಿಯೂ ಕಾಯಿಸಬಹುದು.
* ಚಿಕನ್ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುತ್ತಿದ್ದಂತೆ ಅದರ ಮೇಲೆ ಸ್ವಲ್ಪ ಬೆಣ್ಣೆಯನ್ನು ಹಚ್ಚಿ ಸುತ್ತಲೂ ಕಾಯಿಸಿ.
* ಈಗ ಚಿಕನ್ ಸೀಕ್ ಕಬಾಬ್ ತಯಾರಾಗಿದ್ದು, ಅವುಗಳನ್ನು ಕಡ್ಡಿಗಳಿಂದ ಬೇರ್ಪಡಿಸಿ ಬಿಸಿಬಿಸಿಯಾಗಿ ಬಡಿಸಿ.